Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ಕಂಟ್ರೋಲ್​​ಗೆ ಮತ್ತೆ ಪ್ರಯೋಗಿಸ್ತಾರಾ ಲಾಕ್​ಡೌನ್ ಬ್ರಹ್ಮಾಸ್ತ್ರ? ಸಿಎಂಗಳ ಜೊತೆ ಮೋದಿ ಮೀಟಿಂಗ್

ದೆಹಲಿ: ದೇಶದಲ್ಲಿ ವೈರಿಯನ್ನ ಕಟ್ಟಿ ಹಾಕೋಕೆ ಹಾಕಿದ್ದ ಲಾಕ್​ಡೌನ್ ಓಪನ್ ಆಗಿದೆ. ಭಾರತದಲ್ಲಿ ಫ್ರೀಡೌನ್ ಮಾಡಿದ್ಮೇಲಂತೂ ವಿಷವ್ಯೂಹ ವಿಸ್ಫೋಟಗೊಳ್ತಿದೆ. ಸೋಂಕಿನ ಸುನಾಮಿ ಅಪ್ಪಳಿಸ್ತಿರೋ ಏಟಿಗೆ ಎಲ್ರೂ ಅದುರಿ ಹೋಗಿದ್ದಾರೆ. ಈ ಹೊತ್ತಲ್ಲೇ ಪ್ರಧಾನಿ ಮೋದಿ ನಡೆಸ್ತಿರೋ ಆ ಒಂದು ಮೀಟಿಂಗ್​ ಕುತೂಹಲದ ಜೊತೆಗೆ ದೇಶದಲ್ಲಿ ಏನಾಗುತ್ತೋ ಏನೋ ಅನ್ನೋ ಟೆನ್ಷನ್​ಗೆ ಕಾರಣವಾಗಿದೆ. ನಾಳೆ ಎಲ್ಲಾ ಸಿಎಂಗಳ ಜೊತೆ ಮೋದಿ ಮೀಟಿಂಗ್! ಯೆಸ್.. ದೇಶಕ್ಕೆ ಜಡಿದಿದ್ದ ಲಾಕ್ ಅನ್ಲಾಕ್ ಮಾಡಿದ ಹೊತ್ತಿನಲ್ಲೇ ಕೊರೊನಾ ಕೇಸ್​ಗಳು ಮೂರು ಲಕ್ಷ ಮೈಲಿಗಲ್ಲು […]

ಕೊರೊನಾ ಕಂಟ್ರೋಲ್​​ಗೆ ಮತ್ತೆ ಪ್ರಯೋಗಿಸ್ತಾರಾ ಲಾಕ್​ಡೌನ್ ಬ್ರಹ್ಮಾಸ್ತ್ರ? ಸಿಎಂಗಳ ಜೊತೆ ಮೋದಿ ಮೀಟಿಂಗ್
Follow us
ಆಯೇಷಾ ಬಾನು
|

Updated on:Jun 15, 2020 | 11:16 AM

ದೆಹಲಿ: ದೇಶದಲ್ಲಿ ವೈರಿಯನ್ನ ಕಟ್ಟಿ ಹಾಕೋಕೆ ಹಾಕಿದ್ದ ಲಾಕ್​ಡೌನ್ ಓಪನ್ ಆಗಿದೆ. ಭಾರತದಲ್ಲಿ ಫ್ರೀಡೌನ್ ಮಾಡಿದ್ಮೇಲಂತೂ ವಿಷವ್ಯೂಹ ವಿಸ್ಫೋಟಗೊಳ್ತಿದೆ. ಸೋಂಕಿನ ಸುನಾಮಿ ಅಪ್ಪಳಿಸ್ತಿರೋ ಏಟಿಗೆ ಎಲ್ರೂ ಅದುರಿ ಹೋಗಿದ್ದಾರೆ. ಈ ಹೊತ್ತಲ್ಲೇ ಪ್ರಧಾನಿ ಮೋದಿ ನಡೆಸ್ತಿರೋ ಆ ಒಂದು ಮೀಟಿಂಗ್​ ಕುತೂಹಲದ ಜೊತೆಗೆ ದೇಶದಲ್ಲಿ ಏನಾಗುತ್ತೋ ಏನೋ ಅನ್ನೋ ಟೆನ್ಷನ್​ಗೆ ಕಾರಣವಾಗಿದೆ.

ನಾಳೆ ಎಲ್ಲಾ ಸಿಎಂಗಳ ಜೊತೆ ಮೋದಿ ಮೀಟಿಂಗ್! ಯೆಸ್.. ದೇಶಕ್ಕೆ ಜಡಿದಿದ್ದ ಲಾಕ್ ಅನ್ಲಾಕ್ ಮಾಡಿದ ಹೊತ್ತಿನಲ್ಲೇ ಕೊರೊನಾ ಕೇಸ್​ಗಳು ಮೂರು ಲಕ್ಷ ಮೈಲಿಗಲ್ಲು ಕ್ರಾಸ್ ಮಾಡಿದೆ. ಕೊರೊನಾ ವೈರಸ್ ಬಿಕ್ಕಟ್ಟು ತೀವ್ರವಾಗ್ತಿರೋ ಬೆನ್ನಲ್ಲೇ ಪ್ರಧಾನಿ ಮೋದಿ ನಾಳೆಯಿಂದ ಎಲ್ಲಾ ರಾಜ್ಯಗಳ ಸಿಎಂಗಳ ಜೊತೆ ಸಭೆ ನಡೆಸಲಿದ್ದಾರೆ.

ಸಿಎಂಗಳ ಜತೆ ಮೋದಿ ಸಭೆ! ನಾಳೆ ಕೇಂದ್ರಾಡಳಿತ ಪ್ರದೇಶಗಳ ಸಿಎಂಗಳ ಜೊತೆ ಹಾಗೂ ಜೂನ್ 17ರಂದು ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ ಸಿಎಂಗಳ ಜೊತೆ ಚರ್ಚಿಸಲಿದ್ದಾರೆ. ವಿಡಿಯೋ ಕಾನ್ಫರೆನ್ಸ್ ಮೂಲಕ ರಾಜ್ಯಗಳಲ್ಲಿರೋ ಕೊರೊನಾ ಸ್ಥಿತಿಗತಿ ಬಗ್ಗೆ ಇಂಚಿಂಚು ಮಾಹಿತಿ ಕಲೆ ಹಾಕಲಿದ್ದಾರೆ. ಈಗಾಗ್ಲೇ, ಭಾರತದಲ್ಲಿ ಕೊರೊನಾ ವ್ಯಾಪಕವಾಗಿ ಹರಡ್ತಿರೋದ್ರಿಂದ ಹಿರಿಯ ಸಚಿವರು, ಅಧಿಕಾರಿಗಳ ಜೊತೆ ಮೋದಿ ಚರ್ಚಿಸಿದ್ದಾರೆ.

ಇದೀಗ ಇಡೀ ದೇಶವೇ ಪಿಎಂ ಮೋದಿ ಮೀಟಿಂಗ್​ನತ್ತ ಕಣ್ಣರಳಿಸಿ ನೋಡ್ತಿದೆ. ಯಾಕಂದ್ರೆ, ಕೊರೊನಾ ಸಂಖ್ಯೆ ಹೆಚ್ಚುತ್ತಿರುವಾಗ್ಲೇ ಲಾಕ್‌ಡೌನ್‌ ಮತ್ತೆ ಹೇರ್ತಾರಾ ಅನ್ನೋ ವದಂತಿ ಕೂಡಾ ಜೋರಾಗಿ ಹಬ್ಬುತ್ತಿದೆ. ಹೀಗಾಗಿ, ಎಲ್ಲದಕ್ಕೂ ತೆರೆ ಎಳೆಯೋದು ನಾಳಿನ ಮೋದಿ ಮೀಟಿಂಗ್‌. ಇನ್ನೊಂದು ಶಾಕಿಂಗ್ ವಿಷ್ಯ ಜೂನ್ ಅಂತ್ಯ ಅಥವಾ ಜುಲೈ ಆರಂಭದಲ್ಲಿ ಕೊರೊನಾ 2ನೇ ಅಲೆ ಅಪ್ಪಳಿಸೋ ಆತಂಕವೂ ಇದೆ. ಹೀಗಾಗಿ ಹೊಸ ಸ್ಟ್ರಿಕ್ಟ್ ರೂಲ್ಸ್ ಏನಾದ್ರೂ ಜಾರಿಗೆ ತರ್ತಾರಾ? ಶಾಲೆಗಳನ್ನ ತೆರೆಯೋಕೆ ಅನುಮತಿ ನೀಡ್ತಾರಾ? ನೀಡಲ್ವಾ? ಅನ್ನೋದೆ ಸದ್ಯಕ್ಕಿರೋ ಬಿಗ್ ಸಸ್ಪೆನ್ಸ್.

ಕೊರೊನಾ ಕಂಟ್ರೋಲ್​ಗೆ ಸರ್ವಪಕ್ಷ ಸಭೆ ಕರೆದ ಅಮಿತ್ ಶಾ! ಇನ್ನು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊರೊನಾ ಆರ್ಭಟಿಸ್ತಿದೆ. ಇದರ ನಡುವೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ಸರ್ವ ಪಕ್ಷ ಸಭ ಕರೆದಿದ್ದಾರೆ. ದೆಹಲಿಯಲ್ಲಿನ ಕೊರೊನಾ ಪರಿಸ್ಥಿತಿ ಕುರಿತು ಚರ್ಚಿಸಲಿದ್ದು, ಸಭೆಗೆ ಕಾಂಗ್ರೆಸ್, ಎಎಪಿ ಮತ್ತು ಬಿಎಸ್​​ಪಿ ಪಕ್ಷಗಳ ಮುಖಂಡರಿಗೆ ಆಹ್ವಾನ ನೀಡಲಾಗಿದೆ. ಕೊರೊನಾ ಹಾವಳಿ ತಡೆ ಹಾಗೂ ಆಸ್ಪತ್ರೆಗಳಲ್ಲಿ ಚಿಕಿತ್ಸಾ ವೇಗ ಹೆಚ್ಚಳ, ಕೊರೊನಾ ರೋಗಿಗಳಿಗೆ ವಿಶೇಷ ಆಸ್ಪತ್ರೆ ಕಟ್ಟುವ ಕುರಿತು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗುತ್ತೆ.

ಒಟ್ನಲ್ಲಿ ದೇಶದಲ್ಲಿ ಕ್ರೂರಿ ನರ್ತನ ಊಹೆಗೂ ನಿಲುಕದಂತೆ ವ್ಯಾಪಿಸ್ತಿದೆ. ಕ್ಷಣಕೊಬ್ಬರನ್ನ ಕೊರೊನಾ ತೆಕ್ಕೆಗೆ ಬಾಚಿಕೊಳ್ತಿದೆ. ಫ್ರೀಡೌನ್ ನಡುವೆ ಕ್ರೂರಿ ಅಟ್ಟಹಾಸ ಮೆರೀತಿರೋದು ಕೇಂದ್ರದ ನಿದ್ದೆಗೆಡಿಸಿದೆ. ಇದರ ನಡುವೆ ನಾಳೆ ಎಲ್ಲಾ ರಾಜ್ಯಗಳ ಸಿಎಂ ಜೊತೆ ಮೋದಿ ನಡೆಸ್ತಿರೋ ಸಭೆಯಲ್ಲಿ ಏನಾಗುತ್ತೆ ಅನ್ನೋದನ್ನೇ ದೇಶವಾಸಿಗಳು ಕಣ್ಣರಳಿಸಿ ನೋಡ್ತಿದ್ದಾರೆ.

Published On - 6:21 am, Mon, 15 June 20