‘ಕೊಲೆ ಮಾಡಿದವ್ರೇ ನನ್ನ ಅಕ್ಕನ ಬಗ್ಗೆ ಮಾತ್ನಾಡ್ತಾರೆ, ಇದರಿಂದ ನಮಗೆ ಬೇಜಾರಾಗೋದಿಲ್ವೇ?’

[lazy-load-videos-and-sticky-control id=”nRW_fb3cyQ8″] ಬೆಂಗಳೂರು: ಸ್ಯಾಂಡಲ್​ವುಡ್​ಗೆ ಡ್ರಗ್ಸ್​ ಜಾಲದ ನಂಟಿರವು ಆರೋಪ ಮಾಡಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಇಂದು ಮತ್ತೊಮ್ಮೆ ಸುದ್ದಿಗೋಷ್ಠಿ ನಡೆಸಿದ್ದಾರೆ. ‘ಇತ್ತೀಚೆಗೆ ಮೃತಪಟ್ಟ ನಟನ ಪೋಸ್ಟ್‌ಮಾರ್ಟಂ’ ಹೇಳಿಕೆ ವಿಚಾರವಾಗಿ ಮಾತನಾಡಿದ ಲಂಕೇಶ್​ ನಾನು ಈ ಹಿಂದೆ ನೀಡಿದ್ದ ಹೇಳಿಕೆಯನ್ನು ವಾಪಸ್ ಪಡೆದಿದ್ದೆ. ಆದರೆ, ನನ್ನ ಸಹೋದರಿ ಗೌರಿ ಲಂಕೇಶ್ ಬಗ್ಗೆ ಮಾತನಾಡುತ್ತಾರೆ. ಈ ಹೇಳಿಕೆ ನೀಡಿದ್ದು ಯಾರೆಂದು ನಾನು ಹೇಳುವುದೇ ಇಲ್ಲ. ಆದರೆ ಅವರು ಈ ರೀತಿಯಾಗಿ ಮಾತನಾಡುವುದು ಸರಿಯೇ? ಎಂದು ಇಂದ್ರಜಿತ್​ ಪ್ರಶ್ನಿಸಿದರು. ತನಿಖೆ […]

‘ಕೊಲೆ ಮಾಡಿದವ್ರೇ ನನ್ನ ಅಕ್ಕನ ಬಗ್ಗೆ ಮಾತ್ನಾಡ್ತಾರೆ, ಇದರಿಂದ ನಮಗೆ ಬೇಜಾರಾಗೋದಿಲ್ವೇ?’
Follow us
KUSHAL V
| Updated By: ಸಾಧು ಶ್ರೀನಾಥ್​

Updated on:Sep 03, 2020 | 12:26 PM

[lazy-load-videos-and-sticky-control id=”nRW_fb3cyQ8″]

ಬೆಂಗಳೂರು: ಸ್ಯಾಂಡಲ್​ವುಡ್​ಗೆ ಡ್ರಗ್ಸ್​ ಜಾಲದ ನಂಟಿರವು ಆರೋಪ ಮಾಡಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಇಂದು ಮತ್ತೊಮ್ಮೆ ಸುದ್ದಿಗೋಷ್ಠಿ ನಡೆಸಿದ್ದಾರೆ.

‘ಇತ್ತೀಚೆಗೆ ಮೃತಪಟ್ಟ ನಟನ ಪೋಸ್ಟ್‌ಮಾರ್ಟಂ’ ಹೇಳಿಕೆ ವಿಚಾರವಾಗಿ ಮಾತನಾಡಿದ ಲಂಕೇಶ್​ ನಾನು ಈ ಹಿಂದೆ ನೀಡಿದ್ದ ಹೇಳಿಕೆಯನ್ನು ವಾಪಸ್ ಪಡೆದಿದ್ದೆ. ಆದರೆ, ನನ್ನ ಸಹೋದರಿ ಗೌರಿ ಲಂಕೇಶ್ ಬಗ್ಗೆ ಮಾತನಾಡುತ್ತಾರೆ. ಈ ಹೇಳಿಕೆ ನೀಡಿದ್ದು ಯಾರೆಂದು ನಾನು ಹೇಳುವುದೇ ಇಲ್ಲ. ಆದರೆ ಅವರು ಈ ರೀತಿಯಾಗಿ ಮಾತನಾಡುವುದು ಸರಿಯೇ? ಎಂದು ಇಂದ್ರಜಿತ್​ ಪ್ರಶ್ನಿಸಿದರು.

ತನಿಖೆ ನಡೆಯಲಿ, ಎಲ್ಲಾ ವಿಚಾರ ಬಯಲಿಗೆ ಬರುತ್ತದೆ. ನನ್ನ ತಂದೆ, ಅಕ್ಕ ಕೊನೇ ಕ್ಷಣದವರೆಗೆ ಸಮಾಜಕ್ಕಾಗಿ ಕೆಲಸ ಮಾಡಿದ್ದರು. ಆದರೆ, ಕೊಲೆ ಮಾಡಿದವರೇ ನನ್ನ ಅಕ್ಕನ ಬಗ್ಗೆ ಮಾತನಾಡುತ್ತಾರೆ. ಇದರಿಂದ ನಮಗೂ ಬೇಜಾರಾಗುವುದಿಲ್ಲವೇ? ಎಂದು ಇಂದ್ರಜಿತ್ ಲಂಕೇಶ್ ತಮ್ಮ ನೋವು ತೋಡಿಕೊಂಡರು.

ಫಿಲ್ಮ್ ಚೇಂಬರ್ ಬಳಿಯೂ ನಾನು ಮನವಿ ಮಾಡುತ್ತೇನೆ. ನಿಮ್ಮ ಮುಂದೆಯೇ ಕೆಲವರು ಓಡಿ ಹೋದರು. ಅವರನ್ನು ಕರೆಸಿ ಚೇಂಬರ್‌ನವರು ಮಾತನಾಡಿಸಿದರಾ? ಹನಿಟ್ರ್ಯಾಪ್ ಆದಾಗ ಯಾರಾದ್ರೂ ಅದರ ಬಗ್ಗೆ ಮಾತಾಡಿದ್ರಾ? ಈಗಲಾದ್ರೂ ನನ್ನ ಜೊತೆ ಬನ್ನಿ. ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸೋಣ. ಯಾರೋ ಕೆಲವರು ಡ್ರಗ್ಸ್ ಜಾಲದಲ್ಲಿ ಭಾಗಿಯಾಗಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳೋಣ ಎಂದ ಇಂದ್ರಜಿತ್ ನನಗೆ ನೋಟಿಸ್ ನೀಡಿದರೆ ಕಾನೂನು ರೀತಿ ಹೋರಾಡುತ್ತೇನೆ ಎಂದು ಹೇಳಿದ್ದಾರೆ. ಪ್ರಕರಣ ಸಂಬಂಧ ಪೊಲೀಸರ ತನಿಖೆಗೆ ಸಹಕಾರ ನೀಡೋಣ ಎಂದು ಫಿಲ್ಮ್ ಚೇಂಬರ್‌ಗೆ ಇಂದ್ರಜಿತ್ ಲಂಕೇಶ್ ಮನವಿ ಮಾಡಿದ್ದಾರೆ.

‘ನನಗೆ ಈಗ ಯಾವುದೇ ರಕ್ಷಣೆ ಬೇಕಾಗಿಲ್ಲ, ಬೆಂಬಲ ಬೇಕು’ ನನಗೆ ಈಗ ಯಾವುದೇ ರಕ್ಷಣೆ ಬೇಕಾಗಿಲ್ಲ, ಬೆಂಬಲ ಬೇಕು. ಕನ್ನಡ ಚಿತ್ರರಂಗದ ಕೆಲವು ನಟರು ನನಗೆ ಬೆಂಬಲ ನೀಡಿದ್ದಾರೆ. ಕೆಲವರು ಗಾಂಜಾ ತೆಗೆದುಕೊಂಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಎಲ್ಲಾ ಮಾಹಿತಿಯೂ ಹೊರಗೆ ಬರುತ್ತೆ ಎಂದ ಇಂದ್ರಜಿತ್ ಈ ಪ್ರಕರಣದಲ್ಲಿ ಯಾಱರು ಭಾಗಿಯಾಗಿದ್ದಾರೆಂದು ತಿಳಿಯುತ್ತೆ. ಆದರೆ, ಕನ್ನಡ ಚಿತ್ರರಂಗದವರು ಸಹಕಾರ ನೀಡಬೇಕು ಎಂದು ಹೇಳಿದರು. CCB ತನಿಖೆಗೆ ನಾನು ಎಲ್ಲ ರೀತಿಯ ಸಹಕಾರ ನೀಡುತ್ತೇನೆ. ಪ್ರಕರಣಕ್ಕೆ ಲಾಜಿಕಲ್ ಎಂಡ್ ಸಿಗಲೇಬೇಕು ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಹೇಳಿದರು.

Published On - 11:00 am, Thu, 3 September 20

ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ