ಟಿಪ್ಪು ಎಕ್ಸ್ಪ್ರೆಸ್ ರೈಲಿನ ಹೆಸರನ್ನು ಒಡೆಯರ್ ಎಕ್ಸ್ಪ್ರೆಸ್ ಅಂತ ಮಾಡಿದರೆ ಬಡತನ ದೂರವಾಗಲ್ಲ: ಕುಮಾರಸ್ವಾಮಿ
ನಮ್ಮ ದೇಶದಲ್ಲಿ 23 ಕೋಟಿಗಿಂತ ಹೆಚ್ಚು ಜನ ಬಡತನ ರೇಖೆಗಿಂತ ಕೆಳಗಿದ್ದಾರೆ ಅಂತ ಆರೆಸ್ಸೆಸ್ ಮುಖಂಡರೇ ಹೇಳಿದ್ದಾರೆ, ಸರ್ಕಾರ ಈ ವಿಷಯದ ಕಡೆ ಗಮನ ಹರಿಸಬೇಕು ಎಂದು ಜೆಡಿ(ಎಸ್) ನಾಯಕ ಹೇಳಿದರು.
ಮೈಸೂರು: ಸ್ಥಳ, ಲ್ಯಾಂಡ್ ಮಾರ್ಕ್, ರೈಲು ನಿಲ್ದಾಣ, ರೈಲು (Train) ಮೊದಲಾದವುಗಳ ಹೆಸರು ಆಯಾ ಸಂದರ್ಭಗಳಿಗೆ, ಕಾಲಮಾನಗಳಿಗೆ ತಕ್ಕಂತೆ ಬದಲಾಗುತ್ತಿರುತ್ತವೆ, ಚುನಾವಣೆ ಹತ್ತಿರ ಬಂದಾಗ ಜನರ ಸೆಂಟಿಮೆಂಟ್ ಗಳೊಂದಿಗೆ ಆಡುವ ಪ್ರಯತ್ನವಿದು ಎಂದು ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಮೈಸೂರಲ್ಲಿ ಶನಿವಾರ ಹೇಳಿದರು. ನಮ್ಮ ದೇಶದಲ್ಲಿ ಬ್ರಿಟಿಷರ (British) ಹೆಸರಲ್ಲಿ ಈಗಲೂ ಹಲವಾರು ಕಟ್ಟಡಗಳು, ಸ್ಥಳಗಳಿವೆ. ಹೆಸರುಗಳನ್ನು ಬದಲಾವಣೆ ಮಾಡುವುದರಿಂದ ಬಡವರಿಗೆ ಸಹಾಯವಾಗುವುದಿಲ್ಲ, ಬಡತನ ದೂರವಾಗುವುದಿಲ್ಲ ಎಂದು ಕುಮಾರಸ್ವಾಮಿ ಹೇಳಿದರು. ನಮ್ಮ ದೇಶದಲ್ಲಿ 23 ಕೋಟಿಗಿಂತ ಹೆಚ್ಚು ಜನ ಬಡತನ ರೇಖೆಗಿಂತ ಕೆಳಗಿದ್ದಾರೆ ಅಂತ ಆರೆಸ್ಸೆಸ್ ಮುಖಂಡರೇ ಹೇಳಿದ್ದಾರೆ, ಸರ್ಕಾರ ಈ ವಿಷಯದ ಕಡೆ ಗಮನ ಹರಿಸಬೇಕು ಎಂದು ಜೆಡಿ(ಎಸ್) ನಾಯಕ ಹೇಳಿದರು.
Latest Videos