ಆನ್ಲೈನ್ನಲ್ಲಿ ಸಿಗುತ್ತಿದೆ ಬೀಟಾ ವರ್ಷನ್ PUBG; ಇಲ್ಲಿದೆ ಡೌನ್ಲೋಡ್ ಲಿಂಕ್
ಭದ್ರತಾ ಕಾರಣ ನೀಡಿ ಎರಡನೇ ಹಂತದಲ್ಲಿ ಕೇಂದ್ರ ಸರ್ಕಾರ ಪಬ್ಜಿ ಗೇಮ್ ಮೇಲೆ ನಿರ್ಬಂಧ ಹೇರಿತ್ತು. ಇದರಿಂದ ಕೋಟ್ಯಾಂತರ ಪಬ್ಜಿ ಬಳಕೆದಾರರಿಗೆ ಬೇಸರವಾಗಿತ್ತು. ಆದರೆ ಈಗ ಈ ಬೇಸರ ದೂರವಾಗಿದೆ.
ಚೀನಾ ಮೂಲದ ಕಂಪನಿಯ ಸಹಭಾಗಿತ್ವ ಹೊಂದಿರುವ ಕಾರಣಕ್ಕೆ ದಕ್ಷಿಣಾ ಕೊರಿಯಾದ PUBG ಗೇಮ್ ಅನ್ನು ಭಾರತದಲ್ಲಿ ಬ್ಯಾನ್ ಮಾಡಲಾಗಿತ್ತು. ಈಗ ಚೀನಾದ Tecent ಕಂಪೆನಿಯ ಸಹಭಾಗಿತ್ವವನ್ನು ತೊರೆದು ಪಬ್ಜಿ ಭಾರತಕ್ಕೆ ಕಾಲಿಡುತ್ತಿದೆ. ಶೀಘ್ರವೇ ಪ್ಲೇಸ್ಟೋರ್ನಲ್ಲಿ ಈ ಗೇಮ್ ಲಭ್ಯವಿರಲಿದೆ. ಅದಕ್ಕೂ ಮೊದಲೇ ಈ ಗೇಮ್ಅನ್ನು ನೀವು ಇನ್ಸ್ಟಾಲ್ ಮಾಡಿಕೊಳ್ಳಬಹುದು.
ಭದ್ರತಾ ಕಾರಣ ನೀಡಿ ಎರಡನೇ ಹಂತದಲ್ಲಿ ಕೇಂದ್ರ ಸರ್ಕಾರ ಪಬ್ಜಿ ಗೇಮ್ ಮೇಲೆ ನಿರ್ಬಂಧ ಹೇರಿತ್ತು. ಇದರಿಂದ ಕೋಟ್ಯಾಂತರ ಪಬ್ಜಿ ಬಳಕೆದಾರರಿಗೆ ಬೇಸರವಾಗಿತ್ತು. ಕಳೆದ ಕೆಲ ತಿಂಗಳಿಂದ ಪಬ್ಜಿ ವಾಪಾಸಾಗಲಿದೆ ಎನ್ನುವ ವಿಚಾರ ಹರಿದಾಡುತ್ತಲೇ ಇದೆ. ಮೂಲಗಳ ಪ್ರಕಾರ ಜನವರಿ ವೇಳೆಗೆ ಈ ಗೇಮ್ ಭಾರತಕ್ಕೆ ಕಾಲಿಡಲಿದೆಯಂತೆ.
ಪಬ್ಜಿ 1.1 ಬೀಟಾ ವರ್ಷನ್ ಅನ್ನು ಪರಿಚಯಿಸಿದೆ. PUBG BR ಎನ್ನುವ ಹೆಸರನ್ನು ಇದಕ್ಕೆ ಇಡಲಾಗಿದೆ. APK ಆವೃತ್ತಿಯಲ್ಲಿ ಈ ಗೇಮ್ ಲಭ್ಯವಿದೆ. ಹಾಗಾದರೆ ಇದನ್ನು ಡೌನ್ಲೋಡ್ ಮಾಡಿಕೊಳ್ಳೋದು ಹೇಗೆ? ಅದಕ್ಕೆ ಇಲ್ಲಿದೆ ಮಾಹಿತಿ.
- ಮೊದಲು ಈ ಲಿಂಕ್ ಅನ್ನು ಕ್ಲಿಕ್ ಮಾಡಬೇಕು
- ಈ ಫೈಲ್ ಕೇವಲ 675 ಎಂಬಿ ಇದ್ದು ಹೀಗಾಗಿ ನಿಮ್ಮ ಮೊಬೈಲ್ನಲ್ಲಿ ಹೆಚ್ಚು ಸ್ಟೋರೇಜ್ ಬೇಡ
- ಲಿಂಕ್ ಕ್ಲಿಕ್ ಮಾಡಿದ ನಂತರ ಡೌನ್ಲೋಡ್ ಆಯ್ಕೆ ನಿಮಗೆ ಸಿಗಲಿದೆ.
- APK ಫೈಲ್ ಡೌನ್ಲೋಡ್ ಮಾಡಿ
- ನಂತರ ಆ್ಯಪ್ ಇನ್ಸ್ಟಾಲ್ ಮಾಡಿ
- ಇನ್ಸ್ಟಾಲ್ ಆದ ನಂತರ ಗೆಸ್ಟ್ ಆಯ್ಕೆ ಕ್ಲಿಕ್ ಮಾಡಿ.. ನಂತರ ಆಟವಾಡಿ.
ಕಿಲ್ಲರ್ ಗೇಮ್! PubG ಆಡಬೇಡ ಎಂದಿದ್ದಕ್ಕೆ ತಂದೆಯ ಕತ್ತನ್ನೇ ಕತ್ತರಿಸಿದ ಮಗ
Published On - 9:10 am, Sat, 26 December 20