ಪ್ರಧಾನಿ ಮೋದಿ ಮಾಡಿದ ಯಾವ ಒಳ್ಳೆಯ ಕೆಲಸ ಮುಂದಿಟ್ಟುಕೊಂಡು ಬಿಜೆಪಿ ವೋಟು ಕೇಳುತ್ತದಂತೆ? ಸಿದ್ದರಾಮಯ್ಯ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jun 07, 2022 | 6:55 PM

ಮೋದಿ ಪ್ರಧಾನ ಮಂತ್ರಿಯಾಗಿದ್ದಾಗ 53 ಲಕ್ಷ ಕೋಟಿ ರೂಪಾಯಿಗಳಷ್ಟಿದ್ದ ಭಾರತದ ಸಾಲ ಈಗ 155 ಲಕ್ಷ ಕೋಟಿ ರೂ. ಅಗಿದೆ ಎಂದು ಹೇಳಿದ ಅವರು ಆರೆಸ್ಸೆಸ್ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಲಿಲ್ಲ.

Belagavi: ಮಂಗಳವಾರ ಬೆಳಗಾವಿಯಲ್ಲಿ ಸುದ್ದಿಗೋಷ್ಟಿಯೊಂದನ್ನು ಉದ್ದೇಶಿಸಿ ಮಾತಾಡುವಾಗ ಸಿದ್ದರಾಮಯ್ಯನವರು (Siddaramaiah) ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ (PM Narendra Modi) ಯಾವ ಒಳ್ಳೆಯ ಕೆಲಸ ನೋಡಿ ವೋಟು ಕೇಳ್ತೀವಿ ಅಂತ ಬಿಜೆಪಿಯುವರು ಹೇಳುತ್ತಿದ್ದಾರೆ? ಪೆಟ್ರೋಲಿಯಂ ಪದಾರ್ಥಗಳು, ಗ್ಯಾಸ್ ಸಿಲಿಂಡರ್ ಗಳ ಮೇಲೆ ಅಬ್ಕಾರಿ ಸುಂಕ (excise duty) ಹೆಚ್ಚು ಮಾಡಿದ್ದು, ನಿರುದ್ಯೋಗ ಸಮಸ್ಯೆ ಹೆಚ್ಚಾಗಿದ್ದು ಒಳ್ಳೆಯದಾ? ಜಿ ಎಸ್ ಟಿ, ನೋಟುಗಳ ಅಮಾನ್ಯೀಕರಣ ಮಾಡಿ ದೇಶದ ಆರ್ಥಿಕ ಸ್ಥಿತಿಯನ್ನು ಹಾಳು ಮಾಡಿ ದೇಶವನ್ನು ಸಾಲದ ಸುಳಿಗೆ ದೂಡಿದ್ದು ಒಳ್ಳೆಯದಾ ಅಂತ ಕೇಳಿದರು. ಮೋದಿ ಪ್ರಧಾನ ಮಂತ್ರಿಯಾಗಿದ್ದಾಗ 53 ಲಕ್ಷ ಕೋಟಿ ರೂಪಾಯಿಗಳಷ್ಟಿದ್ದ ಭಾರತದ ಸಾಲ ಈಗ 155 ಲಕ್ಷ ಕೋಟಿ ರೂ. ಅಗಿದೆ ಎಂದು ಹೇಳಿದ ಅವರು ಆರೆಸ್ಸೆಸ್ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಲಿಲ್ಲ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.