ಕಾಂಗ್ರೆಸ್ ಕಚೇರಿಯಲ್ಲಿ ಸಿದ್ದರಾಮಯ್ಯ ಮತ್ತು ಶಿವಕುಮಾರ ಜೊತೆ ಸಿಟಿ ರವಿ ಮಾತು!!

ಕಾಂಗ್ರೆಸ್ ಕಚೇರಿಯಲ್ಲಿ ಸಿದ್ದರಾಮಯ್ಯ ಮತ್ತು ಶಿವಕುಮಾರ ಜೊತೆ ಸಿಟಿ ರವಿ ಮಾತು!!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jun 10, 2022 | 2:37 PM

‘ಏನ್ಸಾರ್ ನೀವಿಲ್ಲಿ?’ ಅಂತ ಮಾಧ್ಯಮದವರು ಕೇಳಿದಾದ ಏನು ಉತ್ತರಿಸಬೇಕೆಂದು ಗೊತ್ತಾಗದೆ, ‘ಆಕಸ್ಮಿಕವಾಗಿ ಹೋದೆ, ಅವರೊಂದಿಗೆ ಮಾತಾಡಿ ಬಹಳ ದಿನಗಳಾಗಿತ್ತಲ್ವ, ಹಾಗಾಗಿ ಮಾತಾಡುತ್ತಾ ಕುಳಿತಿದ್ದೆವು’ ಅಂತ ಹೇಳಿದರು.

Bengaluru: ಬೆಳಗಿದರೆ ಸಿದ್ದರಾಮಯ್ಯನವರನ್ನು (Siddaramaiah) ಮತ್ತು ಕಾಂಗ್ರೆಸ್ ನಾಯಕರನ್ನು ಟೀಕಿಸುತ್ತಾ ಟ್ವೀಟ್ ಮಡುವ ಸಿಟಿ ರವಿ (CT Ravi) ಅವರು ಶುಕ್ರವಾರದಂದು ವಿಧಾನ ಸೌಧದಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಕುಳಿತು ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ (DK Shivakumar) ಅವರೊಂದಿಗೆ ಮಾತುಕೆ ನಡೆಸಿದರು ಅಂತ ಹೇಳಿದರೆ ನಂಬುತ್ತೀರಾ? ರವಿ ಆಚೆ ಬಂದಾಗ ಅಲ್ಲಿ ನಿಂತಿದ್ದ ಮಾಧ್ಯಮದವರನ್ನು ನೋಡಿ ಪೆಚ್ಚಾಗಿದ್ದಂತೂ ನಿಜ.

‘ಏನ್ಸಾರ್ ನೀವಿಲ್ಲಿ?’ ಅಂತ ಮಾಧ್ಯಮದವರು ಕೇಳಿದಾದ ಏನು ಉತ್ತರಿಸಬೇಕೆಂದು ಗೊತ್ತಾಗದೆ, ‘ಆಕಸ್ಮಿಕವಾಗಿ ಹೋದೆ, ಅವರೊಂದಿಗೆ ಮಾತಾಡಿ ಬಹಳ ದಿನಗಳಾಗಿತ್ತಲ್ವ, ಹಾಗಾಗಿ ಮಾತಾಡುತ್ತಾ ಕುಳಿತಿದ್ದೆವು’ ಅಂತ ಹೇಳಿದರು. ರಾಜ್ಯಸಭಾ ಚುನಾವಣೆ ನಡೆಯುತ್ತಿರುವಾಗ ಉಭಯಕುಶಲೋಪರಿಯೇ? ಅರಗಿಸಿಕೊಳ್ಳಲು ಆಗುತ್ತಿಲ್ಲ ರವಿಯವರೇ…

ಅದಕ್ಕೇ ಹೇಳೋದು ರಾಜಕಾರಣದಲ್ಲಿ ಯಾರೂ ಶಾಶ್ವತ ವೈರಿಗಳಲ್ಲ! ಸ್ನೇಹಿತರೂ ಅಲ್ಲ!!

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.