
ಬೆಂಗಳೂರು: ಬ್ರೇಕ್ ವಿಫಲವಾಗಿ ಕ್ರೇನ್ ಹರಿದು ಪಾದಚಾರಿ ಮುನಿಯಪ್ಪ ಸ್ಥಳದಲ್ಲೇ ಸಾವಿಗೀಡಾಗಿರುವ ಘಟನೆ ನಗರದ ಸುಂಕದಕಟ್ಟೆ ಬಳಿ ಸಂಭವಿಸಿದೆ.
ಮೊದಲಿಗೆ ಕ್ರೇನ್ ಬ್ರೇಕ್ ವಿಫಲವಾಗಿ ಸರಣಿ ಅಪಘಾತವಾಗಿದೆ. ಪಾದಚಾರಿ ಮೇಲೆ ಹರಿದು ನಂತರ ಆಟೋ ಹಾಗೂ ಕಾರಿಗೆ ಕ್ರೇನ್ ಡಿಕ್ಕಿಯೊಡೆದಿದೆ. ಆಟೋ ಸಂಪೂರ್ಣ ಜಖಂ ಆಗಿದ್ದು, ಇಬ್ಬರಿಗೆ ಗಾಯಗಳಾಗಿದೆ. ಅಪಘಾತದ ನಂತರ ಕ್ರೇನ್ ಬಿಟ್ಟು ಚಾಲಕ ಪರಾರಿಯಾಗಿದ್ದು, ಘಟನಾ ಸ್ಥಳಕ್ಕೆ ಕಾಮಾಕ್ಷಿಪಾಳ್ಯ ಸಂಚಾರಿ ಠಾಣಾ ಪೊಲೀಸರು ಭೇಟಿ ನೀಡಿದ್ದಾರೆ.