Loan golmaal: ಪಿಗ್ಮಿ ಏಜೆಂಟ್ ಮತ್ತು ಬ್ಯಾಂಕ್ ಸಿಬ್ಬಂದಿ ಸೇರಿಕೊಂಡು 133 ಗ್ರಾಹಕರ ನಕಲಿ ದಾಖಲೆ ಸೃಷ್ಟಿಸಿ, ಕೋಟ್ಯಂತರ ಸಾಲ ಎತ್ತಿದ್ದಾರೆ! ಮುಂದೇನು?

| Updated By: ಸಾಧು ಶ್ರೀನಾಥ್​

Updated on: Dec 08, 2022 | 11:29 AM

ಎರಡು ಕಡೆ ಕೆಲಸ ಮಾಡುತ್ತಿದ್ದ ಪಿಗ್ಮಿ ಏಜೆಂಟ್ ಹಾಗೂ ಬ್ಯಾಂಕ್ ಸಿಬ್ಬಂದಿ ಸೇರಿ ಬ್ಯಾಂಕಿನ ಗ್ರಾಹಕರಿಗೆ ಮಹಾದ್ರೋಹ ಎಸಗಿದ್ದಾರೆ. ಐವರ ವಿರುದ್ಧ ಹಂಸಭಾವಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಯಾವುದೇ ಸಾಲ ಮಾಡದ ಗ್ರಾಹಕರು ಮಾತ್ರ ಕಂಗಾಲಾಗಿದ್ದಾರೆ.

Loan golmaal: ಪಿಗ್ಮಿ ಏಜೆಂಟ್ ಮತ್ತು ಬ್ಯಾಂಕ್ ಸಿಬ್ಬಂದಿ ಸೇರಿಕೊಂಡು 133 ಗ್ರಾಹಕರ ನಕಲಿ ದಾಖಲೆ ಸೃಷ್ಟಿಸಿ, ಕೋಟ್ಯಂತರ ಸಾಲ ಎತ್ತಿದ್ದಾರೆ! ಮುಂದೇನು?
ಪಿಗ್ಮಿ ಏಜೆಂಟ್ ಮತ್ತು ಬ್ಯಾಂಕ್ ಸಿಬ್ಬಂದಿ ಸೇರಿಕೊಂಡು 133 ಗ್ರಾಹಕರ ನಕಲಿ ದಾಖಲೆ ಸೃಷ್ಟಿಸಿ, ಕೋಟ್ಯಂತರ ಸಾಲ ಎತ್ತಿದ್ದಾರೆ!
Follow us on

ಆ ಗ್ರಾಮದ ನಿಸ್ವಾರ್ಥ ಕ್ಷೇಮಾಭಿವೃದ್ಧಿ ಸಂಘದಲ್ಲಿ ಗ್ರಾಹಕರು ಸಣ್ಣಪುಟ್ಟ ಲೋನ್ ಪಡೆದುಕೊಂಡಿದ್ದರು. ಆದರೆ ಪಿಗ್ಮಿ ಏಜೆಂಟ್​ ಒಬ್ಬರು (Pigmy agent) ಎರಡು ಬ್ಯಾಂಕ್ ನಲ್ಲಿ ಕೆಲಸ ಮಾಡುತ್ತಿದ್ದರು. ಅವರು ಗ್ರಾಹಕರ ದಾಖಲೆಗಳನ್ನ ತೆಗೆದುಕೊಂಡು ಎರಡು-ಮೂರು ಲಕ್ಷ ರೂಪಾಯಿ ಸಾಲವನ್ನ (loan) ಪಡೆದುಕೊಂಡಿದ್ದಾರೆ. ಒಟ್ಟು ಐದು ಜನ ಬ್ಯಾಂಕ್ ಸಿಬ್ಬಂದಿ ಸೇರಿಕೊಂಡು ಕೋಟ್ಯಾಂತರ ರೂಪಾಯಿ ಮೋಸ ಮಾಡಿದ್ದಾರೆ. ಈಗ ಐವರ ವಿರುದ್ಧವೂ ದೂರು ದಾಖಲಾಗಿದ್ದು, ಪ್ರಕರಣ ದಾಖಲಾಗುತ್ತಿದ್ದಂತೆ ಬ್ಯಾಂಕಿನ ಆ ಸಿಬ್ಬಂದಿ ನಾಪತ್ತೆಯಾಗಿದ್ದಾರೆ. 133 ಜನ ಗ್ರಾಹಕರು ತಾವು ಸಾಲ ಪಡೆಯದೆಯೇ ಸಾಲಗಾರರಾಗಿದ್ದಾರೆ. ಗ್ರಾಹಕರ ಕೋಟಿ ಕೋಟಿ ರುಪಾಯಿಗಂತೂ ಪಂಗನಾಮ ಬಿದ್ದಿದೆ (loan golmaal).

ಹಾವೇರಿ (haveri) ಜಿಲ್ಲೆ ಹಿರೇಕೆರೂರು (hirekerur) ತಾಲ್ಲೂಕಿನ ಚಿಕ್ಕೆರೂರು (chikkerur) ಗ್ರಾಮದ ಕರ್ನಾಟಕ ಸೆಂಟ್ರಲ್ ಕೋ-ಆಪರೇಟಿವ್ ಬ್ಯಾಂಕ್ ‌ಮುಂದೆ ಸಾಲದ ನೋಟಿಸ್ ಪತ್ರಿಯನ್ನ ಹಿಡಿದು ಗ್ರಾಹಕರು ಪ್ರತಿಭಟನೆ ನಡೆಸಿದ್ದಾರೆ. ಸುಮಾರು ವರ್ಷಗಳಿಂದ ಚಿಕ್ಕೇರೂರು ಗ್ರಾಮದಲ್ಲಿ ಕರ್ನಾಟಕ ಸೆಂಟ್ರಲ್ ಕೋ ಆಪರೆಟೀವ್ ಬ್ಯಾಂಕ್ ಗ್ರಾಹಕರಿಗೆ ಸೇವೆ ನೀಡುತ್ತಾ ಬಂದಿದೆ. ಅದರೆ ಕಳೆದ ಒಂದೂವರೆ ಎರಡು ವರ್ಷದಿಂದ ಬ್ಯಾಂಕ್ ಸಿಬ್ಬಂದಿ ನಕಲಿ ದಾಖಲೆ ಸೃಷ್ಟಿ, ಕೋಟ್ಯಾಂತರ ರುಪಾಯಿ ಮೋಸ ಮಾಡಿದ್ದಾರೆ.

ಸುಮಾರು 133 ಗ್ರಾಹಕರ ನಕಲಿ ದಾಖಲೆಗಳನ್ನ ಸೃಷ್ಟಿ ಮಾಡಿ ಸುಮಾರು ಎರಡು ಕೋಟಿ ತೊಂಬತ್ತೊಂದು ಲಕ್ಷ ಐವತ್ತು ಸಾವಿರ ರುಪಾಯಿ ಲೂಟಿ ಮಾಡಿದ್ದಾರೆ. ಬ್ಯಾಂಕಿನಿಂದ ಗ್ರಾಹಕರಿಗೆ ಸಾಲವನ್ನ ಮರು ಪಾವತಿ ಮಾಡುವಂತೆ ನೋಟಿಸ್ ಬಂದ ನಂತರ ಪ್ರಕರಣ ಬೆಳಕಿಗೆ ಬಂದಿದೆ. ಪ್ರತಿನಿತ್ಯ ನೂರಾರು ಜನರು ಬ್ಯಾಂಕ್ ಬಂದು ಹೋಗುತ್ತಿದ್ದಾರೆ. ಬ್ಯಾಂಕ್ ನ ಐದು ಸಿಬ್ಬಂದಿಗಳ ಆಟಕ್ಕೆ ಗ್ರಾಹಕರು ಪರದಾಡುವ ಪರಸ್ಥಿತಿ ನಿರ್ಮಾಣವಾಗಿದೆ.

ಗ್ರಾಮದ ಕೆಲವು ಜನರು ಅದೇ ಗ್ರಾಮದ ನಿಸ್ವಾರ್ಥ ಕ್ಷೇಮಾಭಿವೃದ್ಧಿ ಸಂಘದಲ್ಲಿ ಸಣ್ಣಪುಟ್ಟ ಲೋನ್ ಪಡೆದುಕೊಂಡಿದ್ದಾರೆ. ಅಲ್ಲಿ ಪಿಗ್ಮಿ ಏಜೆಂಟ್ ಆಗಿರುವ ಚೆನ್ನವೀರಸ್ವಾಮಿ ಎಂ.ಡಿ, ಗ್ರಾಹಕರ ಆಧಾರ್​ ಕಾರ್ಡ್ ಹಾಗೂ ಇತರ ದಾಖಲೆಗಳನ್ನ ಪಡೆದುಕೊಂಡು, ಕರ್ನಾಟಕ ಸೆಂಟ್ರಲ್ ಕೋ-ಅಪರೇಟಿವ್ ಬ್ಯಾಂಕಿನಲ್ಲಿ ಎರಡು ಲಕ್ಷ ರುಪಾಯಿ ಸಾಲವನ್ನ ಪಡೆದುಕೊಂಡಿದ್ದಾರೆ. ಇದು ಗ್ರಾಹಕರಿಗೆ ಗೊತ್ತಾಗದಂತೆ ಐವರು ಬ್ಯಾಂಕ್ ನ ಸಿಬ್ಬಂದಿ ಮೋಸ ಮಾಡಿದ್ದಾರೆ.

ಸುಮಾರು 2,90,500 ರೂಪಾಯಿ ಲೂಟಿ ಮಾಡಿದ್ದಾರೆ. ಸುಮಾರು 133 ಜನ ಗ್ರಾಹಕರ ಹೆಸರಿನಲ್ಲಿ ಬ್ಯಾಂಕಿಗೆ ಪಂಗನಾಮ ಹಾಕಿರುವ ಸಿಬ್ಬಂದಿಯನ್ನ ಚಿಕ್ಕೇರೂರು ಶಾಖೆಯ ವ್ಯವಸ್ಥಾಪಕ ರವಿಕುಮಾರ ಪಾಟೀಲ, ಸಹಾಯಕ ವ್ಯವಸ್ಥಾಪಕಿ ಉಮಾದೇವಿ ಕರೋಶಿ, ಫಿಗ್ಮಿ ಏಜೆಂಟ್ ಗಳಾದ ಚೆನ್ನವೀರಸ್ವಾಮಿ. ಎಂ.ಡಿ, ಮಾಲತೇಶ ವಾಲ್ಮೀಕಿ ಮತ್ತು ಬ್ಯಾಂಕಿನ ಎಸ್ಎಚ್ ಜಿ ಪ್ರೇರಕಿ ವೀಣಾ ಸನ್ನೇರ ಎಂದು ಗುರುತಿಸಲಾಗಿದೆ.

ಇದನ್ನೂ ಓದಿ: Lease Golmaal: ಸಿಟಿ ಸೆಂಟ್ರಲ್ ಮಾಲ್ ಲೀಸ್ ವಿಸ್ತರಣೆ ವಿವಾದ ಸದ್ಯಕ್ಕೆ ಬಗೆ ಹರಿಯುವ ಲಕ್ಷಣ ಕಾಣುತ್ತಿಲ್ಲ, ಕಾಂಗ್ರೆಸ್ ಹೇಳೊದೇನು?

ಗ್ರಾಹಕರಿಗೆ ಸಾಲ ನೀಡಿದ್ದಾಗಿ ಸುಳ್ಳು ದಾಖಲೆ ಸೃಷ್ಟಿಸಿ, ಗ್ರಾಹಕರಿಗೆ ವಂಚಿಸಿ ಬ್ಯಾಂಕಿನ ಮೇಲಧಿಕಾರಿಗಳಿಗೆ ಸುಳ್ಳು ಲೆಕ್ಕವನ್ನ ಈ 5 ಸಿಬ್ಬಂದಿ ಕೊಟ್ಟಿದ್ದಾರೆ. ಧಾರವಾಡ ಶಾಖೆಯ ಲೆಕ್ಕ ವಿಭಾಗದ ಉಪಪ್ರಧಾನ ವ್ಯವಸ್ಥಾಪಕ ಶಿವಾನಂದ ಆಲದಕಟ್ಟಿಯಿಂದ ಹಂಸಭಾವಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಪ್ರಕರಣ ದಾಖಲಾಗುತ್ತಿದ್ದಂತೆ ಆ ಐದೂ ಸಿಬ್ಬಂದಿ ನಾಪತ್ತೆಯಾಗಿದ್ದಾರೆ. ಅದರೆ ಗ್ರಾಹಕರು ಮಾತ್ರ ನಾವು ಯಾವುದೇ ಸಾಲ ಮಾಡಿಲ್ಲ. ನಮಗೆ ನೋಟಿಸ್ ನೀಡಿದ್ದಾರೆ. ತಪ್ಪು ಮಾಡಿದ ಸಿಬ್ಬಂದಿಗೆ ತಕ್ಕ ಶಿಕ್ಷೆಯಾಗಿ, ನಮಗೆ ಬ್ಯಾಂಕ್ ನ ಸಿಬ್ಬಂದಿ ಯಾವುದೇ ಸಾಲ ಮಾಡಿಲ್ಲ ಅನ್ನೊ ದಾಖಲೆ ನೀಡಬೇಕು ಎಂದು ಗ್ರಾಹಕರು ಒತ್ತಾಯಿಸಿದ್ದಾರೆ.

ಒಟ್ನಲ್ಲಿ ಎರಡು ಕಡೆ ಕೆಲಸ ಮಾಡುತ್ತಿದ್ದ ಪಿಗ್ಮಿ ಏಜೆಂಟ್ ಹಾಗೂ ಬ್ಯಾಂಕ್ ಸಿಬ್ಬಂದಿ ಸೇರಿ ಬ್ಯಾಂಕಿನ ಗ್ರಾಹಕರಿಗೆ ಮಹಾದ್ರೋಹ ಎಸಗಿದ್ದಾರೆ. ಐವರ ವಿರುದ್ಧ ಹಂಸಭಾವಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಯಾವುದೇ ಸಾಲ ಮಾಡದ ಗ್ರಾಹಕರು ಮಾತ್ರ ಕಂಗಾಲಾಗಿದ್ದಾರೆ. ಬ್ಯಾಂಕ್ ಸಿಬ್ಬಂದಿಯ ಮೇಲೆ ಕಾನೂನು ಕ್ರಮ ಜರುಗಿಸಿ ಗ್ರಾಹಕರಿಗೆ ನ್ಯಾಯವನ್ನ ಕೊಡಿಸುವ ಕಾರ್ಯವನ್ನ ಜಿಲ್ಲಾಡಳಿತ ಹಾಗೂ ಪೊಲೀಸರು ಮಾಡಬೇಕಿದೆ. (ವರದಿ: ರವಿ ಹೂಗಾರ, ಟಿವಿ 9, ಹಾವೇರಿ)

ಹೆಚ್ಚು ಜಿಲ್ಲಾ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ