
ಬೆಳಗಾವಿ: ಟೆಂಪೋ ಮತ್ತು ಲಾರಿ ಮಧ್ಯೆ ಕಾರು ನುಗ್ಗಿ ಪಲ್ಟಿಯಾಗಿ ಕಾರು ಸವಾರ ಮೃತಪಟ್ಟಿರುವ ಘಟನೆ ಕಿತ್ತೂರು ತಾಲೂಕಿನ ಎಂ.ಕೆ. ಹುಬ್ಬಳ್ಳಿ ಬಳಿ ನಡೆದಿದೆ. ಈ ಭೀಕರ ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ನಿನ್ನೆ ಓವರ್ ಟೇಕ್ ಮಾಡಲು ಹೋಗಿ ಟೆಂಪೋ ಮತ್ತು ಲಾರಿ ಮಧ್ಯೆ ಕಾರು ನುಗ್ಗಿ ಪಲ್ಟಿಯಾಗಿತ್ತು. ಘಟನೆಯಲ್ಲಿ ಕಾರಿನಲ್ಲಿದ್ದ ಓರ್ವ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಹಿರೇಬಾಗೇವಾಡಿ ಗ್ರಾಮದ ದೇವರಾಜ್ ಈಳಗೇರ್(22) ಸ್ಥಳದಲ್ಲೇ ಸಾವನ್ನಪ್ಪಿದ್ರು. ಅಪಘಾತದ ಭೀಕರ ದೃಶ್ಯ ಹೂವಿನ ಹಳ್ಳದಲ್ಲಿರುವ ಪೆಟ್ರೋಲ್ ಬಂಕ್‌ನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಕಿತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Published On - 3:39 pm, Thu, 23 July 20