ಗದಗ: ಮರಾಠ ಅಭಿವೃದ್ದಿ ನಿಗಮ ವಿರೋಧಿಸಿ ರಾಜ್ಯದ ಹಲವು ಕಡೆಗಳಲ್ಲಿ ಬಂದ್ ಆಗಿದ್ದು, ಗದಗದಲ್ಲೂ ಅಂಗಡಿ, ಹೋಟೆಲ್ ಮುಚ್ಚಿಸಲು ಮುಂದಾದ ಕರವೇ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.
ನಗರದ ಮುಳಗುಂದ ನಾಕಾದಲ್ಲಿ ಬಲವಂತವಾಗಿ ಅಂಗಡಿ ಹಾಗೂ ಹೋಟೆಲ್ಗಳನ್ನು ಮುಚ್ಚಿಸಲು ಯತ್ನಿಸಿದ ಕರವೇ ಕಾರ್ಯಕರ್ತರನ್ನು ಪೊಲೀಸರು ಬಾಗಿಲುಗಳು ಮುಚ್ಚದಂತೆ ತಡೆದರು. ಅಂಗಡಿ ಮುಂಗಟ್ಟು ಮುಚ್ಚಿಸಲು ಅವಕಾಶವಿಲ್ಲ ಎಂದು ಪೊಲೀಸರು ತಿಳಿ ಹೇಳಿದ್ದರು, ಇದಕ್ಕೆ ಕರವೇ ಕಾರ್ಯಕರ್ತರು ಬಗ್ಗಲಿಲ್ಲ. ಈ ವಿಚಾರವಾಗಿ ಪೊಲೀಸ್ ಹಾಗೂ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು. ಆ ನಂತರ ನಿಯಂತ್ರಣಕ್ಕೆ ಬಾರದ ಕಾರ್ಯಕರ್ತರನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ.
Karnataka Bandh LIVE Updates | ಮರಾಠ ಅಭಿವೃದ್ಧಿ ನಿಗಮ ರಚನೆ ವಿರೋಧಿಸಿ ಕರ್ನಾಟಕ ಬಂದ್