ದಾವಣಗೆರೆ: ವದಂತಿಗೆ ಕಿವಿಗೊಟ್ಟು ಪ್ರತಿಭಟನೆ ನಡೆಸುತ್ತಿದ್ದವರಿಗೆ ಪೊಲೀಸರ ಲಾಠಿ ರುಚಿ
ದಾವಣಗೆರೆ: ಹಾಸ್ಟೆಲ್ನಲ್ಲಿ ಕೊರೊನಾ ಸೋಂಕಿತರನ್ನು ಕ್ವಾರಂಟೈನ್ ಮಾಡಲಾಗುತ್ತಿದೆ ಎಂಬ ವದಂತಿಗೆ ಕಿವಿಗೊಟ್ಟು ಪ್ರತಿಭಟನೆ ನಡೆಸುತ್ತಿದ್ದವರಿಗೆ ದಾವಣಗೆರೆ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ. ಪೊಲೀಸರು ಲಾಠಿ ಪ್ರಹಾರ ನಡೆಸುತ್ತಿದ್ದಂತೆ ಧರಣಿ ನಡೆಸ್ತಿದ್ದವರು ಪರಾರಿಯಾಗಿದ್ದಾರೆ. ಸಪ್ತಗಿರಿ ಶಾಲೆ ಬಳಿಯ ಬಿಸಿಎಂ ಹಾಸ್ಟೆಲ್ನಲ್ಲಿ ಸೋಂಕಿತರನ್ನು ಕ್ವಾರಂಟೈನ್ ಮಾಡಲಾಗುತ್ತಿದೆ ಎಂಬ ವದಂತಿ ಹರಿದಾಡುತ್ತಿದೆ. ಇದನ್ನು ನಂಬಿ ಆಶಾ ಕಾರ್ಯಕರ್ತೆಯರ ಊಟ ತಯಾರಿಕೆ ಕೇಂದ್ರದ ಬಳಿ ಯಲ್ಲಮ್ಮ ನಗರ ನಿವಾಸಿಗಳ ಪ್ರತಿಭಟನೆಗೆ ಮುಂದಾಗಿದ್ದಾರೆ. ಇಲ್ಲಿ ಯಾರನ್ನು ಕ್ವಾರಂಟೈನ್ ಮಾಡುತ್ತಿಲ್ಲ ಎಂದು ಪೊಲೀಸರು ಹಾಗೂ ಅಧಿಕಾರಿಗಳು […]
ದಾವಣಗೆರೆ: ಹಾಸ್ಟೆಲ್ನಲ್ಲಿ ಕೊರೊನಾ ಸೋಂಕಿತರನ್ನು ಕ್ವಾರಂಟೈನ್ ಮಾಡಲಾಗುತ್ತಿದೆ ಎಂಬ ವದಂತಿಗೆ ಕಿವಿಗೊಟ್ಟು ಪ್ರತಿಭಟನೆ ನಡೆಸುತ್ತಿದ್ದವರಿಗೆ ದಾವಣಗೆರೆ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ. ಪೊಲೀಸರು ಲಾಠಿ ಪ್ರಹಾರ ನಡೆಸುತ್ತಿದ್ದಂತೆ ಧರಣಿ ನಡೆಸ್ತಿದ್ದವರು ಪರಾರಿಯಾಗಿದ್ದಾರೆ.
ಸಪ್ತಗಿರಿ ಶಾಲೆ ಬಳಿಯ ಬಿಸಿಎಂ ಹಾಸ್ಟೆಲ್ನಲ್ಲಿ ಸೋಂಕಿತರನ್ನು ಕ್ವಾರಂಟೈನ್ ಮಾಡಲಾಗುತ್ತಿದೆ ಎಂಬ ವದಂತಿ ಹರಿದಾಡುತ್ತಿದೆ. ಇದನ್ನು ನಂಬಿ ಆಶಾ ಕಾರ್ಯಕರ್ತೆಯರ ಊಟ ತಯಾರಿಕೆ ಕೇಂದ್ರದ ಬಳಿ ಯಲ್ಲಮ್ಮ ನಗರ ನಿವಾಸಿಗಳ ಪ್ರತಿಭಟನೆಗೆ ಮುಂದಾಗಿದ್ದಾರೆ.
ಇಲ್ಲಿ ಯಾರನ್ನು ಕ್ವಾರಂಟೈನ್ ಮಾಡುತ್ತಿಲ್ಲ ಎಂದು ಪೊಲೀಸರು ಹಾಗೂ ಅಧಿಕಾರಿಗಳು ಮನವರಿಕೆ ಮಾಡಿಕೊಟ್ಟಿದ್ದಾರೆ. ಆದ್ರೂ ಸಹ ಪೊಲೀಸರ ಮಾತಿಗೆ ಸಾರ್ವಜನಿಕರು ಮಣಿದಿಲ್ಲ. ಹಾಗಾಗಿ ಪೊಲೀಸರು ಲಾಠಿ ಬೀಸಿದ ನಂತರ ಸಾರ್ವಜನಿಕರು ಪರಾರಿಯಾಗಿದ್ದಾರೆ.
ಪೊಲೀಸರ ಲಾಠಿ ಏಟಿಗೆ ಕೈ ಬೆರಳು ಕಟ್: ಇದೇ ವೇಳೆ ನಗರದ ರಿಂಗ್ ರಸ್ತೆಯಲ್ಲಿ ಪೊಲೀಸರ ಲಾಠಿ ಏಟಿಗೆ ಲಕ್ಷ್ಮಣ್ ಎಂಬುವರ ಮೈಮೇಲೆ ಬಾಸುಂಡೆ ಬಂದಿದ್ದು, ಕೈಬೆರಳು ಕಟ್ ಆಗಿದೆ. ಯಲ್ಲಮ್ಮ ನಗರದ ಬಳಿ ಲಕ್ಷ್ಮಣ್ ನಡೆದುಕೊಂಡು ಹೋಗುತ್ತಿದ್ದರು. ಅನಗತ್ಯವಾಗಿ ಹೊರಗೆ ಬಂದಿರುವೆ ಎಂದು ಪೊಲೀಸರು ಹಲ್ಲೆ ಮಾಡಿದ್ದಾರೆ. ಗಾಯಾಳು ಲಕ್ಷ್ಮಣ್‌ಗೆ ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.
Published On - 1:03 pm, Fri, 1 May 20