ಸೋಂಕಿತನ ಸಂಪರ್ಕದಲ್ಲಿದ್ದ ವ್ಯಕ್ತಿ ಪರಾರಿ, ಕ್ವಾರಂಟೈನ್‌ಗೆ ಹೆದರಿ ಮೊಬೈಲ್ ಸ್ವಿಚ್ಆಫ್..

| Updated By: ಸಾಧು ಶ್ರೀನಾಥ್​

Updated on: Jul 04, 2020 | 1:33 PM

ಮೈಸೂರು: ಜಗತ್ತಿನಲ್ಲಿ ಎಂತೆಂಥವರು ಇರ್ತಾರೆ ನೋಡಿ. ಅಲ್ಲಾ ಕೊರೊನಾ ಸೋಂಕು ತಗುಲಿದವನ ಸಂಪರ್ಕದಲ್ಲಿದ್ದ ವ್ಯಕ್ತಿಯನ್ನ ಬಚಾವ್‌ ಮಾಡೋಕೆ ವೈದ್ಯರು ಮುಂದಾದ್ರೆ, ತಲೆ ಇಲ್ಲದ ಆ ಭಂಡ ತನ್ನ ಮೊಬೈಲ್‌ ಸ್ವಿಚ್‌ಆಫ್‌ ಮಾಡಿಕೊಂಡು ಎಸ್ಕೇಪ್‌ ಆಗಿದ್ದಾನೆ. ಹೌದು, ಮೈಸೂರಿನ ಕೆ.ಜಿ.ಕೊಪ್ಪಲಿನ ವ್ಯಕ್ತಿಯೊಬ್ಬರಿಗೆ ಕೊರೊನಾ ಸೋಂಕು ಇರೋದು ದೃಢವಾಗಿದೆ. ಹೀಗಾಗಿ ಆತನನ್ನ ಆಸ್ಪತ್ರೆಗೆ ದಾಖಲಿಸಿ, ಆ ವ್ಯಕ್ತಿಯ ಪ್ರಾಥಮಿಕ ಸಂಪರ್ಕದಲ್ಲಿದ್ದವರನ್ನ ರಕ್ಷಿಸೋಕೆ ಅವರನ್ನ ಕ್ವಾರಂಟೈನ್‌ ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ. ಆದ್ರೆ ಒಬ್ಬ ವ್ಯಕ್ತಿ ಮಾತ್ರ ಕ್ವಾರಂಟೈನ್‌ಗೆ ಹೆದರಿ ತನ್ನ ಫೋನ್ […]

ಸೋಂಕಿತನ ಸಂಪರ್ಕದಲ್ಲಿದ್ದ ವ್ಯಕ್ತಿ ಪರಾರಿ, ಕ್ವಾರಂಟೈನ್‌ಗೆ ಹೆದರಿ ಮೊಬೈಲ್ ಸ್ವಿಚ್ಆಫ್..
ಸಾಂದರ್ಭಿಕ ಚಿತ್ರ
Follow us on

ಮೈಸೂರು: ಜಗತ್ತಿನಲ್ಲಿ ಎಂತೆಂಥವರು ಇರ್ತಾರೆ ನೋಡಿ. ಅಲ್ಲಾ ಕೊರೊನಾ ಸೋಂಕು ತಗುಲಿದವನ ಸಂಪರ್ಕದಲ್ಲಿದ್ದ ವ್ಯಕ್ತಿಯನ್ನ ಬಚಾವ್‌ ಮಾಡೋಕೆ ವೈದ್ಯರು ಮುಂದಾದ್ರೆ, ತಲೆ ಇಲ್ಲದ ಆ ಭಂಡ ತನ್ನ ಮೊಬೈಲ್‌ ಸ್ವಿಚ್‌ಆಫ್‌ ಮಾಡಿಕೊಂಡು ಎಸ್ಕೇಪ್‌ ಆಗಿದ್ದಾನೆ.

ಹೌದು, ಮೈಸೂರಿನ ಕೆ.ಜಿ.ಕೊಪ್ಪಲಿನ ವ್ಯಕ್ತಿಯೊಬ್ಬರಿಗೆ ಕೊರೊನಾ ಸೋಂಕು ಇರೋದು ದೃಢವಾಗಿದೆ. ಹೀಗಾಗಿ ಆತನನ್ನ ಆಸ್ಪತ್ರೆಗೆ ದಾಖಲಿಸಿ, ಆ ವ್ಯಕ್ತಿಯ ಪ್ರಾಥಮಿಕ ಸಂಪರ್ಕದಲ್ಲಿದ್ದವರನ್ನ ರಕ್ಷಿಸೋಕೆ ಅವರನ್ನ ಕ್ವಾರಂಟೈನ್‌ ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ.

ಆದ್ರೆ ಒಬ್ಬ ವ್ಯಕ್ತಿ ಮಾತ್ರ ಕ್ವಾರಂಟೈನ್‌ಗೆ ಹೆದರಿ ತನ್ನ ಫೋನ್ ಸ್ವಿಚ್‌ಆಫ್ ಮಾಡಿ ನಾಪತ್ತೆಯಾಗಿದ್ದಾನೆ. ಇತನನ್ನ ಎಷ್ಟೇ ಹುಡುಕಾಡಿದ್ರೂ ಸಿಗ್ತಿಲ್ಲ. ಇತನ ಪತ್ತೇ ಹಚ್ಚೋದೇ ಈಗ ಅಧಿಕಾರಿಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಒಂದು ವೇಳೆ ಇತನಿಗೂ ಸೋಂಕು ತಗುಲಿದ್ರೆ ಆಗುವ ಅನಾಹುತ ಅಧಿಕಾರಿಗಳ ನಿದ್ದೇಗೆಡಿಸಿದೆ.

Published On - 1:33 pm, Sat, 4 July 20