‘ತಂದೆಯ ಕೊಂದವನನ್ನೇ ತಾಯಿ ಮದುವೆ ಆದಂತಿದೆ..’ ಬಿಎಸ್​ವೈ, ರಾಜ್ಯ ಸರ್ಕಾರದ ವಿರುದ್ಧ ವಿಶ್ವನಾಥ್​ ತೀವ್ರ ಅಸಮಾಧಾನ

ಸರ್ಕಾರ ರಚನೆ ಮಾಡುವಾಗ ನನ್ನ ಎದುರು ನಿಂತಿದ್ದ ಮುಖ್ಯಮಂತ್ರಿ ಸ್ಥಿತಿಗೂ, ಇಂದಿನ ಅವರ ನಡವಳಿಕೆಗೂ ತುಂಬ ವ್ಯತ್ಯಾಸ ಇದೆ. ರಾಜಕಾರಣದಲ್ಲಿ ಕೃತಜ್ಞತೆ ಎನ್ನುವುದು ಕಡಿಮೆಯಾಗುತ್ತಿದೆ ಎಂದು ವಿಶ್ವನಾಥ್​ ಬೇಸರ ವ್ಯಕ್ತಪಡಿಸಿದ್ದಾರೆ.

‘ತಂದೆಯ ಕೊಂದವನನ್ನೇ ತಾಯಿ ಮದುವೆ ಆದಂತಿದೆ..' ಬಿಎಸ್​ವೈ, ರಾಜ್ಯ ಸರ್ಕಾರದ ವಿರುದ್ಧ ವಿಶ್ವನಾಥ್​ ತೀವ್ರ ಅಸಮಾಧಾನ
ಎಚ್​.ವಿಶ್ವನಾಥ್​ ಮತ್ತು ಸಿಎಂ ಬಿಎಸ್.ಯಡಿಯೂರಪ್ಪ
Follow us
Lakshmi Hegde
| Updated By: ಸಾಧು ಶ್ರೀನಾಥ್​

Updated on: Dec 02, 2020 | 3:39 PM

ಮೈಸೂರು: ಹೈಕೋರ್ಟ್ ಆದೇಶದ ಅನ್ವಯ ಅನರ್ಹಗೊಂಡು, ಸದ್ಯಕ್ಕೆ ತಾನಿನ್ನು ಸಚಿವ ಆಗೋದಿಲ್ಲ ಎಂದು ಗೊತ್ತಾಗುತ್ತಿದ್ದಂತೆ ಎಚ್​.ವಿಶ್ವನಾಥ್​ ರಾಜ್ಯ ಸರ್ಕಾರ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪನವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಎಚ್​.ಡಿ.ಕುಮಾರಸ್ವಾಮಿಯವರು ಸಿಎಂ ಯಡಿಯೂರಪ್ಪನವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರ ಬಗ್ಗೆಯೂ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ನಾವು ಆಗ ಯಾರನ್ನು ವಿರೋಧ ಮಾಡಿ ಬಂದೆವೋ ಅವರೇ ಈಗ ಮುಖ್ಯಮಂತ್ರಿ ಯಡಿಯೂರಪ್ಪನವರ ಸ್ನೇಹಿತರಾಗಿದ್ದಾರೆ. ಇದೊಂತರ ತಂದೆಯನ್ನು ಕೊಂದವನನ್ನೇ ತಾಯಿ ಮದುವೆ ಆಗಿ.. ಮೆರವಣಿಗೆ ಹೊರಟಂತೆ ಇದೆ. ಶೇಕ್ಸ್​ಪಿಯರ್ ನಾಟಕವೊಂದರಲ್ಲಿ ಇದೇ ರೀತಿಯ ಪ್ರಸಂಗ ಇದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಸಿಎಂ ನಡವಳಿಕೆ ಬಗ್ಗೆ ಬೇಸರ ಸರ್ಕಾರ ರಚನೆ ಮಾಡುವಾಗ ನನ್ನ ಎದುರು ನಿಂತಿದ್ದ ಮುಖ್ಯಮಂತ್ರಿ ಸ್ಥಿತಿಗೂ, ಇಂದಿನ ಅವರ ನಡವಳಿಕೆಗೂ ತುಂಬ ವ್ಯತ್ಯಾಸ ಇದೆ. ರಾಜಕಾರಣದಲ್ಲಿ ಕೃತಜ್ಞತೆ ಎನ್ನುವುದು ಕಡಿಮೆಯಾಗುತ್ತಿದೆ. ನಾವು ಮಾಡಿದ ಕೆಲಸವನ್ನು ಯಾರೂ ನೆನಪಿಸಿಕೊಳ್ಳುತ್ತಿಲ್ಲ. ಬಿಎಸ್​ವೈ ಮೇಲೆ ಒತ್ತಡ ಇದೆ. ಹೀಗಿರುವಾಗ ನಿರ್ಧಾರ ತೆಗೆದುಕೊಂಡರೆ ನಾಯಕತ್ವದ ಮೇಲೆ ಪರಿಣಾಮ ಬೀರುತ್ತದೆ ಎಂದು ಎಚ್​.ವಿಶ್ವನಾಥ್​ ಹೇಳಿದ್ದಾರೆ.

ಹೊಳೆ ದಾಟುವ ತನಕ ಅಂಬಿಗ ಗಂಡ, ದಾಟಿದ ಬಳಿಕ ಮಿ*ಡ -ಹಳ್ಳಿಹಕ್ಕಿಯ ‘ಮರ್ಜಿ’ ಕಿ ಬಾತ್​