ಪ್ರತಿಷ್ಠಿತ ‘16 ಅಂಗಡಿ Bakery’ ಮಾಲೀಕ ಸೋಂಕಿಗೆ ಕೊನೆಯುಸಿರು
ಬೆಂಗಳೂರು: ಶೇಷಾದ್ರಿಪುರದಲ್ಲಿ 16 ಅಂಗಡಿ ಬೇಕರಿ ಅಂತಾನೇ ಸಿಕ್ಕಾಪಟ್ಟೆ ಫೇಮಸ್ ಆಗಿರುವ ಶ್ರೀನಿವಾಸ ಬ್ರಾಹ್ಮಿನ್ಸ್ ಬೇಕರಿ ಅಂಗಡಿಯ ಮಾಲೀಕರು ಸೋಂಕಿಗೆ ಬಲಿಯಾಗಿದ್ದಾರೆ. ಶೇಷಾದ್ರಿಪುರ ಮುಖ್ಯ ರಸ್ತೆಯಲ್ಲಿದ್ದ ಬೇಕರಿಯ 49 ವರ್ಷದ ಮಾಲೀಕರಿಗೆ ಜುಲೈ 18ರಂದು ಸೋಂಕಿನ ಲಕ್ಷಣಗಳು ಪತ್ತೆಯಾಗಿದ್ದವು. ಆದರೆ, ಕೊವಿಡ್ ರಿಪೋರ್ಟ್ ಬರುವ ಮುನ್ನ ಯಾವ ಆಸ್ಪತ್ರೆಯಲ್ಲೂ ಇವರನ್ನ ದಾಖಲಿಸಿಕೊಂಡಿರಲಿಲ್ಲ. ಬಳಿಕ ಕಾರ್ಪೊರೇಟರ್ ಸಂಪತ್ ಕುಮಾರ್ ಅವರ ನೆರವು ಪಡೆದು ರಾಮಯ್ಯ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ,ಗುಣವಾಗ್ತಿದ್ದ ವ್ಯಕ್ತಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಸದ್ಯ ಅವರ […]
ಬೆಂಗಳೂರು: ಶೇಷಾದ್ರಿಪುರದಲ್ಲಿ 16 ಅಂಗಡಿ ಬೇಕರಿ ಅಂತಾನೇ ಸಿಕ್ಕಾಪಟ್ಟೆ ಫೇಮಸ್ ಆಗಿರುವ ಶ್ರೀನಿವಾಸ ಬ್ರಾಹ್ಮಿನ್ಸ್ ಬೇಕರಿ ಅಂಗಡಿಯ ಮಾಲೀಕರು ಸೋಂಕಿಗೆ ಬಲಿಯಾಗಿದ್ದಾರೆ.
ಶೇಷಾದ್ರಿಪುರ ಮುಖ್ಯ ರಸ್ತೆಯಲ್ಲಿದ್ದ ಬೇಕರಿಯ 49 ವರ್ಷದ ಮಾಲೀಕರಿಗೆ ಜುಲೈ 18ರಂದು ಸೋಂಕಿನ ಲಕ್ಷಣಗಳು ಪತ್ತೆಯಾಗಿದ್ದವು. ಆದರೆ, ಕೊವಿಡ್ ರಿಪೋರ್ಟ್ ಬರುವ ಮುನ್ನ ಯಾವ ಆಸ್ಪತ್ರೆಯಲ್ಲೂ ಇವರನ್ನ ದಾಖಲಿಸಿಕೊಂಡಿರಲಿಲ್ಲ. ಬಳಿಕ ಕಾರ್ಪೊರೇಟರ್ ಸಂಪತ್ ಕುಮಾರ್ ಅವರ ನೆರವು ಪಡೆದು ರಾಮಯ್ಯ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ,ಗುಣವಾಗ್ತಿದ್ದ ವ್ಯಕ್ತಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಸದ್ಯ ಅವರ ಪತ್ನಿಗೂ ಕೂಡ ಕೋವಿಡ್ ಲಕ್ಷಣಗಳಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕಳೆದ 50 ವರ್ಷಗಳಿಂದಲೂ ನಡೆಯುತ್ತಿದ್ದ ಈ ಬೇಕರಿ ತನ್ನ ವೆಜ್ ಪಫ್ಸ್, ಬಿಸ್ಕೆಟ್ಸ್ ಮತ್ತು ಇತರೆ ತಿನಿಸುಗಳಿಗೆ ಭಾರೀ ಫೇಮಸ್ ಅಗಿತ್ತು. ಹೀಗಾಗಿ, ಈ ಬೇಕರಿಗೆ ಯಲಹಂಕ ಹಾಗೂ ನೆಲಮಂಗಲದಷ್ಟು ದೂರ ಏರಿಯಾಗಳಿಂದ ಗ್ರಾಹಕರು ಬರ್ತಿದ್ರು. ಸರತಿ ಸಾಲಿನಲ್ಲಿ ನಿಂತು ತಿನಿಸು ಕೊಳ್ಳುತ್ತಿದ್ರು. ಇದೀಗ, ಇವರ ಬೇಕರಿಯಲ್ಲಿ ತಿಂಡಿ ತಿನಿಸು ತೆಗೆದುಕೊಂಡು ಹೋಗಿ ತಿಂದವರಿಗೆ ಸೋಂಕಿನ ಭೀತಿ ಶುರುವಾಗಿದೆ.
Published On - 1:23 pm, Mon, 27 July 20