ಸೋಂಕಿತರಿಗೆ ಬೆಡ್‌ ಸಿಗದಿರುವ ಅಸಲಿ ಕಾರಣ ಕೇಳಿದ್ರೆ ದಂಗಾಗಿ ಬಿಡ್ತೀರಿ

ಬೆಂಗಳೂರು: ಕೊರೊನಾ ಅಟ್ಟಹಾಸಕ್ಕೆ ಬೆಂಗಳೂರು ಥಂಡಾ ಹೊಡಿದಿದೆಯಾ? ಹೀಗೊಂದು ಪ್ರಶ್ನೆ ಈಗ ಜನರಲ್ಲಿ ಕಾಡುತ್ತಿದೆ. ಇದಕ್ಕೆ ಕಾರಣ ಬೆಡ್‌ ಸಿಗದೆ ಕೊರೊನಾ ಸೋಂಕಿತರು ಪರದಾಡ್ತಿರೋದು. ಹಾಗಾದ್ರೆ ಬೆಂಗಳೂರಿನಲ್ಲಿ ಬೆಡ್ ಸಮಸ್ಯೆ ಆಗ್ತಿರೋದು ಯಾಕೆ..? ಸಿಲಿಕಾನ್ ಸಿಟಿಯ ಆಸ್ಪತ್ರೆಗಳು ಫುಲ್ ಆಗೋದ್ವಾ..? ಕೇವಲ 7 ಸಾವಿರ ಸೋಂಕಿತರಿಗೇ ಇಷ್ಟೊಂದು ಸಮಸ್ಯೆನಾ..? ಇನ್ನು 30ರಿಂದ 40 ಸಾವಿರ ಸೋಂಕಿತರಾಗ್ತಾರೆಂಬ ತಜ್ಞರ ಅಂದಾಜು ನಿಜವಾದ್ರೆ ಬೆಂಗಳೂರಿನ ಗತಿ ಏನು..? ಎನ್ನುವ ಆತಂಕ ಬೆಂಗಳೂರಿನ ಜನರ ನಿದ್ದೆಗೆಡಿಸುತ್ತಿದೆ. ಡಿಸ್ಚಾರ್ಜ್‌ಗಿಂತ ಕೊರೊನಾ ಸೋಂಕಿತರೇ ಹೆಚ್ಚಾಗ್ತಿದ್ದಾರೆ […]

ಸೋಂಕಿತರಿಗೆ ಬೆಡ್‌ ಸಿಗದಿರುವ ಅಸಲಿ ಕಾರಣ ಕೇಳಿದ್ರೆ ದಂಗಾಗಿ ಬಿಡ್ತೀರಿ
Follow us
Guru
| Updated By: ಸಾಧು ಶ್ರೀನಾಥ್​

Updated on: Jul 04, 2020 | 1:10 PM

ಬೆಂಗಳೂರು: ಕೊರೊನಾ ಅಟ್ಟಹಾಸಕ್ಕೆ ಬೆಂಗಳೂರು ಥಂಡಾ ಹೊಡಿದಿದೆಯಾ? ಹೀಗೊಂದು ಪ್ರಶ್ನೆ ಈಗ ಜನರಲ್ಲಿ ಕಾಡುತ್ತಿದೆ. ಇದಕ್ಕೆ ಕಾರಣ ಬೆಡ್‌ ಸಿಗದೆ ಕೊರೊನಾ ಸೋಂಕಿತರು ಪರದಾಡ್ತಿರೋದು.

ಹಾಗಾದ್ರೆ ಬೆಂಗಳೂರಿನಲ್ಲಿ ಬೆಡ್ ಸಮಸ್ಯೆ ಆಗ್ತಿರೋದು ಯಾಕೆ..? ಸಿಲಿಕಾನ್ ಸಿಟಿಯ ಆಸ್ಪತ್ರೆಗಳು ಫುಲ್ ಆಗೋದ್ವಾ..? ಕೇವಲ 7 ಸಾವಿರ ಸೋಂಕಿತರಿಗೇ ಇಷ್ಟೊಂದು ಸಮಸ್ಯೆನಾ..? ಇನ್ನು 30ರಿಂದ 40 ಸಾವಿರ ಸೋಂಕಿತರಾಗ್ತಾರೆಂಬ ತಜ್ಞರ ಅಂದಾಜು ನಿಜವಾದ್ರೆ ಬೆಂಗಳೂರಿನ ಗತಿ ಏನು..? ಎನ್ನುವ ಆತಂಕ ಬೆಂಗಳೂರಿನ ಜನರ ನಿದ್ದೆಗೆಡಿಸುತ್ತಿದೆ.

ಡಿಸ್ಚಾರ್ಜ್‌ಗಿಂತ ಕೊರೊನಾ ಸೋಂಕಿತರೇ ಹೆಚ್ಚಾಗ್ತಿದ್ದಾರೆ ಬೆಂಗಳೂರಿನಲ್ಲಿ ಬೆಡ್ ಸಿಗದಿರಲು ಇಲ್ಲಿದೆ ನೋಡಿ ಅಸಲಿ ಕಾರಣ. ಸಿಲಿಕಾನ್ ಸಿಟಿಯಲ್ಲಿ ಡಿಸ್ಚಾರ್ಜ್‌ಗಿಂತ ಕೊರೊನಾ ಸೋಂಕಿತರೇ ಹೆಚ್ಚಾಗ್ತಿದ್ದಾರೆ. ಕಳೆದ ವಾರದಿಂದಂತಲೂ ದಾಖಲೆ ಮಟ್ಟದಲ್ಲಿ ಸೋಂಕಿತರ ಸಂಖ್ಯೆ ಏರಿಕೆಯಾಗ್ತಿದೆ. ಆದ್ರೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗ್ತಿರೋರ ಸಂಖ್ಯೆ ಕೇವಲ ಬೆರಳೆಣಿಕೆಯಷ್ಟಿದೆ. ಕಳೆದ ಏಳು ದಿನಗಳಲ್ಲಿ ಬೆಂಗಳೂರಿನಲ್ಲಿ ದಾಖಲಾದ ಸೋಂಕಿತರ ಸಂಖ್ಯೆ 5,238. ಆದ್ರೆ ಇದೇ ಸಮಯದಲ್ಲಿ ಡಿಸ್ಚಾರ್ಜ್ ಆದವರ ಸಂಖ್ಯೆ ಮಾತ್ರ ಕೇವಲ 244. ಈ ಏಳು ದಿನಗಳಲ್ಲಿ ಮೂರು ದಿನಗಳು ಒಬ್ಬರೇ ಒಬ್ಬರೂ ಕೂಡಾ ಡಿಸ್ಚಾರ್ಜ್ ಆಗಿಲ್ಲ. ಹೀಗಾಗಿಯೇ ಬೆಡ್‌ಗಾಗಿ ಪರದಾಡ್ತಿದ್ದಾರೆ ಬೆಂಗಳೂರಿನ ಕೊರೊನಾ ಸೋಂಕಿತರು.

ಸೋಂಕಿತರು ಮತ್ತು ಗುಣಮುಖರಾದವರ ಡಾಟಾ ಇಲ್ಲಿದೆ ನೋಡಿ ಇನ್ನೂ ಬಿಡಿಸಿ ಹೇಳಬೇಕೆಂದ್ರೆ ಇಲ್ಲಿದೆ ನೋಡಿ ಕಳೆದ ವಾರದ ಪ್ರತಿ ದಿನದ ಲೆಕ್ಕಾಚಾರ. ಜೂನ್ 27ರಂದು 596 ಸೋಂಕಿತರು ಪತ್ತೆಯಾದ್ರೆ, ಗುಣಮುಖರಾಗಿ ಡಿಸ್ಚಾರ್ಜ್ ಆಗಿರೋರು ಏಳು ಜನರು. ಜೂನ್ 28ರಂದು 738ಹೊಸ ಕೇಸ್ ಪತ್ತೆಯಾದ್ರೆ, ಡಿಸ್ಚಾರ್ಜ್ ಆಗಿದ್ದು ಶೂನ್ಯ. ಜೂನ್ 29ರಂದು 738ಕೇಸ್ ವರದಿಯಾದ್ರೆ, ಡಿಸ್ಚಾರ್ಜ್ ಆಗಿದ್ದು ಮಾತ್ರ ಶೂನ್ಯ. ಜೂನ್ 30ರಂದು 503ಹೊಸ ಕೇಸ್ ಬಂದ್ರೆ, ಡಿಸ್ಚಾರ್ಜ್ ಆಗಿದ್ದು 10ಜನರು. ಜುಲೈ ಒಂದರಂದು 735ಕೇಸ್ ರಜಿಸ್ಟರ್‌ ಆದ್ರೆ, ಡಿಸ್ಚಾರ್ಜ್ ಆಗಿರೋದು ಮಾತ್ರ ಶೂನ್ಯ. ಜುಲೈ ಎರಡರಂದು 889ನೂತರ ಕೇಸ್‌ಗಳು ಪತ್ತೆಯಾದ್ರೆ, ಡಿಸ್ಚಾರ್ಜ್ ಆದೋರ ಸಂಖ್ಯೆ 30. ಇನ್ನು ಜುಲೈ 3ರಂದು ದಾಖಲೆಯ 994 ಹೋಸ ಕೇಸ್‌ಗಳು ವರದಿಯಾದ್ರೆ, ಸ್ವಲ್ಪ ಮಟ್ಟಿನ ರಿಲೀಫ್‌ ಎಂಬಂತೆ ಡಿಸ್ಚಾರ್ಜ್ ಆಗಿದ್ದು 197 ಜನರು.

ಈ ಅಂಕಿ ಅಂಶಗಳನ್ನ ನೋಡಿದ್ರೆನೇ ಗೊತ್ತಾಗುತ್ತೆ ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೆದಿನೇ ಹೆಚ್ಚಾಗ್ತಿದೆ. ಆದ್ರೆ ಇದೇ ಸಮಯದಲ್ಲಿ ಗುಣಮುಖರಾಗಿ ಡಿಸ್‌ಚಾರ್ಜ್‌ ಆಗ್ತಿರೋರ ಸಂಖ್ಯೆ ಮಾತ್ರ ಅಲ್ಪ ಪ್ರಮಾಣದಲ್ಲಿದೆ. ಹೀಗಾಗಿಯೇ ಇದ್ದ ಬೆಡ್‌ಗಳೆಲ್ಲಾ ಭರ್ತಿಯಾಗಿ ಹೊಸ ಸೋಂಕಿತರು ಪರದಾಡಬೇಕಾಗ್ತಿರೋದು. ಹೀಗಾಗಿಯೇ ಬೆಂಗಳೂರಿನ ಜನರು ಆತಂಕಕ್ಕೊಳಗಾಗಿರೋದು. ನಿಮ್ಮೆ ಎಚ್ಚರಿಕೆಯಲ್ಲಿ ನೀವಿರಿ.. ಅದೊಂದೇ ಈಗ ಮಾಡಬೇಕಿರುವುದು.

ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ