ಬೆಂಗಳೂರು: ಗಾಳಿಪಟದ ಮಾಂಜಾ ದಾರಕ್ಕೆ ಸಿಲುಕಿದ್ದ ಹದ್ದು ಒಂದನ್ನು ಪೊಲೀಸರು ರಕ್ಷಿಸಿರುವ ಘಟನೆ ರವೀಂದ್ರ ಕಲಾಕ್ಷೇತ್ರದ ಬಳಿ ನಡೆದಿದೆ. ಗಾಳಿಪಟದ ಮಾಂಜಾ ದಾರಕ್ಕೆ ತಗಲಾಕಿಕೊಂಡು ಮರದಲ್ಲಿ ಸಿಲುಕಿದ್ದ ಗರುಡ ಪಕ್ಷಿ ವಿಲವಿಲನೆ ಒದ್ದಾಡುತ್ತಿದ್ದ ದೃಶ್ಯ ಟೌನ್ಹಾಲ್ ಬಳಿಯಿರುವ ರವೀಂದ್ರ ಕಲಾಕ್ಷೇತ್ರದಲ್ಲಿ ಪೊಲೀಸರ ಕಣ್ಣಿಗೆ ಬಿತ್ತು. ಕೂಡಲೇ ಅದರ ರಕ್ಷಣೆಗೆ ಧಾವಿಸಿದ SJ ಪಾರ್ಕ್ ಪೊಲೀಸ್ ಠಾಣೆಯ ಸಿಬ್ಬಂದಿ ಮರವನ್ನು ಹತ್ತಿ, ಹದ್ದನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹದ್ದನ್ನು ರಕ್ಷಿಸಿದ ಪೊಲೀಸ್ ಸಿಬ್ಬಂದಿ ಚಂದ್ರ ಕುಮಾರ್ ಕೆಲಸಕ್ಕೆ ಸ್ಥಳೀಯರಿಂದ ಮೆಚ್ಚುಗೆ ವ್ಯಕ್ತವಾಯಿತು.
Follow us on
ಬೆಂಗಳೂರು: ಗಾಳಿಪಟದ ಮಾಂಜಾ ದಾರಕ್ಕೆ ಸಿಲುಕಿದ್ದ ಹದ್ದು ಒಂದನ್ನು ಪೊಲೀಸರು ರಕ್ಷಿಸಿರುವ ಘಟನೆ ರವೀಂದ್ರ ಕಲಾಕ್ಷೇತ್ರದ ಬಳಿ ನಡೆದಿದೆ.
ಗಾಳಿಪಟದ ಮಾಂಜಾ ದಾರಕ್ಕೆ ತಗಲಾಕಿಕೊಂಡು ಮರದಲ್ಲಿ ಸಿಲುಕಿದ್ದ ಗರುಡ ಪಕ್ಷಿ ವಿಲವಿಲನೆ ಒದ್ದಾಡುತ್ತಿದ್ದ ದೃಶ್ಯ ಟೌನ್ಹಾಲ್ ಬಳಿಯಿರುವ ರವೀಂದ್ರ ಕಲಾಕ್ಷೇತ್ರದಲ್ಲಿ ಪೊಲೀಸರ ಕಣ್ಣಿಗೆ ಬಿತ್ತು.
ಕೂಡಲೇ ಅದರ ರಕ್ಷಣೆಗೆ ಧಾವಿಸಿದ SJ ಪಾರ್ಕ್ ಪೊಲೀಸ್ ಠಾಣೆಯ ಸಿಬ್ಬಂದಿ ಮರವನ್ನು ಹತ್ತಿ, ಹದ್ದನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹದ್ದನ್ನು ರಕ್ಷಿಸಿದ ಪೊಲೀಸ್ ಸಿಬ್ಬಂದಿ ಚಂದ್ರ ಕುಮಾರ್ ಕೆಲಸಕ್ಕೆ ಸ್ಥಳೀಯರಿಂದ ಮೆಚ್ಚುಗೆ ವ್ಯಕ್ತವಾಯಿತು.