2ದಿನ ಹಿಂದೆ ಅಂತ್ಯಸಂಸ್ಕಾರ ಮಾಡಿದ್ದು ಯಾರ ಶವಕ್ಕೆ? BIMS ಯಡವಟ್ಟು, ಸಂಬಂಧಿಕರು ಕಂಗಾಲು
ಬೆಳಗಾವಿ: ಯಾರದ್ದೋ ಶವವನ್ನ ಇನ್ಯಾರಿಗೋ ನೀಡಿದ ಘಟನೆ ನಗರದ ಬಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ. ಶವ ಪಡೆದವರು ಇದು ನಮ್ಮವರದೆ ಶವವೆಂದು ಅಂತ್ಯಸಂಸ್ಕಾರ ಮಾಡಿದ ಬಳಿಕ.. ಆಸ್ಪತ್ರೆಯಿಂದ ಕರೆ ಬಂದಿದೆ. ನಿಮ್ಮ ಸಂಬಂಧಿಯ ಶವ ಶವಾಗಾರದಲ್ಲಿದೆ, ಯಾಕೆ ತೆಗೆದುಕೊಂಡು ಹೋಗಿಲ್ಲ ಎಂದು ಆಸ್ಪತ್ರೆಯ ಸಿಬ್ಬಂದಿ ವಿಚಾರಿಸಿದ್ದಾರೆ. ಅದಾಗತಾನೆ ತಮ್ಮವರದ್ದೇ ಎಂದು ಶವಸಂಸದಕಾರ ಮಾಡಿ ಬಂದಿದ್ದ ಬಂಧುಗಳು ಸಿಬ್ಬಂದಿಯ ಪ್ರಶ್ನೆಗೆ ತಬ್ಬಿಬ್ಬಾಗಿರುವ ಘಟನೆ ಬೆಳಗಾವಿಯಲ್ಲಿ ನೆಡೆದಿದೆ. ಬೆಳಗಾವಿ ಕ್ಯಾಂಪ್ ಪ್ರದೇಶದಲ್ಲಿ ಅಸ್ತಮಾದಿಂದ ಬಳಲುತ್ತಿದ್ದ 57 ವರ್ಷದ ಮಹಿಳೆಗೆ ಸೋಂಕು ದೃಢವಾಗಿತ್ತು. […]
ಬೆಳಗಾವಿ: ಯಾರದ್ದೋ ಶವವನ್ನ ಇನ್ಯಾರಿಗೋ ನೀಡಿದ ಘಟನೆ ನಗರದ ಬಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ. ಶವ ಪಡೆದವರು ಇದು ನಮ್ಮವರದೆ ಶವವೆಂದು ಅಂತ್ಯಸಂಸ್ಕಾರ ಮಾಡಿದ ಬಳಿಕ.. ಆಸ್ಪತ್ರೆಯಿಂದ ಕರೆ ಬಂದಿದೆ. ನಿಮ್ಮ ಸಂಬಂಧಿಯ ಶವ ಶವಾಗಾರದಲ್ಲಿದೆ, ಯಾಕೆ ತೆಗೆದುಕೊಂಡು ಹೋಗಿಲ್ಲ ಎಂದು ಆಸ್ಪತ್ರೆಯ ಸಿಬ್ಬಂದಿ ವಿಚಾರಿಸಿದ್ದಾರೆ. ಅದಾಗತಾನೆ ತಮ್ಮವರದ್ದೇ ಎಂದು ಶವಸಂಸದಕಾರ ಮಾಡಿ ಬಂದಿದ್ದ ಬಂಧುಗಳು ಸಿಬ್ಬಂದಿಯ ಪ್ರಶ್ನೆಗೆ ತಬ್ಬಿಬ್ಬಾಗಿರುವ ಘಟನೆ ಬೆಳಗಾವಿಯಲ್ಲಿ ನೆಡೆದಿದೆ.
ಬೆಳಗಾವಿ ಕ್ಯಾಂಪ್ ಪ್ರದೇಶದಲ್ಲಿ ಅಸ್ತಮಾದಿಂದ ಬಳಲುತ್ತಿದ್ದ 57 ವರ್ಷದ ಮಹಿಳೆಗೆ ಸೋಂಕು ದೃಢವಾಗಿತ್ತು. ಚಿಕಿತ್ಸೆ ಸಿಗದೆ ಕೊವಿಡ್ ವಾರ್ಡ್ ನಲ್ಲಿ ಮಹಿಳೆ ಸಾವನ್ನಪ್ಪಿದಾರೆಂಬ ಮಾತೂ ಕೇಳಿಬಂದಿತ್ತು. ಜುಲೈ 18ರಂದು ಮಹಿಳೆ ಶವವನ್ನು ಪಡೆದಕೊಂಡಿದ್ದ ಸಂಬಂಧಿಕರು ಅಂದೇ ಅಂತ್ಯಸಂಸ್ಕಾರ ಮಾಡಿ ಮುಗಿಸಿದ್ದರು. ಆದರೆ ಎರಡು ದಿನಗಳ ನಂತರ ಕರೆ ಮಾಡಿದ ಆಸ್ಪತ್ರೆ ಸಿಬ್ಬಂದಿ ನಿಮ್ಮ ಸಂಬಂಧಿಯ ಶವ ಶವಾಗಾರದಲ್ಲಿದೆ, ಬಂದು ಶವ ತೆಗೆದುಕೊಂಡು ಹೋಗಿ ಎಂದಿದ್ದಾರೆ.
ಸಿಬ್ಬಂದಿ ಪೋನ್ ಕರೆಯಿಂದ ದಿಕ್ಕೆ ತೋಚದಂತಾದ ಕುಟುಂಬಸ್ಥರು ಎರಡು ದಿನಗಳ ಹಿಂದೆ ಯಾರ ಶವ ಅಂತ್ಯಸಂಸ್ಕಾರ ಮಾಡಿದ್ದೇವೆ ಎಂದು ಕಂಗಾಲಾಗಿದ್ದಾರೆ. ಈಗಾಗಲೇ ಶವ ಸಂಸ್ಕಾರ ಮಾಡಿದ್ದೇವೆ ಅಂತಾ ಹೇಳಿದ್ರೂ ಆ ಶವ ನಿಮ್ಮ ಸಂಬಂಧಿಯದಲ್ಲ, ನಿಮ್ಮ ಸಂಬಂಧಿ ಶವ ಇನ್ನೂ ಶವಾಗಾರದಲ್ಲಿದೆ, ಬಂದು ತೆಗೆದುಕೊಂಡು ಹೋಗಿ ಅಂತಾ ಬಿಮ್ಸ್ ಆಸ್ಪತ್ರೆಯ ಸಿಬ್ಬಂದಿ ಫೊನ್ ಮಾಡಿ ಕರೆಯುತ್ತಿದ್ದಾರೆ ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ.
ಜೊತೆಗೆ ಯಾರದೋ ಶವ ಇನ್ಯಾರಿಗೋ ನೀಡ್ತಿರುವ ಬಿಮ್ಸ್ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಮ್ಸ್ ಆಡಳಿತ ಮಂಡಳಿ, ಸಿಬ್ಬಂದಿ ವಿರುದ್ಧ ಎಪಿಎಂಸಿ ಪೊಲೀಸ್ ಠಾಣೆಗೆ ದೂರು ನೀಡಲು ಕುಟುಂಬಸ್ಥರು ಮುಂದಾಗಿದ್ದಾರೆ.