ಅಸ್ವಸ್ಥ ತಾಯಿಯನ್ನ ತಳ್ಳುಗಾಡಿಯಲ್ಲೇ ಆಸ್ಪತ್ರೆಗೆ ಕರೆದೊಯ್ದ ಮಗ, ಯಾವೂರಲ್ಲಿ?
ಕೊಪ್ಪಳ: ಇಷ್ಟು ವರ್ಷ ಕಳೆದರೂ ಗ್ರಾಮಕ್ಕೆ ಬಸ್ ವ್ಯವಸ್ಥೆಯೇ ಕಲ್ಪಿಸಿಲ್ಲ. ಹೀಗಾಗಿ ಅನಾರೋಗ್ಯಪೀಡಿತ ತಾಯಿಯನ್ನು ಮಗ, ನೀರು ತರುವ ತಳ್ಳುವ ಗಾಡಿಯಲ್ಲಿ ಕೂರಿಸಿಕೊಂಡು ಆಸ್ಪತ್ರೆಗೆ ಕರೆದುಕೊಂಡು ಹೋಗಿರುವ ಘಟನೆ ಕೊಪ್ಪಳ ಜಿಲ್ಲೆಯಲ್ಲಿ ನಡೆದಿದೆ. ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಜುಂಜಲಕೊಪ್ಪ ಗ್ರಾಮದಲ್ಲಿ ಈ ಘಟನೆ ನಡೆಸಿದ್ದು, ಗ್ರಾಮದ ಹನುಮಪ್ಪ ಎಂಬವರು ತಮ್ಮ ಅನಾರೋಗ್ಯಪೀಡಿತ ತಾಯಿಯನ್ನು ಆಸ್ಪತ್ರೆಗೆ ಕರೆದೊಯ್ಯಲು ಯಾವುದೇ ವಾಹನ ವ್ಯವಸ್ಥೆ ಇಲ್ಲದಿರುವುದರಿಂದ ತಳ್ಳುವ ಗಾಡಿಯಲ್ಲಿಯೇ ಕರೆದುಕೊಂಡು ಹೋಗಿದ್ದಾರೆ. ಅನಾರೋಗ್ಯ ಪೀಡಿತ ತಾಯಿಯನ್ನು ನೀರು ತರುವ ಗಾಡಿಯಲ್ಲಿಯೇ […]

ಕೊಪ್ಪಳ: ಇಷ್ಟು ವರ್ಷ ಕಳೆದರೂ ಗ್ರಾಮಕ್ಕೆ ಬಸ್ ವ್ಯವಸ್ಥೆಯೇ ಕಲ್ಪಿಸಿಲ್ಲ. ಹೀಗಾಗಿ ಅನಾರೋಗ್ಯಪೀಡಿತ ತಾಯಿಯನ್ನು ಮಗ, ನೀರು ತರುವ ತಳ್ಳುವ ಗಾಡಿಯಲ್ಲಿ ಕೂರಿಸಿಕೊಂಡು ಆಸ್ಪತ್ರೆಗೆ ಕರೆದುಕೊಂಡು ಹೋಗಿರುವ ಘಟನೆ ಕೊಪ್ಪಳ ಜಿಲ್ಲೆಯಲ್ಲಿ ನಡೆದಿದೆ.
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಜುಂಜಲಕೊಪ್ಪ ಗ್ರಾಮದಲ್ಲಿ ಈ ಘಟನೆ ನಡೆಸಿದ್ದು, ಗ್ರಾಮದ ಹನುಮಪ್ಪ ಎಂಬವರು ತಮ್ಮ ಅನಾರೋಗ್ಯಪೀಡಿತ ತಾಯಿಯನ್ನು ಆಸ್ಪತ್ರೆಗೆ ಕರೆದೊಯ್ಯಲು ಯಾವುದೇ ವಾಹನ ವ್ಯವಸ್ಥೆ ಇಲ್ಲದಿರುವುದರಿಂದ ತಳ್ಳುವ ಗಾಡಿಯಲ್ಲಿಯೇ ಕರೆದುಕೊಂಡು ಹೋಗಿದ್ದಾರೆ.
ಅನಾರೋಗ್ಯ ಪೀಡಿತ ತಾಯಿಯನ್ನು ನೀರು ತರುವ ಗಾಡಿಯಲ್ಲಿಯೇ ಕೂರಿಸಿಕೊಂಡು ಜುಂಜಲಕೊಪ್ಪ ಗ್ರಾಮದಿಂದ ಚಳಕೆರೆ ಪ್ರಾಥಮಿಕ ಆಸ್ಪತ್ರೆಗೆ, ಮೂರು ಕಿಲೋ ಮೀಟರ್ವರೆಗೆ ಗಾಡಿ ತಳ್ಳಿಕೊಂಡು ಹೋಗಿದ್ದಾರೆ.
ಮೂರು ವರ್ಷದ ಹಿಂದೆ ಇದೇ ರೀತಿ ತನ್ನ ತಾಯಿಯನ್ನ ಕರೆದುಕೊಂಡು ಹೋಗಿದ್ದರು. ಅಂದು ಜನ ಪ್ರತಿನಿಧಿಗಳು ಬಸ್ ಸಂಪರ್ಕ ಕಲ್ಪಿಸೋ ಭರವಸೆ ನೀಡಿದ್ದರು. ಆದರೆ ಇದುವರೆಗೂ ಭರವಸೆ ಭರಗಸೆಯಾಗಿಯೇ ಉಳಿದಿದ್ದು, ಮತ್ತೆ ವೃದ್ದೆಗೆ ತಳ್ಳುಗಾಡಿಯೇ ಆಸರೆಯಾಗಿದೆ.
Published On - 12:33 pm, Thu, 3 September 20