
ಬೆಂಗಳೂರು: ವಿವಿಧ ಕಾಮಗಾರಿಗಳ ಹೆಸರಲ್ಲಿ BBMP ಅಧಿಕಾರಿಗಳು ರಸ್ತೆಯೊಂದನ್ನು ಪೂರ್ತಿ ಅಗೆದಿದ್ದು, ಹೆಣ್ಣೂರು ಬಳಿಯ ಗೋಲ್ಡನ್ ಗ್ರಾಂಡ್ ಅಪಾರ್ಟ್ಮೆಂಟ್ ನಿವಾಸಿಗಳು ದಿನ ನಿತ್ಯದ ಕೆಲಸಗಳಿಗೆ ಹೊರಗಡೆಗೆ ಹೋಗಲಾಗದೆ ಪರದಾಡುತ್ತಿದ್ದಾರೆ.
2 ತಿಂಗಳ ಹಿಂದಷ್ಟೆ ಮುಖ್ಯ ರಸ್ತೆಗೆ ಡಾಂಬರು ಮಾಡಲಾಗಿತ್ತು. ಆದರೆ ಇದೀಗ ರಸ್ತೆಯನ್ನು ಸಂಪೂರ್ಣವಾಗಿ ಅಗೆದಿರುವುದರಿಂದ ಓಡಾಡಲು ರಸ್ತೆಯೇ ಇಲ್ಲದಂತಾಗಿದೆ. ಮಳೆ ಬಂದಾಗ, ರಸ್ತೆ ಮುಳುಗಡೆಯಾಗಲಿದೆ. ಇದರಿಂದಾಗಿ ವಾಹನಗಳು ಪ್ರತಿದಿನ ಕೆಸರಲ್ಲಿ ಸಿಲುಕಿ ಹಾಕಿಕೊಳ್ಳುತ್ತಿವೆ. 2 ದಿನಗಳಿಂದ ಪೌರಾಡಳಿತದ ನಿರ್ಲಕ್ಷ್ಯ ದಿಂದ ಹೊರಹೋಗಲಾಗದೆ ಜನ ಮನೆಯಲ್ಲೇ ಲಾಕ್ಡೌನ್ ಆಗಿಬಿಟ್ಟಿದ್ದಾರೆ.
Published On - 11:59 am, Thu, 3 September 20