ದೆಹಲಿ: ಚೀನಾ ಮೂಲದ ಸ್ಮಾರ್ಟ್ಫೋನ್ ಉತ್ಪಾದಕ ಕಂಪನಿ ಶಿಯೋಮಿ ಡಿಸೆಂಬರ್ 2ರ ಒಳಗಾಗಿ ತನ್ನ ಭಾರತದ ಬ್ಯಾಂಕ್ ಖಾತೆಯಲ್ಲಿ ₹ 1000 ಕೋಟಿ ಹಣವನ್ನು ಕಡ್ಡಾಯವಾಗಿ ಜಮಾ ಇಡಬೇಕೆಂದು ದೆಹಲಿ ಹೈಕೋರ್ಟ್ ಆದೇಶಿಸಿದೆ. ಜಾಗತಿಕ ಟೆಕ್ ದೈತ್ಯ ಕಂಪನಿ ಫಿಲಿಫ್ಸ್ ದಾಖಲಿಸಿದ್ದ ಪೇಟೆಂಟ್ ಉಲ್ಲಂಘನೆ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಈ ಆದೇಶ ನೀಡಿದೆ.
ಶಿಯೋಮಿ ಪೇಟೆಂಟ್ ನಿಯಮಗಳನ್ನು ಉಲ್ಲಂಘಿಸಿದೆ. ಭಾರತದಲ್ಲಿ ಶಿಯೋಮಿ ಮೊಬೈಲ್ ಮಾರಾಟದ ಜೊತೆ, ಉತ್ಪಾದನೆ, ಪ್ರಚಾರ ಮತ್ತು ಆಮದನ್ನು ತಡೆಹಿಡಿಯಬೇಕೆಂದು ಫಿಲಿಫ್ಸ್ ನ್ಯಾಯಾಲಯವನ್ನು ಕೋರಿತ್ತು. ಲಭ್ಯವಿರುವ 4ಜಿ ಫೋನ್ಗಳೂ ಸೇರಿ, ಕೆಲವು ಮಾದರಿಗಳಲ್ಲಿ ಕ್ಸಿಯೋಮಿ ಪೇಟೆಂಟ್ ಉಲ್ಲಂಘಿಸಿದೆ ಎಂದು ಫಿಲಿಫ್ಸ್ ಆರೋಪಿಸಿದೆ.
ಅಲ್ಲದೇ, ಕೇಂದ್ರ ಅಬಕಾರಿ ಮತ್ತು ಸುಂಕ ಮಂಡಳಿಗೆ ಪೇಟೆಂಟ್ ಉಲ್ಲಂಘನೆ ಆರೋಪವಿರುವ ಮಾದರಿಯ ಫೋನ್ಗಳು ಭಾರತ ಪ್ರವೇಶಿಸದಂತೆ ತಡೆಗಟ್ಟಲು ಸೂಚಿಸುವಂತೆ ಕೋರಿದೆ.
ಈ ಕುರಿತು ಶಿಯೋಮಿ ಇಂಡಿಯಾ ಯಾವುದೇ ಅಧಿಕೃತ ಪ್ರಕಟಣೆ ನೀಡಿಲ್ಲ. ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯವು 2021ರ ಜನವರಿ 18ಕ್ಕೆ ಮುಂದೂಡಿದೆ.
Published On - 12:35 pm, Wed, 2 December 20