ವರದಕ್ಷಿಣೆ: ತಾಯಿ ಮನೆಯಲ್ಲಿ ಗಾಯಕಿ ಸುಶ್ಮಿತಾ ಆತ್ಮಹತ್ಯೆ, ಗಂಡ ಅಬ್​ಸ್ಕಾಂಡ್​

|

Updated on: Feb 17, 2020 | 4:09 PM

ಬೆಂಗಳೂರು: ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಸಿನಿಮಾ ಹಿನ್ನೆಲೆ ಗಾಯಕಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಾಳಗಾಳದಲ್ಲಿ ನಡೆದಿದೆ. ಸುಶ್ಮಿತಾ(26) ಆತ್ಮಹತ್ಯೆಗೆ ಶರಣಾದ ಹಿನ್ನೆಲೆ ಗಾಯಕಿ. ಒಂದೂವರೆ ವರ್ಷದ ಹಿಂದೆ ಶರತ್ ಕುಮಾರ್ ಜೊತೆ ಸುಶ್ಮಿತಾ ಮದುವೆಯಾಗಿತ್ತು. ವರದಕ್ಷಿಣೆಗಾಗಿ ಸುಶ್ಮಿತಾಗೆ ಪತಿ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಗಂಡನ ಕಿರುಕುಳದಿಂದ ಬೇಸತ್ತು ತಾಯಿಯ ಮನೆಯಲ್ಲಿ ತಡರಾತ್ರಿ ಆತ್ಮಹತ್ಯೆಗೆ ಶರಣಾಗಿದ್ದಾರೆಂದು ಪೋಷಕರು ಆರೋಪಿಸಿದ್ದಾರೆ. ಆತ್ಮಹತ್ಯೆಗೂ ಮುನ್ನ ತಾಯಿಗೆ ಸುಶ್ಮಿತಾ ವಾಟ್ಸಪ್ ಸಂದೇಶ ರವಾನಿಸಿದ್ದಾರೆ. ಈ ಸಂಬಂಧ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ […]

ವರದಕ್ಷಿಣೆ: ತಾಯಿ ಮನೆಯಲ್ಲಿ ಗಾಯಕಿ ಸುಶ್ಮಿತಾ ಆತ್ಮಹತ್ಯೆ, ಗಂಡ ಅಬ್​ಸ್ಕಾಂಡ್​
Follow us on

ಬೆಂಗಳೂರು: ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಸಿನಿಮಾ ಹಿನ್ನೆಲೆ ಗಾಯಕಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಾಳಗಾಳದಲ್ಲಿ ನಡೆದಿದೆ. ಸುಶ್ಮಿತಾ(26) ಆತ್ಮಹತ್ಯೆಗೆ ಶರಣಾದ ಹಿನ್ನೆಲೆ ಗಾಯಕಿ.

ಒಂದೂವರೆ ವರ್ಷದ ಹಿಂದೆ ಶರತ್ ಕುಮಾರ್ ಜೊತೆ ಸುಶ್ಮಿತಾ ಮದುವೆಯಾಗಿತ್ತು. ವರದಕ್ಷಿಣೆಗಾಗಿ ಸುಶ್ಮಿತಾಗೆ ಪತಿ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಗಂಡನ ಕಿರುಕುಳದಿಂದ ಬೇಸತ್ತು ತಾಯಿಯ ಮನೆಯಲ್ಲಿ ತಡರಾತ್ರಿ ಆತ್ಮಹತ್ಯೆಗೆ ಶರಣಾಗಿದ್ದಾರೆಂದು ಪೋಷಕರು ಆರೋಪಿಸಿದ್ದಾರೆ.

ಆತ್ಮಹತ್ಯೆಗೂ ಮುನ್ನ ತಾಯಿಗೆ ಸುಶ್ಮಿತಾ ವಾಟ್ಸಪ್ ಸಂದೇಶ ರವಾನಿಸಿದ್ದಾರೆ. ಈ ಸಂಬಂಧ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Published On - 3:12 pm, Mon, 17 February 20