Ration Rice ಮಹಾರಾಷ್ಟ್ರಕ್ಕೆ ಅಕ್ರಮವಾಗಿ ಸಾಗಿಸ್ತಿದ್ದ ಪಡಿತರ ಅಕ್ಕಿ ಜಪ್ತಿ.. ಲಾರಿ ಚಾಲಕ ಅರೆಸ್ಟ್

Illegal Transporting Ration Rice Seized ಅಕ್ರಮವಾಗಿ ಸಾಗಿಸ್ತಿದ್ದ ಸುಮಾರು ₹7.99 ಲಕ್ಷ ಮೌಲ್ಯದ 589 ಮೂಟೆ ಪಡಿತರ ಅಕ್ಕಿಯನ್ನು ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಬಳಿಯ ರಾ.ಹೆ.50 ರಲ್ಲಿ ಜಪ್ತಿ ಮಾಡಲಾಗಿದೆ.

Ration Rice ಮಹಾರಾಷ್ಟ್ರಕ್ಕೆ  ಅಕ್ರಮವಾಗಿ ಸಾಗಿಸ್ತಿದ್ದ ಪಡಿತರ ಅಕ್ಕಿ ಜಪ್ತಿ.. ಲಾರಿ ಚಾಲಕ ಅರೆಸ್ಟ್
ಅಕ್ರಮವಾಗಿ ಸಾಗಿಸ್ತಿದ್ದ ಪಡಿತರ ಅಕ್ಕಿ ಜಪ್ತಿ ಮಾಡಿದ ಅಧಿಕಾರಿಗಳು
Updated By: ಸಾಧು ಶ್ರೀನಾಥ್​

Updated on: Feb 03, 2021 | 3:45 PM

ವಿಜಯಪುರ: ಬಸವನಬಾಗೇವಾಡಿ ತಹಶೀಲ್ದಾರ್‌ ಹಾಗೂ ಆಹಾರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಅಕ್ರಮವಾಗಿ ಸಾಗಿಸ್ತಿದ್ದ 589 ಮೂಟೆ ಪಡಿತರ ಅಕ್ಕಿಯನ್ನು ಜಪ್ತಿ ಮಾಡಿದ್ದಾರೆ. ಸುಮಾರು ₹7.99 ಲಕ್ಷ ಮೌಲ್ಯದ ಪಡಿತರ ಅಕ್ಕಿ ಜಪ್ತಿಯಾಗಿದೆ.

ಬಾಗಲಕೋಟೆಯಿಂದ ವಿಜಯಪುರ ಮಾರ್ಗವಾಗಿ ಮಹಾರಾಷ್ಟ್ರಕ್ಕೆ ಪಡಿತರ ಅಕ್ಕಿಯನ್ನು ಸಾಗಿಸಲಾಗುತ್ತಿತ್ತು. ನಂಬರ್ KA29 B 8299 ನೋಂದಣಿ ಹೊಂದಿರುವ ಲಾರಿಯಲ್ಲಿ ಸಾಗಾಟ ಮಾಡುತ್ತಿದ್ದ ಒಟ್ಟು 589 ಮೂಟೆ ಪಡಿತರ ಅಕ್ಕಿಯನ್ನು ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಬಳಿಯ ರಾ.ಹೆ. 50 ರಲ್ಲಿ ವಶಕ್ಕೆ ಪಡೆಯಲಾಗಿದೆ.

ಸದ್ಯ ಬಸವನಬಾಗೆವಾಡಿ ತಹಶೀಲ್ದಾರ್ ಎಂ.ಎನ್ ಬಳಿಗಾರ್, ಆಹಾರ ನಿರೀಕ್ಷಕ ಪುಲಿಕೇಶಿ ಮೂಕಿಹಾಳ್ ಸೇರಿದಂತೆ ಇತರೆ ಅಧಿಕಾರಿಗಳು ದಾಳಿ ನಡೆಸಿ ಅಕ್ಕಿ ಮೂಟೆಗಳನ್ನು ಜಪ್ತಿ ಮಾಡಿದ್ದಾರೆ. ಹಾಗೂ ಈ ಸಂಬಂಧ ಮನಗೂಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಲಾರಿ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಅಕ್ರಮವಾಗಿ ಸಾಗಿಸುತ್ತಿದ್ದ 250 ಕ್ವಿಂಟಾಲ್​ ಪಡಿತರ ಅಕ್ಕಿ ಜಪ್ತಿ, ಯಾವೂರಲ್ಲಿ?