ಬೆಂಗಳೂರು: ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಿಗೆಯಾಗ್ತಿರುವಂತೆಯೇ ಜನರಲ್ಲಿ ಭಯವೂ ಜಾಸ್ತಿಯಾಗ್ತಿದೆ. ಪರಿಣಾಮ ಉದ್ಯೋಗ ಅರಸಿ ಬೆಂಗಳೂರಿನಲ್ಲಿ ನೆಲೆಸಿರುವ ಕೆಲವರು ತಮ್ಮ ಮೂಲ ಊರುಗಳತ್ತ ವಾಪಾಸಾಗುತ್ತಿದ್ದಾರೆ.
ಕೊರೊನಾಗೆ ಹೆದರಿ ಬೆಂಗಳೂರು ಬಿಡುತ್ತಿರುವ ಜನತೆ
ಹೌದು ಬೆಂಗಳೂರಿನಲ್ಲಿ ಕೊರೊನಾ ಪೀಡಿತರ ಸಂಖ್ಯೆ ದಿನೆೇ ದಿನೆ ಹೆಚ್ಚುತ್ತಿರುವಂತೆ ಸಾರ್ವಜನಿಕರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಹೀಗಾಗಿ ಕೆಲ ಜನರು ತಮ್ಮ ತಮ್ಮ ಊರುಗಳಿಗೆ ವಾಪಾಸಾಗುತ್ತಿದ್ದಾರೆ. ಕೆಲವರು ರವಿವಾರ ರಜೆ ಇರೋದ್ರಿಂದ ಹೋಗುತ್ತಿದ್ದಾರೆ. ಇನ್ನು ಕೆಲವರು ಕೆಲಸವಿಲ್ಲದೆ ಊರಿನತ್ತ ಹೊರಟಿದ್ದಾರೆ. ಇನ್ನು ಕೆಲವರು ಇಡೀ ರಾಜ್ಯ ಲಾಕ್ಡೌ್ನ್ ಆಗುತ್ತೆ ಎಂಬ ಆತಂಕದಲ್ಲಿ ಮುಂಜಾಗ್ರತೆಯಿಂದ ಊರು ಬಿಡುತ್ತಿದ್ದಾರೆ. ಇಂಥ ಸಾವಿರಾರು ಜನರು ಬೆಂಗಳೂರಿನಿಂದ ಹೊರಹೋಗುತ್ತಿದ್ದಾರೆ. ಜಾಲಹಳ್ಳಿ ಕ್ರಾಸ್ ಬಳಿ ಹೀಗೆ ಊರಿಗೆ ಹೋಗುತ್ತಿರುವವರಿಂದಾಗಿ ವಾಹನಗಳ ಸಂಖ್ಯೆ ಕೂಡ ರಸ್ತೆಯಲ್ಲಿ ಹೆಚ್ಚಾಗಿ ಸಂಚಾರ- ಜನದಟ್ಟಣೆ ಕಂಡುಬಂದಿದೆ.
ಕೆಂಗೆರಿಯಲ್ಲಿ ಬಸ್‌ಗಳಿಲ್ಲದೇ ಪ್ರಯಾಣಿಕರ ಆಕ್ರೋಶ
ಇದು ತುಮಕೂರು-ಹುಬ್ಬಳ್ಳಿ ಕಡೆಗೆ ಹೋಗುವ ರಸ್ತೆಯ ಕಥೆಯಾದ್ರೆ, ಮೈಸೂರಿನತ್ತ ಹೋಗುವವರ ಕಥೆಯೇನೂ ಭಿನ್ನವಾಗಿಲ್ಲ. ಕೆಂಗೇರಿ ಬಸ್ ನಿಲ್ದಾಣದಲ್ಲಿ ಮೈಸೂರು, ಮಂಡ್ಯದತ್ತ ಹೊಗುವ ಪ್ರಯಾಣಿಕರು ಬಸ್ ಸಿಗದೇ ಪರದಾಡುತ್ತಿದ್ದಾರೆ. ಕಳೆದ ಹಲವಾರು ಗಂಟೆಗಳಿಂದ ಯಾವುದೇ ಬಸ್ ಇಲ್ಲದೆ ಕೆಎಸ್‌ಆರ್‌ಟಿಸಿ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಬರುವ ಒಂದೋ ಎರಡೋ ಬಸ್‌ಗಳನ್ನ ಹತ್ತಲು ಸಾಮಾಜಿಕ ಅಂತರ ಮರೆತು ಜನ ಬಸ್‌ನೊಳಗೆ ನುಗ್ಗಲು ಪ್ರಯತ್ನಿಸುತ್ತಿದ್ದಾರೆ.
ಮೈಸೂರು ರೋಡ್ ಸ್ಯಾಟ್‌ಲೈಟ್ ಬಸ್‌ಸ್ಟ್ಯಾಂಡ್‌ನಲ್ಲಿ ಪ್ರಯಾಣಿಕರ ಕೊರತೆ
ಆದ್ರೆ ಇನ್ನು ಹೀಗೆ ರಜೆ ಮತ್ತು ಲಾಕ್‌ಡೌನ್ ಇರೋದ್ರಿಂದ ಹೊರ ಊರಿಗೆ ಹೋಗುವ ಪ್ರಯಾಣಿಕರಿಗಾಗಿಯೇ ಕೆಎಸ್‌ಆರ್‌ಟಿಸಿ ಮೈಸೂರು ರೋಡ್ ಸ್ಯಾಟಲೈಟ್ ಬಸ್ ನಿಲ್ದಾಣದಲ್ಲಿ ಹೆಚ್ಚುವರಿ ಬಸ್‌ಗಳ ವ್ಯವಸ್ಥೆ ಮಾಡಿದೆ. ಆದ್ರೆ ಈ ಬಸ್ ನಿಲ್ದಾಣದಲ್ಲಿ ನಿರೀಕ್ಷಿಸಿದಷ್ಟು ಪ್ರಯಾಣಿಕರು ಬರುತ್ತಿಲ್ಲ ಎಂದು ತಿಳಿದು ಬಂದಿದೆ.