ಕೊರವ ಕುಟುಂಬಗಳಿಗೆ ಕೊರೊನಾ ಕಂಟಕ, ಪರದಾಡುತ್ತಿವೆ ಪುಟಾಣಿ ಮಕ್ಕಳು

ಬೀದರ್: ಕೊರೊನಾ ಮಾಹಾಮಾರಿ ಆ ಜನಾಂಗದ ಬದುಕಿನ ಮೇಲೆ ಬಾರಿ ಹೊಡೆತ ಕೊಟ್ಟಿದ್ದೆ. ಪ್ರತಿನಿತ್ಯ ದುಡಿದು ಹೊಟ್ಟೆ ತುಂಬ ಊಟ ಮಾಡುತ್ತಿದ್ದವರೀಗ ಅರೆಹೊಟ್ಟೆಯಲ್ಲೇ ಮಲಗಬೇಕಾಗಿದೆ. ಪ್ರತಿ ದಿನ ತಾವು ತಯಾರಿಸಿದ ವಸ್ತುಗಳನ್ನ ಮಾರಾಟ ಮಾಡಿ ಜೀವನ ನಡೆಸುತ್ತಿದ್ದವರು ಈಗ ತುತ್ತು ಅನ್ನಕ್ಕಾಗಿ ಪರದಾಡುವಂತಾಗಿದೆ. ಚಿಕ್ಕ ಚಿಕ್ಕ ಮಕ್ಕಳಿಗೆ ಪೌಷ್ಠಿಕ ಆಹಾರ ನೀಡಲಾಗುತ್ತಿಲ್ಲ. ದಾನಿಗಳು ಕೊಡುವ ಆಹಾರವೇ ಇವರ ಹೊಟ್ಟೆತುಂಬಿಸುತ್ತಿದೆ. ಹೌದು ಹಿಂದುಳಿದ ಜಿಲ್ಲೆ ಬೀದರ್​ನಲ್ಲಿ ಕೊರವ ಸಮುದಾಯದ ಕುಟುಂಬಗಳು ಮಾಹಾಮಾರಿ ಕೊರೊನಾ ಹೊಡೆತಕ್ಕೆ ನಲುಗಿ ಹೋಗಿವೆ. ಒಂದೊತ್ತಿನ […]

ಕೊರವ ಕುಟುಂಬಗಳಿಗೆ ಕೊರೊನಾ ಕಂಟಕ, ಪರದಾಡುತ್ತಿವೆ ಪುಟಾಣಿ ಮಕ್ಕಳು
Follow us
ಆಯೇಷಾ ಬಾನು
| Updated By:

Updated on:Jul 25, 2020 | 12:40 PM

ಬೀದರ್: ಕೊರೊನಾ ಮಾಹಾಮಾರಿ ಆ ಜನಾಂಗದ ಬದುಕಿನ ಮೇಲೆ ಬಾರಿ ಹೊಡೆತ ಕೊಟ್ಟಿದ್ದೆ. ಪ್ರತಿನಿತ್ಯ ದುಡಿದು ಹೊಟ್ಟೆ ತುಂಬ ಊಟ ಮಾಡುತ್ತಿದ್ದವರೀಗ ಅರೆಹೊಟ್ಟೆಯಲ್ಲೇ ಮಲಗಬೇಕಾಗಿದೆ. ಪ್ರತಿ ದಿನ ತಾವು ತಯಾರಿಸಿದ ವಸ್ತುಗಳನ್ನ ಮಾರಾಟ ಮಾಡಿ ಜೀವನ ನಡೆಸುತ್ತಿದ್ದವರು ಈಗ ತುತ್ತು ಅನ್ನಕ್ಕಾಗಿ ಪರದಾಡುವಂತಾಗಿದೆ. ಚಿಕ್ಕ ಚಿಕ್ಕ ಮಕ್ಕಳಿಗೆ ಪೌಷ್ಠಿಕ ಆಹಾರ ನೀಡಲಾಗುತ್ತಿಲ್ಲ. ದಾನಿಗಳು ಕೊಡುವ ಆಹಾರವೇ ಇವರ ಹೊಟ್ಟೆತುಂಬಿಸುತ್ತಿದೆ.

ಹೌದು ಹಿಂದುಳಿದ ಜಿಲ್ಲೆ ಬೀದರ್​ನಲ್ಲಿ ಕೊರವ ಸಮುದಾಯದ ಕುಟುಂಬಗಳು ಮಾಹಾಮಾರಿ ಕೊರೊನಾ ಹೊಡೆತಕ್ಕೆ ನಲುಗಿ ಹೋಗಿವೆ. ಒಂದೊತ್ತಿನ ಊಟಕ್ಕೂ ಪರದಾಡುವಂತ ಗಂಭೀರ ಸ್ಥಿತಿ ಇವರಿಗೆ ಎದುರಾಗಿದೆ. ಈ ಕೊರವ ಸಮುದಾಯದ ಮೂಲ ಕುಲ ಕಸಬು ಬುಟ್ಟಿ ತಯ್ಯಾರಿಸಿ ಹಳ್ಳಿ ಹಳ್ಳಿಗೆ ಹೋಗಿ ಮಾರಾಟ ಮಾಡುವುದು.

ಬಂದ ಹಣದಲ್ಲಿ ಕುಟುಂಬ ನಿರ್ವಹಣೆ ಮಾಡುತ್ತಿದ್ದರು ಆದರೀಗ ಕೊರೊನಾ ಎಂಬ ಮಹಾಮಾರಿಯಿಂದ ಇಡೀ ಸಮುದಾಯ ಸಂಕಷ್ಟ ಎದುರಿಸುವಂತಾಗಿದೆ. ಬುಟ್ಟಿ ನೇಯುವ ಕಾಯಕ ಬಿಟ್ಟರೆ ಇವರಿಗೆ ಬೇರೆ ಉದ್ಯೋಗ ಗೊತ್ತಿಲ್ಲ ಆದರೇ ಈಗ ಲಾಕ್​ಡೌನ್​ನಿಂದಾಗಿ ತಾವು ತಯಾರಿಸಿದ ವಸ್ತುಗಳನ್ನ ಮಾರಾಟ ಮಾಡಲಾಗದೆ ಬದುಕು ಸಾಗಿಸುವುದು ಈ ಸಮುದಾಯದವರಿಗೆ ಕಷ್ಟವಾಗುತ್ತಿದೆ.

ಸರ್ಕಾರದ ನೆರವೂ ಸಿಗದೆ ಪರದಾಡುತ್ತಿವೆ 125 ಕುಟುಂಬಗಳು ಈ ಜಿಲ್ಲೆಯ ಎಲ್ಲಾ ತಾಲೂಕಿನಲ್ಲಿಯೂ ಈ ಜಾನಾಂಗದವರಿದ್ದು ಸುಮಾರು 125 ಕುಟುಂಬಗಳು ಜಿಲ್ಲೆಯ ನಾನಾ ಭಾಗದಲ್ಲಿ ವಾಸ ಮಾಡುತ್ತಿವೆ. ಗ್ರಾಮೀಣ ಭಾಗದಲ್ಲಿ ಈ ಸಮುದಾಯದವರು ವಾಸ ಮಾಡುವುದರಿಂದ ಯಾರಿಗೂ ಕೂಡಾ ಇವರ ಸಮಸ್ಯೆ ಅರ್ಥವಾಗಿಲ್ಲ ಇದರ ಜೊತೆಗೆ ಸರಕಾರದಿಂದಲೂ ಕೂಡಾ ಇವರಿಗೆ ಯಾವುದೆ ಹಣಕಾಸಿನ ಹಾಗೂ ದಿನಸಿ ಪದಾರ್ಥಗಳನ್ನ ಕೂಡಾ ನೀಡಿಲ್ಲ.

ಇದರಿಂದ ಈ ಕುಟುಂಬಗಳು ಊಟಕ್ಕಾಗಿ ಪರದಾಟುತ್ತಿವೆ. ಇನ್ನೂ ಇವರು ಬುಟ್ಟಿ ತಯಾರಿಸಲು ಬಳಸುವ ಕಚ್ಚಾವಸ್ತುಗಳನ್ನ ಅಕ್ಕ ಪಕ್ಕದ ಜಿಲ್ಲೆಗಳಿಂದ ಖರೀದಿಸಿ ತಂದು ಬುಟ್ಟಿ ರೆಡಿ ಮಾಡಿ ಮಾರಾಟ ಮಾಡುತ್ತಿದ್ದರು. ಆದರೆ ಕೊರೊನಾದಿಂದಾಗಿ ಇದಕ್ಕೂ ಈಗ ಸಮಸ್ಯೆಯಾಗಿದೆ. ಇನ್ನೂ ಸ್ಟಾಕ್ ಇರುವ ಕಚ್ಚಾ ವಸ್ತುಗಳಿಂದ ತಯಾರಿಸಿ ವಸ್ತುಗಳನ್ನ ಕೂಡಾ ಮಾರಾಟ ಮಾಡುವುದಕ್ಕೂ ಕೂಡಾ ಸಾಧ್ಯವಾಗದೆ ಕಂಗಾಲಾಗಿದ್ದಾರೆ.

ಕೊರೊನಾ ಎಂಬ ಮಾಹಾಮಾರಿ ಸಾವಿರಾರು ಜನರ ಹೊಟ್ಟೆಯ ಮೇಲೆ ಹೊಡೆತ ಕೊಟ್ಟಿದೆ. ದುಡಿದು ಯಾರ ಹಂಗಿಲ್ಲದೆ ಬದುಕುತ್ತಿದ್ದವರೂ ಕೂಡಾ ಇನ್ನೊಬ್ಬರಿಗೆ ಕೈಯೊಡ್ಡುವ ಹಾಗಾಗಿದೆ. ಏನೇ ಇರಲಿ ಈ ಕೊರವ ಜನಾಂಗ ರಾಜ್ಯದ ಮೂಲೆ ಮೂಲೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ವಾಸವಾಗಿದ್ದಾರೆ. ಇಂತಹ ಜನರನ್ನ ಸರಕಾರ ಗುರುತಿಸಿ ಅವರಿಗೆ ಸಹಾಯ ಮಾಡಬೇಕಾಗಿದೆ, ಇದರಿಂದ ಪುಟ್ಟ ಪುಟ್ಟ ಮಕ್ಕಳು ಮಹಿಳೆಯರು ಹೊಟ್ಟೆತುಂಬಾ ಊಟ ಮಾಡಬೇಹುದೇನೋ. -ಸುರೇಶ್ ನಾಯಕ್

Published On - 4:08 pm, Thu, 23 July 20