ಹೆತ್ತ ಮಗನ ಎದೆ ಸೀಳಿ ಕೊಂದ ತಂದೆ, ಯಾಕೆ? ಎಲ್ಲಿ
ಬೆಳಗಾವಿ: ದನಕ್ಕೆ ಮೇವು ಹಾಕುವ ವಿಚಾರಕ್ಕೆ ತಂದೆ-ಮಗನ ನಡುವೆ ಗಲಾಟೆಯಾಗಿ ಅದು ಒಂದು ಜೀವದ ಅಂತ್ಯಕ್ಕೆ ಕಾರಣವಾದ ಘಟನೆ ಗೋಕಾಕ್ ತಾಲೂಕಿನ ಮೇಲ್ಮನಹಟ್ಟಿ ಗ್ರಾಮದಲ್ಲಿ ನಡೆದಿದೆ. ಯಮನಪ್ಪ(41) ಕೊಲೆಯಾದ ವ್ಯಕ್ತಿ ದನಕ್ಕೆ ಮೇವು ಹಾಕುವ ವಿಚಾರಕ್ಕೆ ತಂದೆ ಮಗನ ನಡುವೆ ಜಗಳ ಶುರುವಾಗಿದೆ. ಗಲಾಟೆ ತೀವ್ರ ಸ್ವರೂಪ ಪಡೆದು ಕೊನೆಗೆ ತಂದೆಯೇ ಮಗನ ಸಾವಿಗೆ ಕಾರಣರಾಗಿದ್ದಾರೆ. ಕುಡಿದ ಅಮಲಿನಲ್ಲಿದ್ದ ತಂದೆ ಬಾಳಪ್ಪ ಗುತ್ತಿಗೆ ಹೆತ್ತ ಮಗನ ಎದೆಗೆ ಕೊಡಲಿಯಿಂದ ಹೊಡೆದು ಕೊಲೆ ಮಾಡಿದ್ದಾರೆ. ನಿನ್ನೆ ಸಂಜೆ ನಡೆದ […]
ಬೆಳಗಾವಿ: ದನಕ್ಕೆ ಮೇವು ಹಾಕುವ ವಿಚಾರಕ್ಕೆ ತಂದೆ-ಮಗನ ನಡುವೆ ಗಲಾಟೆಯಾಗಿ ಅದು ಒಂದು ಜೀವದ ಅಂತ್ಯಕ್ಕೆ ಕಾರಣವಾದ ಘಟನೆ ಗೋಕಾಕ್ ತಾಲೂಕಿನ ಮೇಲ್ಮನಹಟ್ಟಿ ಗ್ರಾಮದಲ್ಲಿ ನಡೆದಿದೆ. ಯಮನಪ್ಪ(41) ಕೊಲೆಯಾದ ವ್ಯಕ್ತಿ
ದನಕ್ಕೆ ಮೇವು ಹಾಕುವ ವಿಚಾರಕ್ಕೆ ತಂದೆ ಮಗನ ನಡುವೆ ಜಗಳ ಶುರುವಾಗಿದೆ. ಗಲಾಟೆ ತೀವ್ರ ಸ್ವರೂಪ ಪಡೆದು ಕೊನೆಗೆ ತಂದೆಯೇ ಮಗನ ಸಾವಿಗೆ ಕಾರಣರಾಗಿದ್ದಾರೆ. ಕುಡಿದ ಅಮಲಿನಲ್ಲಿದ್ದ ತಂದೆ ಬಾಳಪ್ಪ ಗುತ್ತಿಗೆ ಹೆತ್ತ ಮಗನ ಎದೆಗೆ ಕೊಡಲಿಯಿಂದ ಹೊಡೆದು ಕೊಲೆ ಮಾಡಿದ್ದಾರೆ. ನಿನ್ನೆ ಸಂಜೆ ನಡೆದ ಘಟನೆ, ರಾತ್ರಿಯೇ ಮರಣೋತ್ತರ ಪರೀಕ್ಷೆ ನಡೆಸಿ ಅಂತ್ಯಸಂಸ್ಕಾರ ಮಾಡಲಾಗಿದೆ. ಗೋಕಾಕ್ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಬಾಳಪ್ಪ ಗುತ್ತಿಗೆಯನ್ನು ಪೊಲೀಸರು ಬಂಧಿಸಿದ್ದಾರೆ.