AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಗಿಣಿ ಏನ್ ಘಂಘಮ್ ಅಂತಾ ನಾರುತ್ತಿದ್ದಾಳಾ? -ಪ್ರಶಾಂತ್ ಸಂಬರಗಿ ಪ್ರಶ್ನೆ

ಬೆಂಗಳೂರು: ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಅವರು ಕನ್ನಡ ಚಿತ್ರೋದ್ಯಮದಲ್ಲಿ ಡ್ರಗ್ಸ್ ಬಳಕೆಯಾಗುತ್ತಿರುವ ಬಗ್ಗೆ ಸುದ್ದಿಗೋಷ್ಠಿ ನಡೆಸಿದ್ದಾರೆ. ನಾನು ಚಿತ್ರ ವಿತರಣೆ ಮಾಡಿದ್ದೇನೆ. ಹಾಗಾಗಿ ಕನ್ನಡ ಚಿತ್ರೋದ್ಯಮಕ್ಕೆ ಸೇರಿದವನೇ ಎಂದು ಮಾತು ಆರಂಭಿಸಿದ ಪ್ರಶಾಂತ್ ಸಂಬರಗಿ ನಾನು ಫಿಲ್ಮ್ ಚೇಂಬರ್‌ಗೆ ಸದಸ್ಯನಾಗಿಲ್ಲ, ‌ಆಗೋದು ಇಲ್ಲ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಟಾಂಗ್​ ಕೊಟ್ಟಿದ್ದಾರೆ. ಫಿಲ್ಮ ಚೇಂಬರ್ ನನ್ನ ಕೊಡುಗೆ ಏನೆಂದು ಪ್ರಶ್ನೆ ಮಾಡಿದ್ದಾರೆ. ನಾನು ಹಲವು ಕನ್ನಡ ಚಿತ್ರಗಳನ್ನು ಡಿಸ್ಟ್ರಿಬ್ಯೂಷನ್ ಮಾಡಿದ್ದೇನೆ. ಇದರಿಂದ ನಾನು 5 […]

ರಾಗಿಣಿ ಏನ್ ಘಂಘಮ್ ಅಂತಾ ನಾರುತ್ತಿದ್ದಾಳಾ? -ಪ್ರಶಾಂತ್ ಸಂಬರಗಿ ಪ್ರಶ್ನೆ
KUSHAL V
| Edited By: |

Updated on: Sep 03, 2020 | 11:46 AM

Share

ಬೆಂಗಳೂರು: ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಅವರು ಕನ್ನಡ ಚಿತ್ರೋದ್ಯಮದಲ್ಲಿ ಡ್ರಗ್ಸ್ ಬಳಕೆಯಾಗುತ್ತಿರುವ ಬಗ್ಗೆ ಸುದ್ದಿಗೋಷ್ಠಿ ನಡೆಸಿದ್ದಾರೆ. ನಾನು ಚಿತ್ರ ವಿತರಣೆ ಮಾಡಿದ್ದೇನೆ. ಹಾಗಾಗಿ ಕನ್ನಡ ಚಿತ್ರೋದ್ಯಮಕ್ಕೆ ಸೇರಿದವನೇ ಎಂದು ಮಾತು ಆರಂಭಿಸಿದ ಪ್ರಶಾಂತ್ ಸಂಬರಗಿ ನಾನು ಫಿಲ್ಮ್ ಚೇಂಬರ್‌ಗೆ ಸದಸ್ಯನಾಗಿಲ್ಲ, ‌ಆಗೋದು ಇಲ್ಲ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಟಾಂಗ್​ ಕೊಟ್ಟಿದ್ದಾರೆ. ಫಿಲ್ಮ ಚೇಂಬರ್ ನನ್ನ ಕೊಡುಗೆ ಏನೆಂದು ಪ್ರಶ್ನೆ ಮಾಡಿದ್ದಾರೆ. ನಾನು ಹಲವು ಕನ್ನಡ ಚಿತ್ರಗಳನ್ನು ಡಿಸ್ಟ್ರಿಬ್ಯೂಷನ್ ಮಾಡಿದ್ದೇನೆ. ಇದರಿಂದ ನಾನು 5 ಕೋಟಿ ರೂಪಾಯಿ ಕಳೆದುಕೊಂಡಿದ್ದಾನೆ. ಇಷ್ಟೆಲ್ಲಾ ಆಗಿದ್ದರೂ ನನಗೆ ಚಿತ್ರರಂಗಕ್ಕೆ ಸಂಬಂಧವಿಲ್ಲ ಅಂತಾರೆ. ನಾನು ಚಿತ್ರೋದ್ಯಮಿ ಅಲ್ಲಾ ಅಂತಾ ಸಾ.ರಾ.ಗೋವಿಂದು ನನ್ನನ್ನು ಪ್ರಶ್ನೆ ಮಾಡುತ್ತಾರೆ. ನಾನು ನನ್ನ ವೈಯಕ್ತಿಕ ಬೆಳವಣಿಗೆಗೂ ಕೆಲಸ ಮಾಡಿದ್ದೇನೆ. ಕನ್ನಡ ಚಿತ್ರರಂಗಕ್ಕಾಗಿಯೂ ಕೆಲಸ ಮಾಡಿದ್ದೇನೆ ಎಂದು ಸಂಬರಗಿ ಹೇಳಿದರು.

‘ಬಾಹುಬಲಿ-2 ಚಿತ್ರದ ವಿರುದ್ಧ ಪ್ರತಿಭಟನೆ ಮಾಡುತ್ತಾರೆ… ಯಾಕೆ?’ ನಾನು ಹಲವು ಕನ್ನಡ ಚಿತ್ರಗಳಲ್ಲಿ ಪಾರ್ಟ್‌ನರ್ ಆಗಿದ್ದೇನೆ. ಸಾ.ರಾ.ಗೋವಿಂದು ನನ್ನ ವಿರುದ್ಧ ಯಾವಾಗ್ಲೂ ಆರೋಪಿಸ್ತಾರೆ. ‘ಬಾಹುಬಲಿ’ ಚಿತ್ರದ ವಿರುದ್ಧ ಪ್ರತಿಭಟನೆ ಮಾಡುತ್ತಾರೆ.. ಯಾಕೆ? ರಾಜ್ಯದಲ್ಲಿ ಬಾಹುಬಲಿ ಸಿನಿಮಾ ಬಿಡುಗಡೆ ಮಾಡುವುದಕ್ಕೆ ಬಿಡಲ್ಲ ಎಂದು ಹೇಳಿದ್ದರು.

ಈ ವಿಚಾರವಾಗಿ ನಾನು ಸಾ.ರಾ.ಗೋವಿಂದು ಬಳಿ ಹೇಳಿದ್ದೆ. ಬಾಹುಬಲಿ-1 ಚಿತ್ರ ಬಿಡುಗಡೆಗೆ ಅನುಮತಿ ನೀಡಿದ್ರೀ ಆದರೆ ಈಗ ಬಾಹುಬಲಿ-2 ಚಿತ್ರ ಬಿಡುಗಡೆಗೆ ಏಕೆ ಅನುಮತಿ ನೀಡಲ್ಲ? ಬಾಹುಬಲಿ ಚಿತ್ರ ಅಂತಾರಾಷ್ಟ್ರೀಯ ಚಿತ್ರವಾಗಿದೆ ಎಂದಿದ್ದೆ. ಅದಕ್ಕೆ, ಆಗ ಅವರು ಉಪ್ಪಾರಪೇಟೆ ಠಾಣೆಗೆ ದೂರು ನೀಡಿದ್ದರು. ಅಲ್ಲಿಂದ ನಮ್ಮ ಮಧ್ಯೆ ಮನಸ್ತಾಪ ಶುರುವಾಗಿದ್ದು ಎಂದು ಪ್ರಶಾಂತ್ ಸಂಬರಗಿ ಹೇಳಿದ್ದಾರೆ. ಫಿಲ್ಮ್ ಚೇಂಬರ್ ಸದಸ್ಯ ಕೃಷ್ಣೇಗೌಡ ಹಲವು ಪ್ರಶ್ನೆ ಮಾಡಿದ್ದಾರೆ. ಒಂದಕ್ಕೂ ಫಿಲ್ಮ್ ಚೇಂಬರ್‌ನವರು ಉತ್ತರವನ್ನು ನೀಡಿಲ್ಲ. ಫಿಲ್ಮ್ ಚೇಂಬರ್‌ನ ಗುಂಪುಗಾರಿಕೆಯಿಂದ ಎಲ್ಲವೂ ಹಾಳಾಗುತ್ತಿದೆ. ಈಗ ಪರಭಾಷೆಯ ಚಿತ್ರಗಳು ಕನ್ನಡಕ್ಕೆ ಡಬ್ಬಿಂಗ್ ಆಗುತ್ತಿವೆ.  ಇಷ್ಟು ದಿನ ಏಕೆ ಆಗಿಲ್ಲವೆಂದು ಪ್ರಶಾಂತ್ ಸಂಬರಗಿ ಪ್ರಶ್ನೆ ಮಾಡಿದರು. ಜೊತೆಗೆ, ಫಿಲ್ಮ್ ಚೇಂಬರ್‌ನಲ್ಲಿರುವ ಫಿಕ್ಸ್​ಡ್ ಡಿಪಾಸಿಟ್ ಏನಾಗಿದೆ ಎಂದು ಸಾಮಾಜಿಕ ಹೋರಾಟಗಾರ ಪ್ರಶಾಂತ್ ಸಂಬರಗಿ ಕೇಳಿದರು.

ಸಂಜನಾ ಬಗ್ಗೆ ನನ್ನ ಬಾಯಿಂದ ಹೇಳಿ ಗಲೀಜು ಮಾಡಿಕೊಳ್ಳಲ್ಲ. ಸಂಜನಾ ಯಾವ ಮಟ್ಟದಲ್ಲಿ ಇದ್ದಾರೆಂದು ಇಂಡಸ್ಟ್ರಿಗೆ ಗೊತ್ತು. ಅವರ ಬಗ್ಗೆ ನಾನೇಕೆ ಮಾತನಾಡಲಿ ಎಂದ ಪ್ರಶಾಂತ್ ಜೊತೆಗೆ, ರಾಗಿಣಿ ಏನು ಘಮ್ ಘಮ್ ಅಂತಾ ನಾರುತ್ತಿದ್ದಾಳಾ? ಅಂತಾ ಖಾರವಾಗಿ ಪ್ರಶ್ನಿಸಿದ್ದಾರೆ.

ನಾನು ದೊಡ್ಡ ದೊಡ್ಡ ಕೆಲಸ ಮಾಡುವುದಕ್ಕೆ ಆಗಿಲ್ಲ. ನಾನು ಇಂಡಸ್ಟ್ರಿಗಾಗಿ ಸಣ್ಣ ಪುಟ್ಟ ಕೆಲಸಗಳನ್ನು ಮಾಡಿದ್ದೇನೆ ಎಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ