ಬೆಳಗಾವಿ: ಕುಂದಾನಗರಿ ಬೆಳಗಾವಿ ಪಶ್ಚಿಮ ಘಟ್ಟಗಳಿಗೆ ಹೊಂದಿಕೊಂಡಿರುವುದರಿಂದ ಅದರ ನೋಟವೇ ವಿಭಿನ್ನವಾಗಿದೆ. ಅದ್ರಲ್ಲೂ ಮಳೆಗಾಲದಲ್ಲಿಯಂತೂ ಬೆಳಗಾವಿಯ ಕೆಲವೊಂದಿಷ್ಟು ಪ್ರದೇಶಗಳು ಎಲ್ಲರ ಕಣ್ಮನ ಸೆಳೆಯುತ್ತವೆ.
ಎಲ್ಲೇ ಇದ್ದರು ಮಳೆಗಾಲದಲ್ಲಿ ಒಂದು ಬಾರಿ ಬೆಳಗಾವಿಗೆ ಭೇಟಿ ನೀಡಬೇಕೆನ್ನುವಷ್ಟು ಸೆಳೆಯುತ್ತದೆ ಇಲ್ಲಿನ ಹಚ್ಚ ಹಸಿರಿನ ಪರಿಸರ. ಸುಂದರವಾದ ಪರಿಸರದ ನಡುವೆ ಹಕ್ಕಿಗಳ ಚಲನವಲನ, ಒನಪು ವಯ್ಯಾರ ನೋಡುಗರ ಮನಸ್ಸನ್ನ ಇನ್ನಷ್ಟು ಮುದಗೊಳಿಸುತ್ತದೆ. ಬೆಳಗಾವಿ ನಗರದಲ್ಲೇ ಇಂತಹ ಪ್ರದೇಶಗಳಿರೋದು ಇನ್ನೂ ವಿಶೇಷ.
ನಗರ ಪ್ರದೇಶದಲ್ಲಿ ಗಿಡ ಮರಗಳು ಇರೋದೆ ಕಷ್ಟ ಆದ್ರೆ ಕುಂದಾನಗರಿಯಲ್ಲಿ ಎಲ್ಲಿ ನೋಡಿದ್ರೂ ಮರಗಿಡಗಳು, ಉದ್ಯಾನವನಗಳು ಕಾಣಿಸುತ್ತವೆ. ಅದ್ರಲ್ಲೂ ಬೆಳಗಾವಿಯ ಟೀಳಕವಾಡಿಯಲ್ಲಿರುವ ವ್ಯಾಕ್ಸಿನ್ ಡಿಪೋ ಅರಣ್ಯದಂತೆ ಕಂಡು ಬಂದ್ರೂ ಆದು ನಗರದ ಮಧ್ಯಭಾಗದಲ್ಲಿದೆ ಎಂಬುದು ವಿಶೇಷ. ಗಿಡ ಮರಗಳ ಜತೆಗೆ ಇಲ್ಲಿ ಹಕ್ಕಿಗಳ ಸಂಕುಲವೇ ಇದೆ. ಇಪ್ಪತ್ತಕ್ಕೂ ಅಧಿಕ ವಿಭಿನ್ನ ಹಕ್ಕಿಗಳನ್ನು ಕಾಣಬಹುದು ಅದರಲ್ಲಿ ನವಿಲುಗಳೇ ಹೆಚ್ಚಾಗಿ ಕಾಣಸಿಗುತ್ತವೆ.
ನಗರದ ಮಧ್ಯೆ ನವಿಲುಗಳು ಬಿಂದಾಸ್ ಹಾರಾಟ
ಇನ್ನೂ ಈ ಸುಂದರ ಸೊಬಗನ್ನ ನೋಡಲು ನಿತ್ಯವೂ ಜನರು ಕೂಡ ಆಗಮಿಸುತ್ತಿದ್ದರೆ ಇದೇ ಜಾಗದಲ್ಲಿ ವಾಯುವಿಹಾರಕ್ಕೆ ಸ್ಥಳೀಯರು ಬರುತ್ತಿದ್ದು ನವಿಲುಗಳನ್ನ ನೋಡಿ ಖುಷಿಯಿಂದ ವಾಕಿಂಗ್ ಮಾಡುತ್ತಿದ್ದಾರೆ.
ಪೋಟೋಗ್ರಾಫರ್ ಕ್ಯಾಮೆರಾದಲ್ಲಿ ಸೆರೆಯಾದ್ವು ನವಿಲುಗಳು
ವ್ಯಾಕ್ಸಿನ್ ಡಿಪೋದಲ್ಲಿ ಹೆಚ್ಚಾಗಿರುವ ನವಿಲುಗಳನ್ನ ಸದ್ಯ ತಮ್ಮ ಕ್ಯಾಮೆರದಾಲ್ಲಿ ಪಿಕೆ ಬಡಿಗೇರ್ ಸೆರೆ ಹಿಡಿದಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಇದಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಮನುಷ್ಯರನ್ನ ಕಂಡರೇ ಮಾರುದ್ದ ಓಡುವ ನವಿಲುಗಳನ್ನ ಕ್ಯಾಮೆರಾದಲ್ಲಿ ಹಿಡಿದಿದ್ದು ಒಂದೊಂದು ನವಿಲಿನ ಫೋಟೋಗಳು ವಿಭಿನ್ನವಾಗಿವೆ, ಫೋಟೋಗಳನ್ನ ನೋಡುತ್ತಿದ್ದರೆ ಖುಷಿ ಕೊಡುವಷ್ಟು ಚೆನ್ನಾಗಿವೆ ಅಂತಿದ್ದಾರೆ ಸಾರ್ವಜನಿಕರು –ಸಹದೇವ ಮಾನೆ
Published On - 12:53 pm, Mon, 27 July 20