ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಅಮಿಲೋಯ್ಡೋಸಿಸ್ (Amyloidosis) ಕಾಯಿಲೆಯಿಂದ ಬಳಲುತ್ತಿದ್ದು, ಕಳೆದ ಮೂರು ವಾರಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 78 ವರ್ಷದ ಪರ್ವೇಜ್ ಮುಷರಫ್ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಮುಷರಫ್ ಕುಟುಂಬ ಅವರ ಅಧಿಕೃತ ಮಾಹಿತಿ ನೀಡಿದ್ದು, ಚೇತರಿಕೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಮುಷರಫ್ ನಿಧನರಾಗಿದ್ದಾರೆ ಎಂಬ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಮುಷರಫ್ ಕುಟುಂಬ ಸುದ್ದಿಯನ್ನು ಅಲ್ಲಗೆಳೆದಿದೆ.
ಅಂಗಾಂಗಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಹೇಳಲಾಗಿದೆ. 2007ರಲ್ಲಿ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೋ ಅವರ ಹತ್ಯೆಗೆ ಸಂಬಂಧಿಸಿದಂತೆ ಮುಷರಫ್ ಆರೋಪ ಎದುರಿಸುತ್ತಿದ್ದರು. ಕಳೆದ ಆರು ವರ್ಷಗಳಿಂದ ದುಬೈನಲ್ಲಿ ವಾಸಿಸುತ್ತಿದ್ದು, ಅಲ್ಲಿಯೇ ಅಮಿಲೋಯ್ಡೋಸಿಸ್ (ಅಂಗಾಂಶದಲ್ಲಿ ಅಸಹಜ ಪ್ರೋಟೀನ್ ಉತ್ಪತ್ತಿಯಾಗಿ ಅಂಗಗಳ ಕಾರ್ಯಕ್ಕೆ ಅಡ್ಡಿಪಡಿಸುತ್ತದೆ) ರೋಗಕ್ಕೆ ಚಿಕಿತ್ಸೆ ಪಡೆಯುತ್ತಿದ್ದರು. ಮುಷರಫ್ 2001 ರಿಂದ 2008ರವರೆಗೆ ಪಾಕಿಸ್ತಾನದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
2018ರಲ್ಲಿ ಮುಷರಫ್ ಅಮಿಲೋಯ್ಡೋಸಿಸ್ಗೆ ಚಿಕಿತ್ಸೆ ಪಡೆದಿದ್ದರು
2018ರಲ್ಲಿ ಪಾಕಿಸ್ತಾನ ಮಾಜಿ ಅಧ್ಯಕ್ಷ ಮುಷರಫ್ ಅಮಿಲೋಯ್ಡೋಸಿಸ್ಗೆ ಯುಎಇಯಲ್ಲಿ ಚಿಕಿತ್ಸೆ ಪಡೆದಿದ್ದರು. ಅವರನ್ನು ವೆಂಟಿಲೇಟರ್ನಲ್ಲಿ ಇರಿಸಲಾಗಿಲ್ಲ ಆದರೂ ಅವರು ಚೇತರಿಸಿಕೊಳ್ಳುವ ಸಾಧ್ಯತೆಯೂ ಕಡಿಮೆ ಇದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಅಮಿಲೋಯ್ಡೋಸಿಸ್ ರೋಗ ಎಂದರೇನು?
ಅಮಿಲೋಯ್ಡೋಸಿಸ್ ಅನ್ನು ಒಂದು ಕ್ಯಾನ್ಸರ್ ಪ್ರಕಾರವಾಗಿ ನೋಡಲು ಸಾಧ್ಯವಿಲ್ಲ, ಇದು ಅಪರೂಪದ ಕಾಯಿಲೆಯ ಒಂದು ಸ್ಥಿತಿಯಾಗಿದೆ. ಇದು ಮಲ್ಟಿಪಲ್ ಮೈಲೋಮಾದಂತಹ ಕೆಲವು ರಕ್ತದ ಕ್ಯಾನ್ಸರ್‌ಗಳಿಗೆ ಸಂಬಂಧಿಸಿದೆ. ಅಮಿಲಾಯ್ಡ್ ಎಂಬ ಪ್ರೊಟೀನ್ ಅಂಗಗಳಲ್ಲಿ ನಿರ್ಮಾಣವಾದಾಗ ರೋಗ ಸ್ಥಿತಿ ಉಂಟಾಗುತ್ತದೆ. ದೇಹದಲ್ಲಿನ ಸಾಮಾನ್ಯ ಪ್ರೋಟೀನ್ ರೂಪಾಂತರಗೊಂಡಾಗ ಮತ್ತು ಒಟ್ಟಿಗೆ ಸೇರಿಕೊಂಡಾಗ ಅವು ರೂಪುಗೊಳ್ಳುತ್ತವೆ. ಹೃದಯ, ಕಿಡ್ನಿ, ನರಮಂಡಲ, ಲಿವರ್ ಯಾವ ಭಾಗದಲ್ಲಾದರೂ ರಚನೆಗೊಳ್ಳಬಹುದು.
ಅಮಿಲಾಯ್ಡ್ಗಳ ಈ ರಚನೆಗಳು ಅಂಗಗಳ ವೈಫಲ್ಯಕ್ಕೆ ಕಾರಣವಾಗುತ್ತವೆ, ಅಂಗಾಂಶಗಳು ಮತ್ತು ಅಂಗಗಳು ಸಾಮಾನ್ಯವಾಗಿ ಕಾರ್ಯನಿರ್ವಹಿಸುವುದನ್ನು ತಡೆಯುತ್ತದೆ.
ಅಮಿಲೋಯ್ಡೋಸಿಸ್ ಕಾರಣಗಳು
ಅಮಿಲೋಯ್ಡೋಸಿಸ್ ವಿವಿಧ ಪ್ರೋಟೀನ್‌ಗಳಿಂದ ಉಂಟಾಗಬಹುದು, ಆದರೆ ಕೆಲವು ಮಾತ್ರ ಗಂಭೀರ ಆರೋಗ್ಯ ಸಮಸ್ಯೆಗಳೊಂದಿಗೆ ಸಂಬಂಧ ಹೊಂದಿವೆ. ನೀವು ಹೊಂದಿರುವ ಅಮಿಲೋಯ್ಡೋಸಿಸ್ ಪ್ರಕಾರವನ್ನು ಪ್ರೋಟೀನ್‌ನ ಪ್ರಕಾರದಿಂದ ನಿರ್ಧರಿಸಲಾಗುತ್ತದೆ ಮತ್ತು ಅದು ಎಲ್ಲಿ ಸಂಗ್ರಹವಾಗಿದೆ ಎಂಬುದರ ಮೇಲೆ ಗಂಭೀರತೆಯನ್ನು ತಿಳಿಯಲಾಗುತ್ತದೆ.
ಅಮಿಲಾಯ್ಡೋಸಿಸ್ನ ಸಾಮಾನ್ಯ ಲಕ್ಷಣಗಳೇನು
ಈ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸಿ
ತಂಬಾಕು ಬಳಸಬೇಡಿ ಮತ್ತು ಮದ್ಯಪಾನ ಸೇವನೆಯನ್ನು ಮಿತಿಗೊಳಿಸಿ: ತಂಬಾಕು ಬಿಟ್ಟುಬಿಡಿ ಹಾಗೂ ಪದ್ಯಪಾನ ಸೇವನೆಯನ್ನು ಮಿತಗೊಳಿಸಿ,
ನಿಯಮಿತ ವೈದ್ಯಕೀಯ ತಪಾಸಣೆ ಮತ್ತು ಆರೈಕೆ:
ಪರೀಕ್ಷೆಗಳು ಮತ್ತು ಸ್ಕ್ರೀನಿಂಗ್‌ಗಳು ಜನರಿಗೆ ಕ್ಯಾನ್ಸರ್ ಅನ್ನು ಮೊದಲೇ ಪತ್ತೆಹಚ್ಚಲು ಸಹಕಾರಿ, ವರ್ಷಕ್ಕೆ ಎರಡು ಬಾರಿಯಾದರೂ ಜನರು ಸಂಪೂರ್ಣ ದೇಹ ತಪಾಸಣೆ ಮಾಡಿಸಿಕೊಳ್ಳಬೇಕು. ಜನರು ತಮ್ಮ ದೇಹವನ್ನು ಗಮನಿಸಬೇಕು ಮತ್ತು ಯಾವುದೇ ಕಾಯಿಲೆಯ ಬದಲಾವಣೆಗಳು, ಚಿಹ್ನೆಗಳು ಅಥವಾ ರೋಗಲಕ್ಷಣಗಳನ್ನು ನಿಕಟವಾಗಿ ನೋಡಬೇಕು.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:32 am, Sat, 11 June 22