ಕಾಲಿಗೆ ಗುಂಡು ಹಾರಿಸಿ ದರೋಡೆಕೋರನನ್ನು ಬಂಧಿಸಿದ ಪೊಲೀಸರು

| Updated By: Digi Tech Desk

Updated on: Feb 12, 2021 | 9:19 AM

ಯಲಹಂಕದಲ್ಲಿ ಸರಣಿ ಬೈಕ್ ಕಳ್ಳತನ, ಸರ ಕಳ್ಳತನ, ಮತ್ತು ರಾಬರಿ ಮಾಡುತ್ತಿದ್ದ ತಂಡ ಇದಾಗಿದ್ದು, ನಿನ್ನೆ ಓರ್ವ ಹಾಗೂ ಇಂದು ಮತ್ತೋರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಕಳೆದ ಎರಡು ದಿನಗಳಿಂದ ಶಬರೀಶ್ ಗ್ಯಾಂಗ್​ನ ಮೂವರ ಬಂಧನವಾಗಿದ್ದು ಶಬರೀಶ್ ಅಲಿಯಾಸ್ ಅಪ್ಪಿ, ಇಮ್ರಾನ್ ಪಾಷ ಮತ್ತು ರಂಜಿತ್ ಈ ವರೆಗೆ ಬಂಧಿತರು.

ಕಾಲಿಗೆ ಗುಂಡು ಹಾರಿಸಿ ದರೋಡೆಕೋರನನ್ನು ಬಂಧಿಸಿದ ಪೊಲೀಸರು
ಗಾಯಗೊಂಡ ಪೊಲೀಸ್ ಕಾನ್ಸ್​ಟೇಬಲ್​ ಮಧುಕುಮಾರ್​ (ಎಡ), ಆರೋಪಿ ಇಮ್ರಾನ್ ಪಾಷ
Follow us on

ದೇವನಹಳ್ಳಿ: ಬೆಂಗಳೂರಿನಲ್ಲಿ ದರೋಡೆಕೋರನ ಮೇಲೆ ಪೊಲೀಸರು ಫೈರಿಂಗ್ ನಡೆಸಿ ಬಂಧಿಸಿದ್ದಾರೆ. ವಿದ್ಯಾರಣ್ಯಪುರ ಠಾಣಾ ವ್ಯಾಪ್ತಿಯ ಕಳತ್ತೂರು ಫಾರ್ಮ್ ಬಳಿ ದರೋಡೆಕೋರ ಇಮ್ರಾನ್ ಪಾಷಾನ ಕಾಲಿಗೆ ಯಲಹಂಕ ಉಪನಗರ ಠಾಣೆ ಇನ್ಸ್​ಪೆಕ್ಟರ್ ಅರುಣ್ ಕುಮಾರ್‌ ಗುಂಡು ಹಾರಿಸಿ ಬಂಧಿಸಿದ್ದಾರೆ. ನಿನ್ನೆ ಯಲಹಂಕದಲ್ಲಿ ಶಬರೀಶ್ ಮೇಲೆ ಗುಂಡು ಹಾರಿಸಿ ಸೆರೆ ಹಿಡಿಯಲಾಗಿತ್ತು. ಇದೀಗ ಈತನ ಸಹಚರ ಇಮ್ರಾನ್ ಪಾಷಾ ಕಾಲಿಗೆ ಗುಂಡು ಹಾರಿಸಿ ಬಂಧಿಸಲಾಗಿದೆ. ಮುಂಜಾನೆ 6 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.

ಯಲಹಂಕದಲ್ಲಿ ಸರಣಿ ಬೈಕ್ ಕಳ್ಳತನ, ಸರ ಕಳ್ಳತನ, ಮತ್ತು ರಾಬರಿ ಮಾಡುತ್ತಿದ್ದ ತಂಡ ಇದಾಗಿದ್ದು, ನಿನ್ನೆ ಓರ್ವ ಹಾಗೂ ಇಂದು ಮತ್ತೋರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಕಳೆದ ಎರಡು ದಿನಗಳಿಂದ ಶಬರೀಶ್ ಗ್ಯಾಂಗ್​ನ ಮೂವರ ಬಂಧನವಾಗಿದ್ದು ಶಬರೀಶ್ ಅಲಿಯಾಸ್ ಅಪ್ಪಿ, ಇಮ್ರಾನ್ ಪಾಷ ಮತ್ತು ರಂಜಿತ್ ಈ ವರೆಗೆ ಬಂಧಿತರು.

ಇನ್ನು ಇಮ್ರಾನ್ ಬಂಧನದ ವೇಳೆ ಯಲಹಂಕ ಉಪನಗರ ಪೊಲೀಸ್ ಕಾನ್ಸ್​ಟೇಬಲ್​ ಮಧುಕುಮಾರ್​ಗೆ ಗಾಯಗಳಾಗಿವೆ. ಹಾಗೂ ಆರೋಪಿ ಇಮ್ರಾನ್ ಎಡಗಾಲಿಗೆ ಗುಂಡು ಬಿದ್ದಿದೆ. ಸದ್ಯ ಗಾಯಾಳುಗಳಿಗೆ ಯಲಹಂಕ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಪೊಲೀಸ್ ಗನ್ ಸದ್ದು , ಆರೋಪಿಗಳ ಕಾಲಿಗೆ ಗುಂಡು

Published On - 9:12 am, Fri, 12 February 21