ಗಾರ್ಮೆಂಟ್ಸ್​ಗೆ ಹೋದ್ರೆ ಕೊರೊನಾ ಬರುತ್ತೆ ಎಂದು ಮಹಿಳೆಯರ ಮೇಲೆ ಹಲ್ಲೆ! ಎಲ್ಲಿ?

|

Updated on: May 11, 2020 | 1:44 PM

ತುಮಕೂರು: ಗಾರ್ಮೆಂಟ್ಸ್‌ ಕೆಲಸಕ್ಕೆ ಹೋದರೆ ಕೊರೊನಾ ಬರುತ್ತದೆ ಎಂದು ಮಹಿಳೆಯರ ಮೇಲೆ ಹಲ್ಲೆ ಮಾಡಿರುವ ಘಟನೆ ಕುಣಿಗಲ್ ತಾಲೂಕಿನ ರಂಗೇಗೌಡನ ಪಾಳ್ಯದಲ್ಲಿ ನಡೆದಿದೆ. ಗಾರ್ಮೆಂಟ್ಸ್‌ ಕೆಲಸಕ್ಕೆ ಹೋಗುತ್ತಿದ್ದ ಬಸ್​ ತಡೆದು ರಂಗೇಗೌಡನ ಪಾಳ್ಯದ ನಿವಾಸಿ ರಘು, ತಿಮ್ಮಯ್ಯ ಎಂಬುವರು ಹಲ್ಲೆ ಮಾಡಿದ್ದಾರೆ. ಲಾಕ್​ಡೌನ್ ಸಡಿಲಿಕೆ ಬಳಿಕ ತುಮಕೂರು ಜಿಲ್ಲಾಧಿಕಾರಿ ಅನುಮತಿ ಪಡೆದು ಬೆಂಗಳೂರು ಬಳಿಯ ಮಾಕಳಿ ಸಮೀಪದ ಗಾರ್ಮೆಂಟ್ಸ್‌ ಕೆಲಸಕ್ಕೆ ಹೋಗುತ್ತಿದ್ದರು. ಬಸ್​ನಲ್ಲಿ 15 ಜನ ಪ್ರಯಣ ಮಾಡುತ್ತಿದ್ದರು. ಈ ವೇಳೆ ಕೆಲಸಕ್ಕೆ ಹೋಗಬೇಡಿ ಎಂದು ಗಲಾಟೆ […]

ಗಾರ್ಮೆಂಟ್ಸ್​ಗೆ ಹೋದ್ರೆ ಕೊರೊನಾ ಬರುತ್ತೆ ಎಂದು ಮಹಿಳೆಯರ ಮೇಲೆ ಹಲ್ಲೆ! ಎಲ್ಲಿ?
Follow us on

ತುಮಕೂರು: ಗಾರ್ಮೆಂಟ್ಸ್‌ ಕೆಲಸಕ್ಕೆ ಹೋದರೆ ಕೊರೊನಾ ಬರುತ್ತದೆ ಎಂದು ಮಹಿಳೆಯರ ಮೇಲೆ ಹಲ್ಲೆ ಮಾಡಿರುವ ಘಟನೆ ಕುಣಿಗಲ್ ತಾಲೂಕಿನ ರಂಗೇಗೌಡನ ಪಾಳ್ಯದಲ್ಲಿ ನಡೆದಿದೆ. ಗಾರ್ಮೆಂಟ್ಸ್‌ ಕೆಲಸಕ್ಕೆ ಹೋಗುತ್ತಿದ್ದ ಬಸ್​ ತಡೆದು ರಂಗೇಗೌಡನ ಪಾಳ್ಯದ ನಿವಾಸಿ ರಘು, ತಿಮ್ಮಯ್ಯ ಎಂಬುವರು ಹಲ್ಲೆ ಮಾಡಿದ್ದಾರೆ.

ಲಾಕ್​ಡೌನ್ ಸಡಿಲಿಕೆ ಬಳಿಕ ತುಮಕೂರು ಜಿಲ್ಲಾಧಿಕಾರಿ ಅನುಮತಿ ಪಡೆದು ಬೆಂಗಳೂರು ಬಳಿಯ ಮಾಕಳಿ ಸಮೀಪದ ಗಾರ್ಮೆಂಟ್ಸ್‌ ಕೆಲಸಕ್ಕೆ ಹೋಗುತ್ತಿದ್ದರು. ಬಸ್​ನಲ್ಲಿ 15 ಜನ ಪ್ರಯಣ ಮಾಡುತ್ತಿದ್ದರು. ಈ ವೇಳೆ ಕೆಲಸಕ್ಕೆ ಹೋಗಬೇಡಿ ಎಂದು ಗಲಾಟೆ ಮಾಡಿದ್ದಾರೆ. ಕೆಲಸಕ್ಕೆ ಹೋಗಿ ಬಂದರೆ ಗ್ರಾಮಕ್ಕೆ ಕೊರೊನಾ ಬರುತ್ತೆ ಎಂದು ನಾಗರತ್ನ, ಮುನಿಯಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ.