ರಾಧೆ ಶ್ಯಾಮ್​ ನಿರ್ದೇಶಕನ ವಿರುದ್ಧ ಪೊಲೀಸರಿಗೆ ಕಂಪ್ಲೆಂಟ್​ ನೀಡಿದ ಪ್ರಭಾಸ್​ ಫ್ಯಾನ್ಸ್ !

ಸಾಮಾಜಿಕ ಜಾಲತಾಣದಲ್ಲಿ ಒಂದಿಲ್ಲ ಒಂದು ವಿಚಾರಗಳು ವೈರಲ್​ ಆಗುತ್ತಿರುತ್ತವೆ. ಈಗಲೂ ಆಗಿದ್ದೂ ಅದೇ.

ರಾಧೆ ಶ್ಯಾಮ್​ ನಿರ್ದೇಶಕನ ವಿರುದ್ಧ ಪೊಲೀಸರಿಗೆ ಕಂಪ್ಲೆಂಟ್​ ನೀಡಿದ ಪ್ರಭಾಸ್​ ಫ್ಯಾನ್ಸ್ !
ಪ್ರಭಾಸ್​-ರಾಧೆಶ್ಯಾಮ್​ ನಿರ್ದೇಶಕ

Updated on: Mar 21, 2021 | 7:40 PM

ಪ್ರಭಾಸ್​ ನಟನೆಯ ರಾಧೆ ಶ್ಯಾಮ್​ ಸಿನಿಮಾ ಭಾರೀ ನಿರೀಕ್ಷೆ ಮೂಡಿಸಿದೆ. ಈಗಾಗಲೇ ಚಿತ್ರದ ಕೆಲಸ ಪೂರ್ಣಗೊಂಡಿದ್ದು, ಜುಲೈನಲ್ಲಿ ಸಿನಿಮಾ ತೆರೆಮೇಲೆ ಬರುತ್ತಿದೆ. ಈ ಮಧ್ಯೆ ಸಿನಿಮಾದ ನಿರ್ದೇಶಕ ರಾಧಾ ಕೃಷ್ಣ ಕುಮಾರ್​ ವಿರುದ್ಧ ಪ್ರಭಾಸ್​ ಫ್ಯಾನ್ಸ್ ಗರಂ ಆಗಿದ್ದಾರೆ. ಅಷ್ಟೇ ಅಲ್ಲ, ಹೈದರಾಬಾದ್​ ಪೊಲೀಸರ ಬಳಿ ದೂರನ್ನು ಕೂಡ ನೀಡಿದ್ದಾರೆ. ಅಷ್ಟಕ್ಕೂ ದೂರು ದಾಖಲಿಸೋಕೆ ಕಾರಣ ಏನು ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ.

ಸಾಮಾಜಿಕ ಜಾಲತಾಣದಲ್ಲಿ ಒಂದಿಲ್ಲ ಒಂದು ವಿಚಾರಗಳು ವೈರಲ್​ ಆಗುತ್ತಿರುತ್ತವೆ. ಈಗಲೂ ಆಗಿದ್ದೂ ಅದೇ. ನಟ ನಿತಿನ್​ ನಟನೆಯ ರಂಗ್​ ದೆ ಸಿನಿಮಾ ಇದೇ 26ರಂದು ತೆರೆಕಾಣುತ್ತಿದೆ. ಸಿನಿಮಾದ ಪ್ರಮೋಷನ್​ನಲ್ಲಿ ಚಿತ್ರಂಡ ಬ್ಯುಸಿಯಾಗಿದೆ. ಈ ಮಧ್ಯೆ ಚಿತ್ರದ ನಟಿ ಕೀರ್ತಿ ಸುರೇಶ್​ ಅವರು ಸಿನಿಮಾದ ಪ್ರಮೋಷನ್​ನಲ್ಲಿ ಅಷ್ಟಾಗಿ ಪಾಲ್ಗೊಳ್ಳುತ್ತಿಲ್ಲವಂತೆ. ಇದು ಚಿತ್ರತಂಡದ ಬೇಸರಕ್ಕೆ ಕಾರಣವಾಗಿದೆ.

ಇದಕ್ಕಾಗಿ, ಕೀರ್ತಿ ಸುರೇಶ್​ ಅವರ ಫೋಟೋ ಒಂದನ್ನು ಟ್ವೀಟ್​ ಮಾಡಿದ್ದ ನಿತಿನ್​, ಫೋಟೊದಲ್ಲಿ ಇರುವವರು ಕಾಣೆಯಾಗಿದ್ದಾರೆ ಮತ್ತು ಇವರಿಗೆ ಸಿನಿಮಾ ಪ್ರಚಾರ ಕಾರ್ಯಕ್ರಮಗಳಿಗೆ ಹಾಜರಾಗಿ ಎಂದು ಯಾರಾದರೂ ಹೇಳಿ ಎಂದು ಕೋರಿದ್ದರು.ಅಚ್ಚರಿ ಎಂಬಂತೆ ಈ ಟ್ವೀಟ್​ಗೆ ಹೈದರಾಬಾದ್ ಪೊಲೀಸ್ ಇಲಾಖೆ​ ಉತ್ತರಿಸಿ, ನಿತಿನ್​ ಅವರು ಈ ವಿಚಾರ ನೋಡಿಕೊಳ್ಳುತ್ತಾರೆ ಎಂದಿತ್ತು.

ಈ ಟ್ವೀಟ್​ಗೆ ಉತ್ತರಿಸಿದ್ದ ಪ್ರಭಾಸ್​ ಅಭಿಮಾನಿಯೋರ್ವ ರಾಧೆ ಶ್ಯಾಮ್​ ನಿರ್ದೇಶಕ ರಾಧಾ ಕೃಷ್ಣ ಕುಮಾರ್​ ಅವರನ್ನು ಹಿಡಿದುಕೊಡಿ ಎಂದು ಹೈದರಾಬಾದ್ ಪೊಲೀಸರ ಬಳಿ ಆಗ್ರಹಿಸಿದ್ದಾರೆ. ರಾಧಾ ಕೃಷ್ಣ ಕುಮಾರ್​ ರಾಧೆ ಶ್ಯಾಮ್​ ಸಿನಿಮಾವನ್ನು ಸರಿಯಾಗಿ ಪ್ರಮೋಷನ್​ ಮಾಡುತ್ತಿಲ್ಲ ಎನ್ನುವ ಮಾತಿದೆ. ಇದು ಪ್ರಭಾಸ್​ ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ಹೀಗಾಗಿ ಅಭಿಮಾನಿಗಳು ಹೈದರಾಬಾದ್​ ಪೊಲೀಸರ ಬಳಿ ಈ ದೂರು ನೀಡಿದ್ದಾರೆ. ಸದ್ಯ, ಈ ಟ್ವೀಟ್​ ಸಾಕಷ್ಟು ವೈರಲ್​ ಆಗಿದೆ.

ಇದನ್ನೂ ಓದಿ: ಪ್ರಭಾಸ್​ ಜತೆ 75 ದಿನ ಕಳೆಯಲಿದ್ದಾರೆ ದೀಪಿಕಾ ಪಡುಕೋಣೆ; ಕಾರಣವೇನು ಗೊತ್ತಾ?

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us