ಕಲಬುರಗಿ: ಕೊರೊನಾ ನಡುವೆಯೂ ದೈಹಿಕ ಅಂತರ ಮರೆತು ಪಿಎಸ್‌ಐ ಅದ್ಧೂರಿಯಾಗಿ ಜನ್ಮದಿನ ಆಚರಣೆ ಮಾಡಿರುವ ಘಟನೆ ಜೇವರ್ಗಿ ತಾಲೂಕಿನ ನೆಲೋಗಿಯಲ್ಲಿ ನಡೆದಿದೆ. ನೆಲೋಗಿ ಠಾಣೆ PSI ಮಲ್ಲಣ್ಣ ಯಲಗೊಂಡ ಅವರ ಹುಟ್ಟುಹಬ್ಬವನ್ನು ಅಭಿಮಾನಿಗಳೆಲ್ಲ ಸೇರಿ ಅದ್ಧೂರಿಯಾಗಿ ಆಚರಿಸಿದ್ದಾರೆ.
ಜೂನ್ 13ರಂದು ಮಲ್ಲಣ್ಣ ಯಲಗೊಂಡ ಅವರು ಜನ್ಮದಿನಾಚರಣೆ ಇತ್ತು. ಹೀಗಾಗಿ ಪಿಎಸ್‌ಐ ಮಲ್ಲಣ್ಣಗೆ ಅಭಿಮಾನಿಗಳು ಹಾಲಿನ ಅಭಿಷೇಕ ಮಾಡಿದ್ದಾರೆ. ಈ ವೇಳೆ ದೈಹಿಕ ಅಂತರ ಮರೆತಿದ್ದಾರೆ. ಮಾಸ್ಕ್ ಧರಿಸದೆ ಜನರು ನಿರ್ಲಕ್ಷ್ಯವಹಿಸಿದ್ದಾರೆ. ಸರ್ಕಾರದ ಆದೇಶವನ್ನು ಉಲ್ಲಂಘಿಸಿದ್ದಾರೆ. ಕೊರೊನಾ ಪಾರಿಯರ್ರ ಬೇಜವಾಬ್ದಾರಿತನಕ್ಕೆ ಟೀಕೆಗಳು ಕೇಳಿ ಬಂದಿವೆ.
Published On - 7:18 am, Mon, 15 June 20