ಫಿಸಿಯೊಥೆರಪಿಗೆ ಬಂದಾಗ ಪುನೀತ್ ರಾಜಕುಮಾರ್​ಗೆ ಹೃದಯಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆ ಇರಲಿಲ: ಪಳನಿವೇಲ್, ಫಿಸಿಯೊಥೆರಪಿಸ್ಟ್

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Nov 03, 2021 | 4:32 PM

ಪಳನಿವೇಲ್ ಅವರು ಹೇಳುವ ಹಾಗೆ, ತಮ್ಮ ಕೇಂದ್ರದಲ್ಲಿ ಪುನೀತ್ ರಾಜಕುಮಾರ್ ಪಡೆದ ಫಿಸಿಯೋಥೆರಪಿ ಮತ್ತು ಹೃದಯ ಕಾಯಿಲೆ ನಡುವೆ ಯಾವುದೇ ಸಂಬಂಧವಿಲ್ಲ.

ಬಹಳ ಜನರಿಗೆ ಗೊತ್ತಿರದ ವಿಷಯವೆಂದರೆ ಪುನೀತ್ ರಾಜಕುಮಾರ್ ಅವರು ಆಕಸ್ಮಿಕ ಮರಣವನ್ನಪ್ಪುವ ಒಂದು ವಾರ ಮೊದಲು ಲೋಯರ್ ಬ್ಯಾಕ್ ಪೇನ್ ನಿಂದ ನರಳುತ್ತಿದ್ದರು ಮತ್ತು ಅದಕ್ಕಾಗಿ ಮಲ್ಲೇಶ್ವರಂನಲ್ಲಿರುವ ಸ್ಪೋರ್ಟ್ಸ್ ಫಿಸಿಯೋಥೆರಪಿ ಕೇಂದ್ರವೊಂದರಲ್ಲಿ ಚಿಕಿತ್ಸೆ ಪಡೆದಿದ್ದರು. ಈ ಸಮಸ್ಯೆಯೇನಾದರೂ ಅವರ ಒಟ್ಟಾರೆ ಅರೋಗ್ಯದ ಮೇಲೆ ಅದರಲ್ಲೂ ವಿಶೇಷವಾಗಿ ಅವರ ಹೃದಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿತೆ ಎನ್ನುವ ಸಂದೇಹ ಸಹಜವಾಗೇ ಮೂಡುತ್ತದೆ. ಇದನ್ನು ಕಂಡುಕೊಳ್ಳಲು ಟಿವಿ9 ಡಿಜಿಟಲ್ ವರದಿಗಾರ್ತಿ ಫಿಸಿಯೋಥೆರಪಿ ಕೇಂದ್ರ ನಡೆಸುತ್ತಿರುವ ಪಳನಿವೇಲ್ ಅವರೊಂದಿಗೆ ನಡೆಸಿದ ಮಾತುಕತೆ ಇಲ್ಲಿದೆ.

ಪಳನಿವೇಲ್ ಅವರು ಹೇಳುವ ಹಾಗೆ, ತಮ್ಮ ಕೇಂದ್ರದಲ್ಲಿ ಪುನೀತ್ ರಾಜಕುಮಾರ್ ಪಡೆದ ಫಿಸಿಯೋಥೆರಪಿ ಮತ್ತು ಹೃದಯ ಕಾಯಿಲೆ ನಡುವೆ ಯಾವುದೇ ಸಂಬಂಧವಿಲ್ಲ. ಪುನೀತ್ ಅವರು ಸಿನಿಮಾಗಳಲ್ಲಿ ಡ್ಯಾನ್ಸ್ ಮತ್ತು ಫೈಟ್ ಮಾಡುತ್ತಿದ್ದರಿಂದ ಆವರಿಗೆ ಲಿಂಬೊ ಸೈಕ್ಲಿಕ್ ಸ್ಟ್ರೇನ್ ಆಗಿತ್ತು. ಕೆಳ ಬೆನ್ನಿನ ಭಾಗದಿಂದ ತೊಡೆಯ ಮಧ್ಯಭಾಗದವರೆಗೆ ಕಾಡುವ ನೋವಿದು.

ಇದು ಕಾಯಿಲೆ ಅಲ್ಲ ಆದರೆ ಕೇವಲ ಮಸ್ಕ್ಯುಲರ್ ಪೇನ್ ಎಂದು ಪಳನಿವೇಲ್ ಹೇಳುತ್ತಾರೆ. ಸುಮಾರು ಒಂದು ವರ್ಷದ ಹಿಂದೆಯೂ ಅವರು ಇದೇ ನೋವಿಗಾಗಿ ಚಿಕಿತ್ಸೆ ಪಡೆದು ಹೋಗಿದ್ದರಂತೆ. ಈ ಬಾರಿ ಪುನೀತ್ ಮೂರು ಸಿಟ್ಟಿಂಗ್ ಗಳಿಗೆ ಬಂದಿದ್ದರಂತೆ.

ಪಳನಿವೇಲ್ ಅವರ ತಂದೆಯ ಆರೋಗ್ಯ ಸರಿಯಿಲ್ಲದ ಕಾರಣ ಅವರು ಊರಿಗೆ ಹೋಗಿದ್ದಾಗ ಮೊದಲಿನ ಎರಡು ಸೆಷನ್ ಗಳನ್ನು ಅವರ ಸಹಾಯಕರು ಮಾಡಿಸಿದ್ದರು ಮತ್ತು ಕೇವಲ ಮೂರನೇ ಸಿಟ್ಟಿಂಗ್ ಗೆ ತಾವು ಹಾಜರಿದ್ದ ಬಗ್ಗೆ ಅವರು ಹೇಳಿದರು. ದೇಹದ ಮೇಲೆ ಹೆಚ್ಚು ಸ್ಟ್ರೇನ್ ಆಗದ ಹಾಗೆ ಆಗಾಗ ಬ್ರೇಕ್ ತೆಗೆದುಕೊಳ್ಳಬೇಕು ಅಂತ ಸಲಹೆಯನ್ನು ಪಳನಿ ಅವರು ಪುನೀತ್​ಗೆ ನೀಡಿದ್ದರಂತೆ.

ಅವರು ತಮ್ಮಲ್ಲಿಗೆ ಬಂದಾಗ ಹಾರ್ಟ್ ಬೀಟ್, ಬಿಪಿ, ಸುಗರ್ ಲೆವೆಲ್ ಎಲ್ಲವೂ ನಾರ್ಮಲ್ ಆಗಿದ್ದವು. ಡ್ಯಾನ್ಸ್ ಸಂಬಂಧಿಸಿದ ಮಸ್ಕ್ಯುಲರ್ ನೋವು ಬಿಟ್ಟರೆ ಅವರ ಆರೋಗ್ಯ ಅದ್ಭುತವಾಗಿತ್ತು ಎಂದು ಪಳನಿ ಹೇಳುತ್ತಾರೆ.

ರಾಘವೇಂದ್ರ ರಾಜಕುಕಾರ ಅವರ ಮೂಲಕ ಪುನೀತ್​ಗೆ ತನ್ನ ಫಿಸಿಯೋಥೆರಪಿ ಕೇಂದ್ರದ ಬಗ್ಗೆ ಗೊತ್ತಾಗಿತ್ತು ಮತ್ತು ತಮ್ಮಲ್ಲಿಗೆ ಬಂದಾಗ ಎಲ್ಲರೊಂದಿಗೆ ಸ್ನೇಹದಿಂದ ನಗುತ್ತಾ ಮಾತಾಡುತ್ತಿದ್ದರು. ಆವರ ಬಾಡಿಗಾರ್ಡ್​​​​ಗಳನ್ನು ಕಾರಲ್ಲೇ ಬಿಟ್ಟು ಬರುತ್ತಿದ್ದರು ಎಂದು ಪಳನಿ ಹೇಳಿದರು.

ಇದನ್ನೂ ಓದಿ:  Puneeth Rajkumar: ಪುನೀತ್​ ಹೃದಯಾಘಾತದ ವೈರಲ್​ ವಿಡಿಯೋ ಅಸಲಿಯೋ ನಕಲಿಯೋ? ಇಲ್ಲಿದೆ ಫ್ಯಾಕ್ಟ್​ ಚೆಕ್​