ಡಿ.ಜೆ ಹಳ್ಳಿ‌ ಗಲಾಟೆ: ಆರೋಪಿಗಳ ವಿರುದ್ಧ UAPA ಕಾಯ್ದೆ ಅಸ್ತ್ರ

|

Updated on: Aug 24, 2020 | 8:11 AM

ಬೆಂಗಳೂರು: ಡಿ.ಜೆ ಹಳ್ಳಿ‌, ಕೆ.ಜಿ‌ ಹಳ್ಳಿ‌ ಠಾಣಾ ವ್ಯಾಪ್ತಿಯಲ್ಲಿ ನಡೆದ ಗಲಭೆ ಪ್ರಕರಣ‌ಕ್ಕೆ ಸಂಬಂಧಿಸಿ ಪೊಲೀಸರಿಂದ ಬಂಧಿತ ಆರೋಪಿಗಳಿಗೆ ಸಂಕಷ್ಟ ಶುರುವಾಗಲಿದೆ. ಮುಲಾಜಿಲ್ಲದೇ UAPA ಕಾಯ್ದೆ ಅಸ್ತ್ರ ಪ್ರಯೋಗಿಸಲು‌ ಪೊಲೀಸರು ಮುಂದಾಗಿದ್ದಾರೆ. 380ಕ್ಕೂ ಅಧಿಕ ಆರೋಪಿಗಳಿಗೆ UAPA ಕಾಯ್ದೆ ಅನ್ವಯಿಸಲು ಪೊಲೀಸರು ನಿರ್ಧರಿಸಿದ್ದಾರೆ. UAPA ಕಾಯ್ದೆಯಡಿ ಈ ಹಿಂದೆ 61 ಜನರನ್ನು ಅರೆಸ್ಟ್ ಮಾಡಲಾಗಿತ್ತು. ಗಲಭೆಗೆ ಸಿದ್ಧವಾಗಿ ಬಂದಿದ್ದ ಆರೋಪಿಗಳು. ಬಂಧಿತರಲ್ಲಿ‌ ಹಲವರು ಎರಡೂ ಠಾಣೆಗಳ‌ ಬಳಿ ಹಾಜರಾಗಿದ್ದು ತನಿಖೆ ವೇಳೆ ಅದು ಸಾಬೀತಾಗಿತ್ತು. ಆರೋಪಿಗಳು ಮೊದಲು […]

ಡಿ.ಜೆ ಹಳ್ಳಿ‌ ಗಲಾಟೆ: ಆರೋಪಿಗಳ ವಿರುದ್ಧ UAPA ಕಾಯ್ದೆ ಅಸ್ತ್ರ
Follow us on

ಬೆಂಗಳೂರು: ಡಿ.ಜೆ ಹಳ್ಳಿ‌, ಕೆ.ಜಿ‌ ಹಳ್ಳಿ‌ ಠಾಣಾ ವ್ಯಾಪ್ತಿಯಲ್ಲಿ ನಡೆದ ಗಲಭೆ ಪ್ರಕರಣ‌ಕ್ಕೆ ಸಂಬಂಧಿಸಿ ಪೊಲೀಸರಿಂದ ಬಂಧಿತ ಆರೋಪಿಗಳಿಗೆ ಸಂಕಷ್ಟ ಶುರುವಾಗಲಿದೆ.

ಮುಲಾಜಿಲ್ಲದೇ UAPA ಕಾಯ್ದೆ ಅಸ್ತ್ರ ಪ್ರಯೋಗಿಸಲು‌ ಪೊಲೀಸರು ಮುಂದಾಗಿದ್ದಾರೆ. 380ಕ್ಕೂ ಅಧಿಕ ಆರೋಪಿಗಳಿಗೆ UAPA ಕಾಯ್ದೆ ಅನ್ವಯಿಸಲು ಪೊಲೀಸರು ನಿರ್ಧರಿಸಿದ್ದಾರೆ. UAPA ಕಾಯ್ದೆಯಡಿ ಈ ಹಿಂದೆ 61 ಜನರನ್ನು ಅರೆಸ್ಟ್ ಮಾಡಲಾಗಿತ್ತು.
ಗಲಭೆಗೆ ಸಿದ್ಧವಾಗಿ ಬಂದಿದ್ದ ಆರೋಪಿಗಳು. ಬಂಧಿತರಲ್ಲಿ‌ ಹಲವರು ಎರಡೂ ಠಾಣೆಗಳ‌ ಬಳಿ ಹಾಜರಾಗಿದ್ದು ತನಿಖೆ ವೇಳೆ ಅದು ಸಾಬೀತಾಗಿತ್ತು.

ಆರೋಪಿಗಳು ಮೊದಲು ನವೀನ್ ನಿವಾಸ ಮತ್ತು ಶಾಸಕ ಅಖಂಡ ಶ್ರೀನಿವಾಸ್ ನಿವಾಸದ ಬಳಿ ಸೇರಿದ್ರು. ಕಾವಲ್ ಬೈರಸಂದ್ರದಲ್ಲಿ ಗಲಾಟೆ ನಂತ್ರ ಚದುರಿದ್ದ ಅರೋಪಿಗಳು ನೇರವಾಗಿ ಕೆಜಿಹಳ್ಳಿ ಮತ್ತು ಡಿಜೆಹಳ್ಳಿಗೆ ಬಂದಿದ್ದಾರೆ. ಆರೋಪಿಗಳು ಒಂದು ಕಡೆ ಮಾತ್ರವಲ್ಲಾದೆ ಹಲವು ಕಡೆ ಕೃತ್ಯದಲ್ಲಿ ಭಾಗಿಯಾಗಿದ್ದಾರೆ. ಉಗ್ರರ ನಂಟಿರುವ ಕಾರಣಕ್ಕೆ ಕೆಜಿಹಳ್ಳಿ ಮತ್ತು ಡಿಜೆಹಳ್ಳಿ ಗಲಭೆ ಕೇಸ್​ಗೆ ಒಂದು ವಿಷೇಶ ಸೆಕ್ಷನ್ ಹಾಕಲಾಗಿದೆ UAPA( unlawful activity Prevention Act 1964) ಕಾಯ್ದೆಯನ್ನು FIRಗೆ ಸೇರಿಸಲಾಗಿದೆ.

ಉಗ್ರರ ವಿರುದ್ಧದ ಕೇಸ್​ನಲ್ಲಿ ಈ ಕಾಯ್ದೆಯನ್ನು ದಾಖಲಿಸಲಾಗುತ್ತೆ. UAPA ಕಾಯ್ದೆ ಅನತವಯ ಕೇಸ್ ದಾಖಲಾದ್ರೆ ಪೊಲೀಸರು ಆರೋಪಿಗಳನ್ನು ಮೂವತ್ತು ದಿನದ ವರೆಗೆ ವಿಚಾರಣೆಗೆ ಪಡೆಯಬಹುದು. ನ್ಯಾಯಾಲಯದಲ್ಲಿ ಆರೋಪಿಗಳಿಗೆ ಒಂದು ವರ್ಷದ ವರೆಗೆ ಬೇಲ್ ದೊರೆಯುವುದು ಅನುಮಾನ.