ಮುಂಬೈ: ಮದುವೆಯಾಗಿ ಇನ್ನೂ ಕೈಗೆ ಹಾಕಿದ ಮೆಹಂದಿ ಸಹ ಮಾಸಿಲ್ಲ. ಅಷ್ಟರಲ್ಲಾಗಲೇ ಪೂನಂ ಪಾಂಡೆ ಹಾಗೂ ಪತಿ ಸ್ಯಾಮ್ ಅಹಮದ್ ಬಾಂಬೆ ನಡುವೆ ಅನೇಕ ಬಿರುಕುಗಳು ಕಾಣಿಸುತ್ತಿವೆ. ಕೆಲ ದಿನಗಳ ಹಿಂದೆಯಷ್ಟೆ ಪೂನಂ ಪಾಂಡೆ ತನ್ನ ಪತಿಯ ವಿರುದ್ಧ ದೂರು ದಾಖಲಿಸಿದ್ದಳು. ನನ್ನ ಪತಿ ಕಿರುಕುಳ ನೀಡಿ ಬೆದರಿಕೆ ಹಾಕಿ, ಹಲ್ಲೆ ಮಾಡಿದ್ದಾನೆ ಎಂದು ಗೋವಾ ಪೊಲೀಸರಿಂದ ಪತಿಯನ್ನು ಅರೆಸ್ಟ್ ಮಾಡಿಸಿದ್ದಳು. ಇಷ್ಟೆಲ್ಲಾ ರಂಪಾಟದ ನಂತರ ಈ ನವ ಜೋಡಿ ಮತ್ತೆ ಒಂದಾಗಿದ್ದಾರೆ. ‘ಯಾರ ವೈವಾಹಿಕ ಜೀವನದಲ್ಲಿ ಏರಿಳಿತಗಳು ಇರೋಲ್ಲ ಹೇಳಿ? ನಾವು ಮತ್ತೆ ಒಂದಾಗಿದ್ದೇವೆ’ ಎಂದೂ ಪೂನಂ ವಗ್ಗರಣೆ ಹಾಕಿದ್ದಾಳೆ.
ನಾವಿಬ್ಬರೂ ಪರಸ್ಪರ ಹುಚ್ಚರಂತೆ ಪ್ರೀತಿಸ್ತಿದ್ದೇವೆ!
ಈ ಬಗ್ಗೆ ಮಾತನಾಡಿದ ಹಾಟ್ ಬ್ಯೂಟಿ ಪೂನಂ, ಸ್ಯಾಮ್ ಅಳುತ್ತಿದ್ದಾನೆ. ಆತನ ವಿರುದ್ಧ ಹಾಕಿರುವ ಪ್ರಕರಣವನ್ನು ಹಿಂತೆಗೆದುಕೊಳ್ಳುವಂತೆ ಆತ ಬೇಡಿಕೊಳ್ಳುತ್ತಿದ್ದಾನೆ. ಹಾಗೂ ಮುಂದೆ ಈ ರೀತಿಯ ತಪ್ಪು ಮಾಡುವುದಿಲ್ಲ. ನಿನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದೂ ಭರವಸೆ ನೀಡಿದ್ದಾನೆ ಎಂದು ಅಲವತ್ತುಕೊಂಡಿದ್ದಳು.
ಇದನ್ನೂ ಓದಿ: ಲೈಂಗಿಕ ಕಿರುಕುಳ: ಮದುವೆಯಾದ ಎರಡೇ ವಾರಕ್ಕೆ ಪತಿಯನ್ನ ಅರೆಸ್ಟ್ ಮಾಡಿಸಿದ ಪೂನಂ ಪಾಂಡೆ
ಬಿಗ್ ಬಾಸ್ಗಾಗಿ ನಡೀತಾ ಈ ಡ್ರಾಮಾ?
ಆದರೆ ಈ ಬಗ್ಗೆ ಮಾತನಾಡಿದ ಪೂನಂ ಆ ಮಾತನ್ನು ತಳ್ಳಿ ಹಾಕಿದ್ದಾರೆ. ನಾನು ವಿವಾದಾತ್ಮಕ ರಿಯಾಲಿಟಿ ಶೋನಲ್ಲಿ ಭಾಗವಹಿಸಲು ಹೋಗುತ್ತಿಲ್ಲ. ಬಿಗ್ ಬಾಸ್ನಲ್ಲಿ ಪಾಲ್ಗೊಳ್ಳಲು ನಾನು ತುಂಬಾ ಚಿಕ್ಕವಳು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಲೈಂಗಿಕ ಕಿರುಕಳ ಆರೋಪ: ಪಾಪಾ ಪಾಂಡೆ ಗಂಡನಿಗೆ ಬೇಲ್ ಸಿಕ್ತು
Published On - 3:33 pm, Mon, 28 September 20