ನಡುರಸ್ತೆಯಲ್ಲಿ ಯುವತಿಯ ತಲೆಗೂದಲು ಹಿಡಿದು ದೆವ್ವ ಬಿಡಿಸಿದ ಜನ

ಕೊಪ್ಪಳ: ಯುವತಿಯೊಬ್ಬಳಿಗೆ ಜನರು ನಡುರಸ್ತೆಯಲ್ಲಿ ದೆವ್ವ ಬಿಡಿಸಿರುವ ಘಟನೆ ಜಿಲ್ಲೆಯ ಕುಕನೂರ ಹೊರವಲಯದಲ್ಲಿ ನಡೆದಿದೆ. 19 ವರ್ಷದ ಯುವತಿಯನ್ನು ಕುಕನೂರ ಹೊರವಲಯದಲ್ಲಿರುವ ಅರಳಿ ಮರದ ಕೆಳಗೆ ತಂದು ಜನರು ದೆವ್ವ ಬಿಡಿಸಲು ಯತ್ನಿಸಿದರು ಯುವತಿಗೆ ಕಳೆದ ಐದು ದಿನಗಳ ಹಿಂದೆ ದೆವ್ವ ಬಡಿದಿತ್ತಂತೆ‌. ಹಾಗಾಗಿ, ದೆವ್ವ ಬಡಿದ ಹಿನ್ನೆಲೆಯಲ್ಲಿ ಆಕೆಯನ್ನು ಅರಳಿ ಮರದ ಕೆಳಗೆ ಕರೆದುಕೊಂಡು ಬಂದ ಜನರು ಯುವತಿಯ ತಲೆಗೂದಲು ಹಿಡಿದು ದೆವ್ವ ಬಿಡಿಸಲು ಮುಂದಾದರು. ಹುಡುಗಿಯ ಮನೆಯವರು ದೆವ್ವ ಬಿಡಿಸಿದ ನಂತರ ಆಕೆಯ ಮೈಮೇಲೆ […]

ನಡುರಸ್ತೆಯಲ್ಲಿ ಯುವತಿಯ ತಲೆಗೂದಲು ಹಿಡಿದು ದೆವ್ವ ಬಿಡಿಸಿದ ಜನ

Updated on: Nov 04, 2020 | 2:19 PM

ಕೊಪ್ಪಳ: ಯುವತಿಯೊಬ್ಬಳಿಗೆ ಜನರು ನಡುರಸ್ತೆಯಲ್ಲಿ ದೆವ್ವ ಬಿಡಿಸಿರುವ ಘಟನೆ ಜಿಲ್ಲೆಯ ಕುಕನೂರ ಹೊರವಲಯದಲ್ಲಿ ನಡೆದಿದೆ. 19 ವರ್ಷದ ಯುವತಿಯನ್ನು ಕುಕನೂರ ಹೊರವಲಯದಲ್ಲಿರುವ ಅರಳಿ ಮರದ ಕೆಳಗೆ ತಂದು ಜನರು ದೆವ್ವ ಬಿಡಿಸಲು ಯತ್ನಿಸಿದರು

ಯುವತಿಗೆ ಕಳೆದ ಐದು ದಿನಗಳ ಹಿಂದೆ ದೆವ್ವ ಬಡಿದಿತ್ತಂತೆ‌. ಹಾಗಾಗಿ, ದೆವ್ವ ಬಡಿದ ಹಿನ್ನೆಲೆಯಲ್ಲಿ ಆಕೆಯನ್ನು ಅರಳಿ ಮರದ ಕೆಳಗೆ ಕರೆದುಕೊಂಡು ಬಂದ ಜನರು ಯುವತಿಯ ತಲೆಗೂದಲು ಹಿಡಿದು ದೆವ್ವ ಬಿಡಿಸಲು ಮುಂದಾದರು. ಹುಡುಗಿಯ ಮನೆಯವರು ದೆವ್ವ ಬಿಡಿಸಿದ ನಂತರ ಆಕೆಯ ಮೈಮೇಲೆ ನೀರು ಸುರಿದು ವಾಪಸ್ ಕರೆದುಕೊಂಡು ಹೋದರು. ಯುವತಿಗೆ ದೆವ್ವ ಬಿಡಿಸೋ ದೃಶ್ಯ ಮೊಬೈಲ್​ನಲ್ಲಿ ಸೆರೆಯಾಗಿದೆ.

Published On - 1:39 pm, Wed, 4 November 20