ಆಂಬ್ಯುಲೆನ್ಸ್​ ವಾಹನಕ್ಕೆ ದಾರಿ ಮಾಡಿಕೊಟ್ಟು, ಮತ್ತೆ ಧರಣಿ ಶುರು..

ಹಾಸನ: ಭೂ ಸುಧಾರಣೆ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ ವಿರೋಧಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಹಾಸನದಲ್ಲಿ ರಾಷ್ಟ್ರೀಯ ಹೆದ್ದಾರಿ-75ರಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಲಾಗುತ್ತಿದೆ. ಈ ವೇಳೆ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ಸಾಲುಗಟ್ಟಿ‌ ನಿಂತ ವಾಹನಗಳ ನಡುವೆ ಆಂಬ್ಯುಲೆನ್ಸ್ ಸಿಲುಕಿ ಮುಂದೆ ಹೋಗಲು ಪರದಾಡುತ್ತಿರುವಾಗ ಪೊಲೀಸರು ಸಾರ್ವಜನಿಕರು ಆಂಬ್ಯುಲೆನ್ಸ್ ಹೋಗಲು ದಾರಿ ಮಾಡಿಕೊಟ್ಟಿದ್ದಾರೆ. ಹಾಗೂ ಪ್ರತಿಭಟನಾಕಾರರು ತಮ್ಮ ಆಕ್ರೋಶಕ್ಕೆ ಲಗಾಮು ಹಾಕಿ ಧರಣಿ ನಿಲ್ಲಿಸಿ‌‌ ಆಂಬ್ಯುಲೆನ್ಸ್ ಹೋಗಲು ಅವಕಾಶ ಮಾಡಿಕೊಟ್ಟಿದ್ದಾರೆ. ಆಂಬ್ಯುಲೆನ್ಸ್ ಹೋದ ಬಳಿಕ ಮತ್ತೆ ಧರಣಿ […]

ಆಂಬ್ಯುಲೆನ್ಸ್​ ವಾಹನಕ್ಕೆ ದಾರಿ ಮಾಡಿಕೊಟ್ಟು, ಮತ್ತೆ ಧರಣಿ ಶುರು..
Updated By: ಸಾಧು ಶ್ರೀನಾಥ್​

Updated on: Sep 28, 2020 | 11:25 AM

ಹಾಸನ: ಭೂ ಸುಧಾರಣೆ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ ವಿರೋಧಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಹಾಸನದಲ್ಲಿ ರಾಷ್ಟ್ರೀಯ ಹೆದ್ದಾರಿ-75ರಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಲಾಗುತ್ತಿದೆ.

ಈ ವೇಳೆ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ಸಾಲುಗಟ್ಟಿ‌ ನಿಂತ ವಾಹನಗಳ ನಡುವೆ ಆಂಬ್ಯುಲೆನ್ಸ್ ಸಿಲುಕಿ ಮುಂದೆ ಹೋಗಲು ಪರದಾಡುತ್ತಿರುವಾಗ ಪೊಲೀಸರು ಸಾರ್ವಜನಿಕರು ಆಂಬ್ಯುಲೆನ್ಸ್ ಹೋಗಲು ದಾರಿ ಮಾಡಿಕೊಟ್ಟಿದ್ದಾರೆ. ಹಾಗೂ ಪ್ರತಿಭಟನಾಕಾರರು ತಮ್ಮ ಆಕ್ರೋಶಕ್ಕೆ ಲಗಾಮು ಹಾಕಿ ಧರಣಿ ನಿಲ್ಲಿಸಿ‌‌ ಆಂಬ್ಯುಲೆನ್ಸ್ ಹೋಗಲು ಅವಕಾಶ ಮಾಡಿಕೊಟ್ಟಿದ್ದಾರೆ. ಆಂಬ್ಯುಲೆನ್ಸ್ ಹೋದ ಬಳಿಕ ಮತ್ತೆ ಧರಣಿ ಮುಂದುವರೆಸಿದ್ದಾರೆ.

ಇದನ್ನೂ ಓದಿ: ರೈತರಿಂದ ಕರ್ನಾಟಕ ಬಂದ್: ಹಾಸನದಲ್ಲಿ ಹೆದ್ದಾರಿ ತಡೆದು ಆಕ್ರೋಶ