ಬೆಂಗಳೂರು: ಡಿಜೆ ಹಳ್ಳಿ ಹಾಗೂ ಕೆಜಿ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂದಿಸಲಾಗಿರುವ ಆರೋಪಿಗಳನ್ನು ಪೊಲೀಸಲು ಕೋರ್ಟ್‌ಗೆ ಹಾಜರು ಪಡಿಸಿದ್ದಾರೆ.
ಇದುವರೆಗೆ 151 ಆರೋಪಿಗಳನ್ನು ಬಂಧಿಸಲಾಗಿದ್ದು, ಇವರೆಲ್ಲರನ್ನು ನ್ಯಾಯಧೀಶರ ಮುಂದೆ ಹಾಜರು ಪಡಿಸಲಾಗಿದೆ. ಪ್ರಮುಖ ಆರೋಪಿಗಳಾದ ಅಫ್ನಾನ್ ಹಾಗೂ ಮುಜಾಮಿಲ್ ಸಹಿತ ಮೇಯೋ ಹಾಲ್ ಕೋರ್ಟ್ ನ್ಯಾಯಾಧೀಶರ ಮುಂದೆ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರುಪಡಿಸಿದ್ದಾರೆ ಪೊಲೀಸರು.
ವಿಚಾರಣೆ ನಡೆಸಿರೋ ನ್ಯಾಯಾಲಯ, ಸಿಸಿಬಿ ಬಂಧಿಸಿರೋ ಈ ಎಲ್ಲ 151 ಮಂದಿ ಆರೋಪಿಗಳನ್ನು ಅವರ ಕೋವಿಡ್ ರಿಪೋರ್ಟ್ ಬರುವವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿದ್ದಾರೆ. ಈ ಆರೋಪಿಗಳ ಕೋವಿಡ್ ರಿಪೋರ್ಟ್ ಬಂದ ನಂತರ ಮತ್ತೇ ಇವರನ್ನು ಕೋರ್ಟ್‌ಗೆ ಹಾಜರು ಪಡಿಸಲಾಗುವದು.
ಆಗ ಒಂದು ವೇಳೆ ಆರೋಪಿಗಳನ್ನು ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೊಪ್ಪಿಸಿದರೇ ಅವರನ್ನು ಕಾರಾಗೃಹಕ್ಕೆ ಶಿಫ್ಟ್ ಮಾಡಲಾಗುವುದು.