ಒಂದು ವರ್ಷ ಪೂರೈಸಿದ BSY ಸರ್ಕಾರದಿಂದ 24 ಶಾಸಕರಿಗೆ ಭರ್ಜರಿ ಗಿಫ್ಟ್!
ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಪಕ್ಷದ 24 ಶಾಸಕರಿಗೆ ಭರ್ಜರಿ ಗಿಫ್ಟ್ ನೀಡಿದೆ. ಹೌದು, ಪಕ್ಷಕ್ಕಾಗಿ ದುಡಿದ ಶಾಸಕರಿಗೆ ನಿಗಮ ಮತ್ತು ಮಂಡಳಿ ಅಧ್ಯಕ್ಷ ಸ್ಥಾನ ಘೋಷಿಸಿದೆ. ಯಾವ ಶಾಸಕರಿಗೆ ಯಾವ ಮಂಡಳಿ, ನಿಗಮ? ಇನ್ನು ಯಾವ ಶಾಸಕರಿಗೆ ಯಾವ ಮಂಡಳಿ ಮತ್ತು ನಿಗಮದ ಅಧ್ಯಕ್ಷ ಸ್ಥಾನ ದೊರೆತಿದೆ ಎಂದು ನೋಡೋದಾದ್ರೆ, 1. ಆರಗ ಜ್ಞಾನೇಂದ್ರ -ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ 2. ಎಂ. ಚಂದ್ರಪ್ಪ -KSRTC ಅಧ್ಯಕ್ಷ 3. ರಾಜು […]
ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಪಕ್ಷದ 24 ಶಾಸಕರಿಗೆ ಭರ್ಜರಿ ಗಿಫ್ಟ್ ನೀಡಿದೆ. ಹೌದು, ಪಕ್ಷಕ್ಕಾಗಿ ದುಡಿದ ಶಾಸಕರಿಗೆ ನಿಗಮ ಮತ್ತು ಮಂಡಳಿ ಅಧ್ಯಕ್ಷ ಸ್ಥಾನ ಘೋಷಿಸಿದೆ.
ಯಾವ ಶಾಸಕರಿಗೆ ಯಾವ ಮಂಡಳಿ, ನಿಗಮ? ಇನ್ನು ಯಾವ ಶಾಸಕರಿಗೆ ಯಾವ ಮಂಡಳಿ ಮತ್ತು ನಿಗಮದ ಅಧ್ಯಕ್ಷ ಸ್ಥಾನ ದೊರೆತಿದೆ ಎಂದು ನೋಡೋದಾದ್ರೆ, 1. ಆರಗ ಜ್ಞಾನೇಂದ್ರ -ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ 2. ಎಂ. ಚಂದ್ರಪ್ಪ -KSRTC ಅಧ್ಯಕ್ಷ 3. ರಾಜು ಗೌಡ -ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ 4. ಎಂ.ಪಿ. ಕುಮಾರಸ್ವಾಮಿ -ಎಂಸಿಎ ಅಧ್ಯಕ್ಷ 5. ಎ.ಎಸ್. ಪಾಟೀಲ್ ನಡಹಳ್ಳಿ -ಆಹಾರ ನಿಗಮ ಅಧ್ಯಕ್ಷ 6. ಹರತಾಳು ಹಾಲಪ್ಪ -MSIL ಅಧ್ಯಕ್ಷ 7. ಮಾಡಾಳು ವಿರೂಪಾಕ್ಷಪ್ಪ -KSDL ಅಧ್ಯಕ್ಷ 8. ಜಿ.ಎಚ್. ತಿಪ್ಪಾರೆಡ್ಡಿ -ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಆಧ್ಯಕ್ಷ 9. ಕೆ. ಶಿವನಗೌಡ ನಾಯಕ್ -KRDCL ಅಧ್ಯಕ್ಷ 10. ಕಳಕಪ್ಪ ಬಂಡಿ -KSIDC ಅಧ್ಯಕ್ಷ 11. ಪರಣ್ಣ ಮುನವಳ್ಳಿ -ರಾಜ್ಯ ಹಣಕಾಸು ಸಂಸ್ಥೆ ಅಧ್ಯಕ್ಷ 12. ಸಿದ್ದು ಸವದಿ -ಕೈಮಗ್ಗ ಅಭಿವೃದ್ಧಿ ನಿಗಮ ಅಧ್ಯಕ್ಷ 13. ಪ್ರೀತಮ್ ಗೌಡ -ಜಂಗಲ್ ಲಾಡ್ಜ್ಸ್ ಮತ್ತು ರೆಸಾರ್ಟ್ ಲಿಮಿಟೆಡ್ ಅಧ್ಯಕ್ಷ 14. ರಾಜ್ಕುಮಾರ್ ಪಾಟೀಲ್ -ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ 15. ದತ್ತಾತ್ರೇಯ ಪಾಟೀಲ್ -ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ 16. ಶಂಕರ ಪಾಟೀಲ್ ಮುನೇನಕೊಪ್ಪ-KUIDFC ಅಧ್ಯಕ್ಷ 17. ಬಿ.ಸಿ.ನಾಗೇಶ -ತೆಂಗಿನ ನಾರಿನ ಅಭಿವೃದ್ಧಿ ನಿಗಮ ಅಧ್ಯಕ್ಷ 18. S.V.ರಾಮಚಂದ್ರ-ವಾಲ್ಮೀಕಿ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮ ಅಧ್ಯಕ್ಷ 19. ನೆಹರು ಓಲೇಕಾರ್-LIDKAR ಅಧ್ಯಕ್ಷ 20. ದುರ್ಯೋಧನ ಐಹೊಳೆ -ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ 21. ಲಾಲಾಜಿ ಮೆಂಡನ್ -ಹಿಂದುಳಿದ ವರ್ಗಗಳ ಆಯೋಗ ಅಧ್ಯಕ್ಷ 22. ಬಸವರಾಜ ದಡೇಸೂಗೂರು -ಸಮಾಜ ಕಲ್ಯಾಣ ಮಂಡಳಿ ಅಧ್ಯಕ್ಷ 23. ಡಾ.ಶಿವರಾಜ್ ಪಾಟೀಲ್ -ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಅಧ್ಯಕ್ಷ 24. ಸಿ.ಎಸ್.ನಿರಂಜನ ಕುಮಾರ್ -ಅರಣ್ಯ ಕೈಗಾರಿಕಾ ನಿಗಮ ಅಧ್ಯಕ್ಷ
Published On - 1:57 pm, Mon, 27 July 20