ಮದುವೆ ಆಗ್ತೀನಿ ಅಂತಾ ನಂಬಿಸಿ.. ಪಾರ್ಥನೆಗೆಂದು ಚರ್ಚ್​ಗೆ ಬರುತ್ತಿದ್ದ ಯುವತಿಯೊಂದಿಗೆ ಪರಾರಿಯಾದ ಪಾದ್ರಿ, ಯಾವೂರಲ್ಲಿ?

|

Updated on: Dec 26, 2020 | 8:51 AM

24 ವರ್ಷದ ಯುವತಿ ಇತ್ತೀಚೆಗೆ ಇಂಜಿನಿಯರಿಂಗ್ ಮುಗಿಸಿದ್ದಳು. ಪದವಿ ನಂತ್ರ ಹೋಂಡಾ ಶೋರೂಮ್‌ನಲ್ಲಿ ಕಂಪ್ಯೂಟರ್ ಅಪರೇಟರ್ ಆಗಿ ಕೆಲ್ಸ ಮಾಡುತ್ತಿದ್ಳು. ಧರ್ಮ ಬೇರೆಯಾದ್ರೂ ಸ್ನೇಹಿತೆ ಜೊತೆ ಭಾನುವಾರ ಚರ್ಚ್​ಗೆ ಹೋಗುತ್ತಿದ್ಳು.

ಮದುವೆ ಆಗ್ತೀನಿ ಅಂತಾ ನಂಬಿಸಿ.. ಪಾರ್ಥನೆಗೆಂದು ಚರ್ಚ್​ಗೆ ಬರುತ್ತಿದ್ದ ಯುವತಿಯೊಂದಿಗೆ ಪರಾರಿಯಾದ ಪಾದ್ರಿ, ಯಾವೂರಲ್ಲಿ?
ಪಾದ್ರಿ ರವಿಕುಮಾರ್
Follow us on

ಬಳ್ಳಾರಿ: ಆತನಿಗೆ 54 ವರ್ಷ ವಯಸ್ಸು, ಚರ್ಚ್​ನಲ್ಲಿ ಪಾದ್ರಿಯಾಗಿದ್ದ. ಧರ್ಮ ಸಂದೇಶ ಕೊಡಬೇಕಿದ್ದ ಈತ ಮಾಡಿದ್ದು ಮಾತ್ರ ಖತರ್ನಾಕ್ ಕೆಲಸ. ಚರ್ಚ್​ಗೆ ಬರುತ್ತಿದ್ದ ಯುವತಿಯರ ಮನಸ್ಸು ಕೆಡಿಸುತ್ತಿದ್ದ ಆರೋಪ ಆತನ ಮೇಲಿದ್ದು, ಇದೀಗ ಯುವತಿಯೊಬ್ಬಳ ಜೊತೆ ಪರಾರಿಯಾಗಿರುವ ಬಗ್ಗೆ ದೂರು ದಾಖಲಾಗಿದೆ.

ಬಳ್ಳಾರಿ ನಗರದ ಭತ್ರಿ ಬಳಿಯ ಚರ್ಚ್​ನಲ್ಲಿ ಪಾದ್ರಿಯಾಗಿ ಕಾರ್ಯನಿರ್ವಹಿಸುತ್ತಿರುವ 54 ವರ್ಷ ವಯಸ್ಸಿನ ರವಿಕುಮಾರ್, 24 ವರ್ಷದ ಯುವತಿ ಜೊತೆ ಎಸ್ಕೇಪ್ ಆಗಿದ್ದಾನೆ ಎಂದು ಆರೋಪ ಕೇಳಿಬಂದಿದೆ.

ಚರ್ಚ್‌ಗೆ ಬಂದ ಯುವತಿಯ ಮನಸ್ಸು ಕೆಡಿಸಿದರಾ ಪಾದ್ರಿ..?
ಅಂದಹಾಗೆ 24 ವರ್ಷದ ಯುವತಿ ಇತ್ತೀಚೆಗೆ ಇಂಜಿನಿಯರಿಂಗ್ ಮುಗಿಸಿದ್ದಳು. ಪದವಿ ನಂತ್ರ ಹೋಂಡಾ ಶೋರೂಮ್‌ನಲ್ಲಿ ಕಂಪ್ಯೂಟರ್ ಅಪರೇಟರ್ ಆಗಿ ಕೆಲ್ಸ ಮಾಡುತ್ತಿದ್ಳು. ಧರ್ಮ ಬೇರೆಯಾದ್ರೂ ಸ್ನೇಹಿತೆ ಜೊತೆ ಭಾನುವಾರ ಚರ್ಚ್​ಗೆ ಹೋಗುತ್ತಿದ್ಳು. ಹೀಗೆ ಚರ್ಚ್​ಗೆ ಬರ್ತಿದ್ದ ಯುವತಿಯೊಂದಿಗೆ ಫಾಸ್ಟರ್ ಸಲುಗೆಯಿಂದ ಇದ್ದು, ಆಕೆಯನ್ನು ಪ್ರೀತಿ ಬಲೆಗೆ ಬೀಳಿಸಿದ ಆರೋಪ ಕೇಳಿಬಂದಿದೆ.

ಮಗಳು ಪ್ರಾರ್ಥನೆಗೆ ಹೋಗುತ್ತಿದ್ದಾಳೆ ಬಿಡು ಅಂತಾ ಪೋಷಕರು ಭಾವಿಸಿದ್ದರು. ಆದ್ರೆ 54 ವರ್ಷದ ಪಾಸ್ಟರ್ ಯುವತಿಯೊಂದಿಗೆ ಲವ್ವಿಡವ್ವಿ ಶುರು ಮಾಡಿದ್ದನಂತೆ. ಮದುವೆ ಆಗ್ತೀನಿ ಅಂತಾ ನಂಬಿಸಿ ಡಿಸೆಂಬರ್ 16 ರಂದು ಯುವತಿ ಜತೆ ಎಸ್ಕೇಪ್ ಆದ ಆರೋಪ ಕೇಳಿಬಂದಿದೆ. ಈ ಬಗ್ಗೆ ಮಹಿಳಾ ಪೊಲೀಸ್ ಠಾಣೆಗೆ ಯುವತಿ ತಾಯಿ ದೂರು ನೀಡಿದ್ದಾರೆ.

ಫಾಸ್ಟರ್ ವಿರುದ್ಧ ಯುವತಿಯ ಪೋಷಕರು ಬಳ್ಳಾರಿ ಎಸ್​ಪಿಗೆ ಕೂಡ ದೂರು ಸಲ್ಲಿಸಿದ್ದಾರೆ. ಜೊತೆಗೆ ಯುವತಿ ಪೋಷಕರು ಗಂಭೀರ ಆರೋಪ ಮಾಡಿದ್ದಾರೆ. ಈ ಫಾಸ್ಟರ್ ರವಿಕುಮಾರ್ ಚರ್ಚ್​ಗೆ ಬರ್ತಿದ್ದ ಯುವತಿಯರನ್ನೆಲ್ಲಾ ಪುಸಲಾಯಿಸಿ ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದಾನೆ. ಈಗಾಗ್ಲೆ ಸಾಕಷ್ಟು ಯುವತಿಯರಿಗೆ ಈ ರೀತಿ ಮಾಡಿದ್ದಾನೆ ಅಂತಾ ಆರೋಪಿಸಿದ್ದಾರೆ.

ಜೊತೆಗೆ ತಮ್ಮ ಮಗಳ ದಾಖಲಾತಿಗಳನ್ನ ಪಡೆದು ಅಕೌಂಟ್​ನಲ್ಲಿದ್ದ ಹಣ ಕೂಡ ಪಡೆದ್ದಿದ್ದಾನೆಂದು ಆರೋಪಿಸುತ್ತಿದ್ದಾರೆ. ಈಗಾಗ್ಲೇ ಆರೋಪಿ ಇಬ್ಬರನ್ನ ಮದುವೆಯಾಗಿರುವುದಾಗಿ ಗೊತ್ತಾಗಿದೆ. ಹೀಗಾಗಿ ನಮ್ಮ ಮಗಳನ್ನ ನಮಗೆ ಒಪ್ಪಿಸಿ, ಫಾಸ್ಟರ್​ನಿಂದ ಮಗಳನ್ನ ಬಚಾವ್ ಮಾಡಿ ಅಂತಾ ಯುವತಿಯರ ಪೋಷಕರು ಮಹಿಳಾ ಪೊಲೀಸ್ ಠಾಣೆಗೆ ಹಾಗೂ ಎಸ್​ಪಿಗೆ ದೂರು ನೀಡಿದ್ದಾರೆ. 

ಈಗಾಗಲೇ ಯುವತಿ ನಾಪತ್ತೆಯಾಗಿ 1 ವಾರ ಕಳೆದಿದೆ ಆದರೂ ಸುಳಿವಿಲ್ಲ. ಮತ್ತೊಂದ್ಕಡೆ ಈ ಘಟನೆ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಧರ್ಮಸಂದೇಶ ನೀಡಬೇಕಾದ ವ್ಯಕ್ತಿ ಈ ರೀತಿ ಮಾಡಿರುವ ಆರೋಪ ಕೇಳಿಬಂದಿರೋದು ಜನರನ್ನ ರೊಚ್ಚಿಗೆಬ್ಬಿಸಿದೆ.