ಖಾಕಿ ಪಡೆ ಭರ್ಜರಿ ಬೇಟೆ: ಫೈರಿಂಗ್ ಮಾಡಿ 4 ಕೊಲೆ ಆರೋಪಿಗಳ ಅರೆಸ್ಟ್​

| Updated By: ಸಾಧು ಶ್ರೀನಾಥ್​

Updated on: Nov 02, 2020 | 9:57 AM

ಆನೇಕಲ್: ಬೆಳ್ಳಂ ಬೆಳಗ್ಗೆಯೇ ಖಾಕಿ ಗನ್ ಸದ್ದು ಮಾಡಿದೆ. 4 ಕೊಲೆ ಆರೋಪಿಗಳ ಮೇಲೆ ಪೊಲೀಸರು ಫೈರಿಂಗ್ ಮಾಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಆನೇಕಲ್ ತಾಲೂಕಿನ ಗ್ರಾಮಗಳಾದ ಅವಡದೇವನಹಳ್ಳಿ, ಮುತ್ಯಾನಲ್ಲೂರಿನಲ್ಲಿ ನಡೆದಿದೆ. ಅವಡದೇವನಹಳ್ಳಿಯಲ್ಲಿ ಗೋಪಿ ಮತ್ತು ಗಂಗಾ ಎಂಬ ಇಬ್ಬರು ಆರೋಪಿಗಳ ಮೇಲೆ ಫೈರಿಂಗ್ ಆದ್ರೆ ಮುತ್ಯಾನಲ್ಲೂರಿನಲ್ಲಿ ಅನಂತ್, ಬಸವನ ಮೇಲೆ ಫೈರಿಂಗ್ ನಡೆದಿದೆ. ಅಕ್ಟೋಬರ್ 30ರಂದು ಶೆಟ್ಟಿಹಳ್ಳಿಯಲ್ಲಿ ವಿನೀತ್ ಕೊಲೆ ಹಿನ್ನೆಲೆಯಲ್ಲಿ ಆರೋಪಿಗಳ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಆನೇಕಲ್ ಠಾಣೆ […]

ಖಾಕಿ ಪಡೆ ಭರ್ಜರಿ ಬೇಟೆ: ಫೈರಿಂಗ್ ಮಾಡಿ 4 ಕೊಲೆ ಆರೋಪಿಗಳ ಅರೆಸ್ಟ್​
Follow us on

ಆನೇಕಲ್: ಬೆಳ್ಳಂ ಬೆಳಗ್ಗೆಯೇ ಖಾಕಿ ಗನ್ ಸದ್ದು ಮಾಡಿದೆ. 4 ಕೊಲೆ ಆರೋಪಿಗಳ ಮೇಲೆ ಪೊಲೀಸರು ಫೈರಿಂಗ್ ಮಾಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಆನೇಕಲ್ ತಾಲೂಕಿನ ಗ್ರಾಮಗಳಾದ ಅವಡದೇವನಹಳ್ಳಿ, ಮುತ್ಯಾನಲ್ಲೂರಿನಲ್ಲಿ ನಡೆದಿದೆ. ಅವಡದೇವನಹಳ್ಳಿಯಲ್ಲಿ ಗೋಪಿ ಮತ್ತು ಗಂಗಾ ಎಂಬ ಇಬ್ಬರು ಆರೋಪಿಗಳ ಮೇಲೆ ಫೈರಿಂಗ್ ಆದ್ರೆ ಮುತ್ಯಾನಲ್ಲೂರಿನಲ್ಲಿ ಅನಂತ್, ಬಸವನ ಮೇಲೆ ಫೈರಿಂಗ್ ನಡೆದಿದೆ.

ಅಕ್ಟೋಬರ್ 30ರಂದು ಶೆಟ್ಟಿಹಳ್ಳಿಯಲ್ಲಿ ವಿನೀತ್ ಕೊಲೆ ಹಿನ್ನೆಲೆಯಲ್ಲಿ ಆರೋಪಿಗಳ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಆನೇಕಲ್ ಠಾಣೆ ಪೊಲೀಸರು ಅವಡದೇವನಹಳ್ಳಿಯಲ್ಲಿದ್ದ ಆರೋಪಿಗಳಾದ ಗಂಗಾ ಮತ್ತು ಗೋಪಿಯನ್ನು ಶರಣಾಗುವಂತೆ ಸೂಚಿಸಿದ್ದಾರೆ. ಆದ್ರೆ ಆರೋಪಿಗಳು ಕಾನ್ಸ್‌ಟೇಬಲ್‌ಗಳಾದ ಮಹೇಶ್ ಮತ್ತು ಸುರೇಶ್ ಮೇಲೆ ಹಲ್ಲೆ ಮಾಡಿ ಪರಾರಿಗೆ ಯತ್ನಿಸಿದ್ದಾರೆ. ಹೀಗಾಗಿ ಆರೋಪಿಗಳ ಕಾಲಿಗೆ ಆನೇಕಲ್ ಡಿವೈಎಸ್‌ಪಿ ಮಹಾದೇವ್ ಮತ್ತು ಆನೇಕಲ್ ಠಾಣೆ ಇನ್ಸ್‌ಪೆಕ್ಟರ್ ಕೃಷ್ಣರಿಂದ ಫೈರಿಂಗ್ ನಡೆದಿದೆ.

ಇನ್ನು ಮುತ್ಯಾನಲ್ಲೂರಿನಲ್ಲಿ ಅನಂತ್ ಮತ್ತು ಬಸವನಿರುವ ಮಾಹಿತಿ ತಿಳಿದ ಅತ್ತಿಬೆಲೆ, ಸರ್ಜಾಪುರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಆರೋಪಿಗಳಿಗೆ ಶರಣಾಗುವಂತೆ ಸೂಚಿಸಿದ್ರು. ಆದ್ರೆ ಆರೋಪಿಗಳು ಶರಣಾಗದೆ PCಗಳಾದ ಇರ್ಫಾನ್, ನಾಗರಾಜ್‌ ಮೇಲೆ ಹಲ್ಲೆ ಮಾಡಿ ಪರಾರಿಯಾಗುವುದಕ್ಕೆ ಯತ್ನಿಸಿದ್ದಾರೆ. ಹೀಗಾಗಿ ಅತ್ತಿಬೆಲೆ ಠಾಣೆಯ ಇನ್ಸ್‌ಪೆಕ್ಟರ್ ಸತೀಶ್ ಮತ್ತು ಸರ್ಜಾಪುರ ಎಸ್‌ಐ ಹರೀಶ್‌ರಿಂದ ಗುಂಡಿನ ದಾಳಿ ನಡೆದಿದೆ. ಸದ್ಯ ನಾಲ್ವರು ಆರೋಪಿಗಳ ಕಾಲಿಗೆ ಗುಂಡು ಹಾರಿಸಿ ಬಂಧಿಸಲಾಗಿದೆ.

Published On - 8:21 am, Mon, 2 November 20