ತೋರಣದಿಂದ ಹಿಡಿದು.. ದಿನದುದ್ದಕ್ಕೂ ಚೀನಾ ಪ್ಲಾಸ್ಟಿಕ್ ವಸ್ತುಗಳೇ ಬೇಕು..!
ಚೀನಾ ಜಗತ್ತಿಗೆಲ್ಲಾ ಪುಕ್ಸಟ್ಟೆ ಕೊರೊನಾ ಹಂಚಿತು.. ಆದ್ರೂ, ಜನ ಚೀನಾ ಉತ್ಪನ್ನಗಳ ಮೇಲೆ ಜೋತು ಬೀಳ್ತಾನೇ ಇದ್ದಾರೆ. ಒಂದಿಷ್ಟು ಜನ ಅದೆಷ್ಟು ಕಾಲದಿಂದ ಚೀನಾ ವಸ್ತುಗಳು ಬೇಡವೇ ಬೇಡ ಅಂದ್ರೂ ಕೇಳದೆ ಅದರ ಬಾಲ ಹಿಡಿದ ಜನ ಅದರ ವ್ಯಸನಕ್ಕೆ ಬಿದ್ದಿದ್ದಾರೆ. ಅಗ್ಗದ ವಸ್ತು ನಾಲ್ಕೇ ದಿನಕ್ಕೆ ಕಣ್ಣು ಮುಚ್ಚಿದ್ರೂ ಪರವಾಗಿಲ್ಲ ಅಂತ ಚೀನೀ ವಸ್ತುಗಳಿಗೆ ಜೈ ಅಂತಾರೆ ಜನ. ಇಲ್ಲಿ ನಿತ್ಯ ಬಳಕೆ ವಸ್ತುಗಳಿಗೆ ಚೀನೀ ಉತ್ಪನ್ನ ಬೇಕು. ದೀಪಾವಳಿಗೆ ಚೀನೀ ಹಣತೆ ಬೇಕು, ಹೋಳಿ […]
ಚೀನಾ ಜಗತ್ತಿಗೆಲ್ಲಾ ಪುಕ್ಸಟ್ಟೆ ಕೊರೊನಾ ಹಂಚಿತು.. ಆದ್ರೂ, ಜನ ಚೀನಾ ಉತ್ಪನ್ನಗಳ ಮೇಲೆ ಜೋತು ಬೀಳ್ತಾನೇ ಇದ್ದಾರೆ. ಒಂದಿಷ್ಟು ಜನ ಅದೆಷ್ಟು ಕಾಲದಿಂದ ಚೀನಾ ವಸ್ತುಗಳು ಬೇಡವೇ ಬೇಡ ಅಂದ್ರೂ ಕೇಳದೆ ಅದರ ಬಾಲ ಹಿಡಿದ ಜನ ಅದರ ವ್ಯಸನಕ್ಕೆ ಬಿದ್ದಿದ್ದಾರೆ. ಅಗ್ಗದ ವಸ್ತು ನಾಲ್ಕೇ ದಿನಕ್ಕೆ ಕಣ್ಣು ಮುಚ್ಚಿದ್ರೂ ಪರವಾಗಿಲ್ಲ ಅಂತ ಚೀನೀ ವಸ್ತುಗಳಿಗೆ ಜೈ ಅಂತಾರೆ ಜನ.
ಇಲ್ಲಿ ನಿತ್ಯ ಬಳಕೆ ವಸ್ತುಗಳಿಗೆ ಚೀನೀ ಉತ್ಪನ್ನ ಬೇಕು. ದೀಪಾವಳಿಗೆ ಚೀನೀ ಹಣತೆ ಬೇಕು, ಹೋಳಿ ಹಬ್ಬಕ್ಕೆ ಚೀನೀ ಕಲರ್ ಬೇಕು, ಅಷ್ಟೇ ಯಾಕೆ ತೋರಣಕ್ಕೆ ಚೀನೀ ಪ್ಲಾಸ್ಟಿಕ್ ಬೇಕು, ಕ್ರಿಸ್ಮಸ್ ಹಬ್ಬಕ್ಕೆ ಚೀನೀ ಕ್ರಿಸ್ಮಸ್ ಟ್ರೀ ಬೇಕೇ ಬೇಕು..! ಅಷ್ಟೇ ಯಾಕೆ ಇನ್ನೇನೋ ಇದೆ..!
ಎಲ್ಲಾ ಐಟಂ ಚೀನಾದ್ದೇ ಬೇಕು ಅನ್ನೋ ಜನರಿಗೆ ಬುದ್ದಿ ಬರಬೇಕಿದ್ರೆ ಅದೊಂದು ಹೆಮ್ಮಾರಿ ಕೊರೊನಾ ಬರಬೇಕಾಯ್ತು. ಕೊರೊನಾ ಬಂದ ಬಳಿಕ ಎಲ್ಲೆಡೆ ಚೀನಾ ವಿರುದ್ಧ ಅಸಮಾಧಾನದ ಮಾತುಗಳು ಕೇಳಿ ಬರ್ತಿವೆ. ಎಲ್ಲೆಡೆ ಚೀನಾದ ವಸ್ತುಗಳಿಗೆ ನಿಷೇಧ ಹೇರಬೇಕು ಅನ್ನೋ ಮಾತುಗಳು ಕೇಳಿ ಬರ್ತಿವೆ. ಇದು ಜಸ್ಟ್ ಭಾರತದ ಪ್ರಶ್ನೆ ಅಲ್ಲಾ, ಇಡೀ ಜಗತ್ತಿನ ಪಾಲಿಗೆ ವಿಲನ್ ಆಗಿದೆ ಚೀನಾ..! ಭಾರತ ಕೂಡಾ ಚೀನಾ ವಸ್ತುಗಳನ್ನು ಕೊಳ್ಳುವುದನ್ನು ನಿಷೇದಿಸಿ ಆತ್ಮ ನಿರ್ಭರ್ ಭಾರತ್ ಅಭಿಯಾನಕ್ಕೆ ಕರೆ ನೀಡಿದೆ.
ದೇಸಿ-ವಿದೇಶಿ ವಸ್ತುಗಳಿಗೆ ಟ್ಯಾಗ್..! ಆತ್ಮ್ ನಿರ್ಭರ್ ಅಭಿಯಾನಕ್ಕೆ ಜನ ಎಷ್ಟು ಕಿವಿಗೊಟ್ಟರೋ ಬಿಟ್ಟರೋ ಗೊತ್ತಿಲ್ಲ. ಆದ್ರೆ ಸಿಂಪಲ್ ಆಗಿ ಒಂದು ವಿಷಯ ತಿಳಿಸ್ತೀವಿ ನೋಡಿ. ಪುಣೆಯ ಸಹಕಾರಿ ಸಂಘಧ ಮಳಿಗೆಯೊಂದು ಮಾತ್ರ ತಾನು ಆತ್ಮ್ ನಿರ್ಭರ್ ಭಾರತ್ ಅಭಿಯಾನಕ್ಕೆ ಸಪೋರ್ಟ್ ಮಾಡ್ತೀನಿ ಅಂದಿದೆ. ಅದಾಗಲೇ ತನ್ನ ಪಾಲಿನ ಕೆಲಸ ಶುರು ಮಾಡಿಕೊಂಡು ಬಿಟ್ಟಿದೆ. ಅದು ತನ್ನ ಸ್ಟೋರಿನಲ್ಲಿರುವ ವಸ್ತುಗಳನ್ನು ದೇಸಿ ಉತ್ಪನ್ನಗಳು ಮತ್ತು ವಿದೇಶಿ ಉತ್ಪನ್ನಗಳು ಅಂತ ಬೇರ್ಪಡಿಸಿ ಸೇಲ್ ಮಾಡ್ತಿದೆ.
ಈ ಸ್ಟೋರ್ ಆ ಉತ್ಪನ್ನಗಳ ಬಗ್ಗೆ ಅರಿವು ಮೂಡಿಸಲು ಅದಕ್ಕೆ ಪ್ರತ್ಯೇಕ ಲೇಬಲ್ ಬೇರೆ ಹಾಕಿದೆ. ಅದಕ್ಕೆ ಪ್ರತ್ಯೇಕ ಟ್ಯಾಗ್ ಹಾಕಿ ಮಾರಾಟಕ್ಕಿಟ್ಟಿದೆ. ಗ್ರಾಹಕ್ ಪೆತ್ ಹೆಸರಿನ ಈ ಸ್ಟೋರ್ ಈಗ ಸಖತ್ ಸುದ್ದಿಯಲ್ಲಿದೆ. ಸ್ವದೇಶಿ ವಸ್ತುಗಳ ಬಳಕೆ ಅಂದ್ರೆ ಸ್ವಾವಲಂಬಿ ಭಾರತದ ಸ್ಥಾಪನೆ ಅಂತ ಅದು ಹೇಳಿಕೊಂಡಿದೆ. ಗ್ರಾಹಕ್ ಪೆತ್ ಇಟ್ಟಿದ್ದು ಸಣ್ಣ ಹೆಜ್ಜೆಯೇ ಸರಿ. ಆದ್ರೆ, ಅದು ಮುಂದೆ ಎಂತಹ ಅಭಿಯಾನಕ್ಕೆ ಹಾದಿ ಮಾಡಿಕೊಡುತ್ತಾ ಯಾರಿಗೊತ್ತು..? -ರಾಜೇಶ್ ಶೆಟ್ಟಿ