ಕುಂಟುತ್ತಾ ಸಾಗಿದೆ ಸೋನಿ ವರ್ಲ್ಡ್ ಸಿಗ್ನಲ್ ಬಳಿ ಫ್ಲೈಓವರ್ ಕಾಮಗಾರಿ, ತಲೆಯ ಮೇಲೆ ಕೈಹೊತ್ತು ಕುಳಿತಿದೆ ಬಿಬಿಎಂಪಿ!

simplex infrastructure company :ಸಿಂಪ್ಲೆಕ್ಸ್ ಇನ್ಫ್ರಾಸ್ಟ್ರಕ್ಚರ್ಸ್ ಇತಿಹಾಸ ಕೆದಕಿದಾಗ ನಮ್ಮ ಮೆಟ್ರೋದ BMRCL ಸಂಸ್ಥೆಯ ಬಳಿಯೂ ಟೆಂಡರ್ ಪಡೆದಿತ್ತು. ಅಲ್ಲೂ ಕಾಮಗಾರಿ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ BMRCL ಗುತ್ತಿಗೆಯನ್ನು ರದ್ದು ಮಾಡಿತ್ತು. ಈಗ ಹಣವಿಲ್ಲವೆಂದು ಫ್ಲೈಓವರ್ ಕಾಮಗಾರಿ ಮಾಡದೇ ಸಿಂಪ್ಲೆಕ್ಸ್ ಇನ್ಫ್ರಾಸ್ಟ್ರಕ್ಚರ್ಸ್ ಕಂಪನಿ ಕೈಕಟ್ಟಿ ಕುಳಿತಿದೆ. ಹಾಗಾಗಿ ಸ್ವತಃ ಬಿಬಿಎಂಪಿಯೇ ಫ್ಲೈಓವರ್ ನಿರ್ಮಿಸಲು ನಿರ್ಧರಿಸಿದೆ.

ಕುಂಟುತ್ತಾ ಸಾಗಿದೆ ಸೋನಿ ವರ್ಲ್ಡ್ ಸಿಗ್ನಲ್ ಬಳಿ ಫ್ಲೈಓವರ್ ಕಾಮಗಾರಿ, ತಲೆಯ ಮೇಲೆ ಕೈಹೊತ್ತು ಕುಳಿತಿದೆ ಬಿಬಿಎಂಪಿ!
ಕುಂಟುತ್ತಾ ಸಾಗಿದೆ ಸೋನಿ ವರ್ಲ್ಡ್ ಸಿಗ್ನಲ್ ಬಳಿ ಫ್ಲೈಓವರ್ ಕಾಮಗಾರಿ, ತಲೆಯ ಮೇಲೆ ಕೈಹೊತ್ತು ಕುಳಿತಿದೆ ಬಿಬಿಎಂಪಿ!
Follow us
TV9 Web
| Updated By: ಸಾಧು ಶ್ರೀನಾಥ್​

Updated on:Nov 04, 2021 | 9:54 AM

ಬೆಂಗಳೂರು: ಸುಮಾರು 206 ಕೋಟಿ ರೂ. ವೆಚ್ಚದ ಸೋನಿ ವರ್ಲ್ಡ್ ಸಿಗ್ನಲ್ ಬಳಿಯ ಫ್ಲೈಓವರ್ ನಿರ್ಮಾಣ ಕಾಮಗಾರಿ ಎಂದಿನಂತೆ ಕುಂಟುತ್ತಾ ಸಾಗಿದೆ. ಇದಕ್ಕೆ ಕಾರಣವಾಗಿರುವುದು ಎಂದಿನಂತೆ BBMP ಯಡವಟ್ಟು. ಅರ್ಹತೆ ಇಲ್ಲದ ಕಂಪನಿಗೆ ಫ್ಲೈಓವರ್ ನಿರ್ಮಾಣ ಕಾಮಗಾರಿಯನ್ನು ಗುತ್ತಿಗೆ ನೀಡಿರುವ ಬಿಬಿಎಂಪಿ ಈಗ ತಲೆಯ ಮೇಲೆ ಕೈಹೊತ್ತುಕುಳಿತಿದೆ. ಸೋನಿ ವರ್ಲ್ಡ್ ಸಿಗ್ನಲ್ ಬಳಿ ಫ್ಲೈಓವರ್ ನಿರ್ಮಾಣ ಕಾಮಗಾರಿ ಗುತ್ತಿಗೆ ಪಡೆದಿದ್ದ ಸಿಂಪ್ಲೆಕ್ಸ್ ಇನ್ಫ್ರಾಸ್ಟ್ರಕ್ಚರ್ಸ್ ಲಿಮಿಟೆಡ್ ಕಂಪನಿಯು ಹಣ ಇಲ್ಲವೆಂದು ಫ್ಲೈಓವರ್ ಕಾಮಗಾರಿ ಕೈಬಿಟ್ಟಿದೆ.

ಸಿಂಪ್ಲೆಕ್ಸ್ ಇನ್ಫ್ರಾಸ್ಟ್ರಕ್ಚರ್ಸ್ ಕಂಪನಿ ನಮ್ಮಮೆಟ್ರೋಗೂ ಹೀಗೆಯೇ ಮಾಡಿತ್ತು: ಈಜಿಪುರ ದಿಂದ ಕೇಂದ್ರಿಯ ವಿದ್ಯಾಯಲದವರೆಗೂ 206 ಕೋಟಿ ರೂಪಾಯಿ ವೆಚ್ಚದಲ್ಲಿ ಫ್ಲೈಓವರ್ ಕಾಮಗಾರಿಗೆ ಗುತ್ತಿಗೆ ನೀಡಲಾಗಿತ್ತು. 2019ಕ್ಕೆ ಮುಕ್ತಾಯಗೊಳ್ಳಬೇಕಿದ್ದ 2.5 ಕಿಮೀ ಉದ್ದದ ಸೋನಿ ವರ್ಲ್ಡ್ ಸಿಗ್ನಲ್ ಬಳಿಯ ಫ್ಲೈಓವರ್ ಇದಾಗಿದೆ (Koramangala Flyover). ಸಿಂಪ್ಲೆಕ್ಸ್ ಇನ್ಫ್ರಾಸ್ಟ್ರಕ್ಚರ್ಸ್ ತನ್ನ ಬಳಿ ಅಷ್ಟೊಂದು ಹಣವಿಲ್ಲವೆಂದು ಕೈಚೆಲ್ಲಿ ಸುಮ್ಮನಾಗಿದೆ!

ಸಿಂಪ್ಲೆಕ್ಸ್ ಇನ್ಫ್ರಾಸ್ಟ್ರಕ್ಚರ್ಸ್ ಇತಿಹಾಸ ಕೆದಕಿದಾಗ ನಮ್ಮ ಮೆಟ್ರೋದ BMRCL ಸಂಸ್ಥೆಯ ಬಳಿಯೂ ಟೆಂಡರ್ ಪಡೆದಿತ್ತು. ಅಲ್ಲೂ ಕಾಮಗಾರಿ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ BMRCL ಗುತ್ತಿಗೆಯನ್ನು ರದ್ದು ಮಾಡಿತ್ತು. ಈಗ ಹಣವಿಲ್ಲವೆಂದು ಫ್ಲೈಓವರ್ ಕಾಮಗಾರಿ ಮಾಡದೇ ಸಿಂಪ್ಲೆಕ್ಸ್ ಇನ್ಫ್ರಾಸ್ಟ್ರಕ್ಚರ್ಸ್ ಕಂಪನಿ ಕೈಕಟ್ಟಿ ಕುಳಿತಿದೆ. ಹಾಗಾಗಿ ಸ್ವತಃ ಬಿಬಿಎಂಪಿಯೇ ಫ್ಲೈಓವರ್ ನಿರ್ಮಿಸಲು ನಿರ್ಧರಿಸಿದೆ.

BBMP ಅಧಿಕಾರಿಗಳು ಟೆಂಡರ್ ನೀಡುವಾಗ ಸಿಂಪ್ಲೆಕ್ಸ್ ಇನ್ಫ್ರಾಸ್ಟ್ರಕ್ಚರ್ಸ್ ಲಿಮಿಟೆಡ್ ಪರ ಭರ್ಜರಿ ಬ್ಯಾಟಿಂಗ್ ಮಾಡಿದ್ದರು. ಟೆಂಡರ್ ಪಡೆದ ಸಿಂಪ್ಲೆಕ್ಸ್ ಇನ್ಫ್ರಾಸ್ಟ್ರಕ್ಚರ್ಸ್ ಲಿಮಿಟೆಡ್ ಬಳಿ ದುಡ್ಡಿಲ್ಲದ ಕಾರಣ ಕಾಮಗಾರಿ ಮಾಡದೆ ಕೈ ಎತ್ತಿದೆ. ಇದೀಗ, ಅನ್ಯ ಮಾರ್ಗ ಕಾಣದೆ ಬಿಬಿಎಂಪಿ ಅಧಿಕಾರಿಗಳು (Bruhat Bengaluru Mahanagara Palike) ಫ್ಲೈಓವರ್ ನಿರ್ಮಾಣಕ್ಕೆ ಬೇಕಿರುವ ಸಾಮಗ್ರಿಗಳನ್ನ ಖುದ್ದು ತಾವೇ ಖರೀದಿ ಮಾಡುತ್ತಿದ್ದಾರೆ.

Also Read:

BBMP: ಘೋಷಣೆಗೆ ಸೀಮಿತವಾದ ಮಳೆ ಹಾನಿ ಪರಿಹಾರ; ಕೇವಲ ಪ್ರಮಾಣ ಪತ್ರ ಕೊಟ್ಟು ಸುಮ್ಮನಾದ ಬಿಬಿಎಂಪಿ

Raichurಲ್ಲಿ ಪ್ರತಿಭಟನೆ ವೇಳೆ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಕೇಸ್ | FIR |Tv9 kannada

(Flyover construction from Ejipura to kendriya vidyalaya simplex infrastructure company fails deliver the work bbmp to finish it)

Published On - 9:49 am, Thu, 4 November 21

‘ಯುಐ’ ಸಿನಿಮಾ ಗೆಲುವಿನ ಬಳಿಕ ಉಡುಪಿ ಕೃಷ್ಣನ ದರ್ಶನ ಪಡೆದ ಉಪೇಂದ್ರ
‘ಯುಐ’ ಸಿನಿಮಾ ಗೆಲುವಿನ ಬಳಿಕ ಉಡುಪಿ ಕೃಷ್ಣನ ದರ್ಶನ ಪಡೆದ ಉಪೇಂದ್ರ
ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ