ದೇವನಹಳ್ಳಿ: ಕ್ವಾರಂಟೈನ್ ಮುಗಿಸಿ ಮನೆಗೆ ಹೋದವರಿಗೆ ಕೊರೊನಾ ಸೋಂಕು ತಗುಲಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದಲ್ಲಿ 6 ಜನರಿಗೆ ಕೊರೊನಾ ಸೋಂಕು ತಗುಲಿರುವುದಾಗಿ ವರದಿ ಬಂದಿದೆ.
ವಾರದ ಹಿಂದೆ ಅಂಗಡಿ ಮಾಲೀಕನಿಗೆ ಕೊರೊನಾ ಸೋಂಕು ತಗುಲಿತ್ತು. ಹೀಗಾಗಿ ಆತನ ಕುಟುಂಬಸ್ಥರನ್ನು ಅಧಿಕಾರಿಗಳು 7 ದಿನಗಳ ಕಾಲ ಕ್ವಾರಂಟೈನ್ ಮಾಡಿದ್ದರು. ನಿನ್ನೆ ಸಂಜೆ 6 ಜನರನ್ನೂ ಮನೆಗೆ ವಾಪಸ್ ಕಳಿಸಿದ್ದರು. ಆದ್ರೆ ಮನೆಗೆ ವಾಪಸಾದ ಬಳಿಕ ಕೊವಿಡ್ ಟೆಸ್ಟ್ ವರದಿಯಲ್ಲಿ ಸೋಂಕಿರುವುದಾಗಿ ಮಾಹಿತಿ ಬಂದಿದೆ.
ಹೀಗಾಗಿ ಅಧಿಕಾರಿಗಳು ಮತ್ತೆ 6 ಜನರನ್ನ ಆಸ್ಪತ್ರೆಗೆ ಶಿಫ್ಟ್ ಮಾಡಿದ್ದಾರೆ. ಅನಿವಾರ್ಯವಾಗಿ 6 ಜನರು ಆಸ್ಪತ್ರೆಗೆ ಶಿಫ್ಟ್ ಆಗಿದ್ದಾರೆ. ಮತ್ತೊಂದೆಡೆ 6 ಜನ ಕ್ವಾರಂಟೈನ್‌ನಲ್ಲಿದ್ದಾಗ ಮನೆಗಳ್ಳತನ ನಡೆದಿತ್ತು. ಕ್ವಾರಂಟೈನ್ ಮುಗಿಸಿ ಮನೆಗೆ ವಾಪಸಾದಾಗ ಘಟನೆ ಬೆಳಕಿಗೆ ಬಂದಿತ್ತು. ಮನೆಯಲ್ಲಿ ಏನೇನು ಕಳ್ಳತನವಾಗಿದೆ ಎಂಬ ಮಾಹಿತಿ ಸಿಕ್ಕಿಲ್ಲ. ಕಳ್ಳತನವಾದ ಮನೆಯಲ್ಲಿ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.