ಟ್ಯಾಂಕ್ನಲ್ಲಿ ಮಹಿಳೆ ಶವ ಪತ್ತೆ, ಅಪಾರ್ಟ್ಮೆಂಟ್ ಜನ 3 ದಿನದಿಂದ ಅದೇ ನೀರು ಕುಡಿದಿದ್ದಾರೆ..
ಬೆಂಗಳೂರು: ಕುಡಿಯುವ ನೀರಿನ ಟ್ಯಾಂಕ್ಗೆ ಬಿದ್ದು ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಯಲಹಂಕ ನ್ಯೂ ಟೌನ್ ನಾಲ್ಕನೇ ಹಂತದಲ್ಲಿ ನಡೆದಿದೆ. ಗೌರಿ (50) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಯಲಹಂಕ ನ್ಯೂ ಟೌನ್ನ ಅಪಾರ್ಟ್ಮೆಂಟ್ನ ಕುಡಿಯುವ ನೀರಿನ ಟ್ಯಾಂಕ್ಗೆ ಬಿದ್ದು ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶುಕ್ರವಾರದಂದದು ಮಹಿಳೆ ಮನೆಯಿಂದ ಮಿಸ್ಸಿಂಗ್ ಆಗಿದ್ದರು. ಬಳಿಕ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದರು. ಆದರೆ ನಿನ್ನೆ ಮಹಿಳೆಯ ಶವ ಕುಡಿಯುವ ನೀರಿನ ಟ್ಯಾಂಕ್ ನಲ್ಲಿ ಪತ್ತೆಯಾಗಿದೆ. ಹಣಕಾಸಿನ ವಿಚಾರವಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ […]
ಬೆಂಗಳೂರು: ಕುಡಿಯುವ ನೀರಿನ ಟ್ಯಾಂಕ್ಗೆ ಬಿದ್ದು ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಯಲಹಂಕ ನ್ಯೂ ಟೌನ್ ನಾಲ್ಕನೇ ಹಂತದಲ್ಲಿ ನಡೆದಿದೆ. ಗೌರಿ (50) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.
ಯಲಹಂಕ ನ್ಯೂ ಟೌನ್ನ ಅಪಾರ್ಟ್ಮೆಂಟ್ನ ಕುಡಿಯುವ ನೀರಿನ ಟ್ಯಾಂಕ್ಗೆ ಬಿದ್ದು ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶುಕ್ರವಾರದಂದದು ಮಹಿಳೆ ಮನೆಯಿಂದ ಮಿಸ್ಸಿಂಗ್ ಆಗಿದ್ದರು.
ಬಳಿಕ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದರು. ಆದರೆ ನಿನ್ನೆ ಮಹಿಳೆಯ ಶವ ಕುಡಿಯುವ ನೀರಿನ ಟ್ಯಾಂಕ್ ನಲ್ಲಿ ಪತ್ತೆಯಾಗಿದೆ. ಹಣಕಾಸಿನ ವಿಚಾರವಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಅಪಾರ್ಟ್ಮೆಂಟ್ ನಿವಾಸಿಗಳು 3 ದಿನದಿಂದ ಅದೇ ನೀರು ಕುಡಿದಿದ್ದಾರೆ.. ಮಹಿಳೆಯ ಶವ ಪತ್ತೆಯಾದ ಅಪಾರ್ಟ್ಮೆಂಟ್ನಲ್ಲಿ ಸುಮಾರು 60ಕ್ಕೂ ಅಧಿಕ ಮಂದಿ ವಾಸಿಸುತ್ತಿದ್ದಾರೆ. ಕಳೆದ ಮೂರು ದಿನದಿಂದ ಅಪಾರ್ಟ್ಮೆಂಟ್ ನಿವಾಸಿಗಳು ಅದೇ ನೀರನ್ನು ಕುಡಿದಿದ್ದಾರೆ. ಸ್ನಾನಕ್ಕೆ, ಕುಡಿಯುವುದಕ್ಕೆ ಮನೆ ಕೆಲಸಕ್ಕೆ ಎಲ್ಲಾದಕ್ಕೂ ಅದೇ ನೀರು ಬಳಸಿದ್ದಾರೆ.
ಇದೀಗ ಟ್ಯಾಂಕ್ನಲ್ಲಿ ಶವ ಪತ್ತೆಯಾದ ಬೆನ್ನಲ್ಲೆ ಅಪಾರ್ಟ್ಮೆಂಟ್ ನಿವಾಸಿಗಳು ಆತಂಕದಲ್ಲಿದ್ದಾರೆ. ಮೃತ ದೇಹ ಹೊರತೆಗೆದು ಮರಣೊತ್ತರ ಪರೀಕ್ಷೆಗೆ ಕಳಿಸಲಾಗಿದೆ. ಮಹಿಳೆಗೆ ಕರೊನಾ ಇದ್ಯಾ ಇಲ್ವಾ ಎಂಬುದರ ಬಗ್ಗೆ ತಪಾಸಣೆ ಮಾಡಲಾಗುತ್ತಿದೆ. ಈ ಸಂಬಂಧ ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Published On - 12:43 pm, Mon, 27 July 20