ಕೆಪಿಟಿಸಿಎಲ್ ಗೆಸ್ಟ್‌ಹೌಸ್‌ನಲ್ಲಿ ಅಧಿಕಾರಿಗಳ ಅದ್ದೂರಿ ವೀಕೆಂಡ್ ಎಣ್ಣೆ ಪಾರ್ಟಿ
ಬೆಳಗಾವಿ: ದೇಶ ಕೊರೊನಾ ಪೀಡೆಯಿಂದ ಒದ್ದಾಡುತ್ತಿದೆ. ಈ ಮಧ್ಯೆ ಸರ್ಕಾರಿ ಅಧಿಕಾರಿಗಳು ಎಣ್ಣೆ ನಮ್ದು, ಊಟ ನಿಮ್ದು ಅಂತ ತೂರಾಡಿದ್ದಾರೆ. ಲಾಕ್ಡೌನ್ ನಿಯಮ ಉಲ್ಲಂಘಿಸಿ ಸರ್ಕಾರಿ ಅಧಿಕಾರಿಗಳು ಎಣ್ಣೆ ಪಾರ್ಟಿ ಮಾಡಿದ್ದಾರೆ. ವೀಕೆಂಡ್ ಮೋಜಿನಲ್ಲಿದ್ದ ಅಧಿಕಾರಿಗಳು ಕಳೆದ ರಾತ್ರಿ ಬೆಳಗಾವಿಯ ನೆಹರು ನಗರದಲ್ಲಿರುವ ಕೆಪಿಟಿಸಿಎಲ್ ಗೆಸ್ಟ್‌ಹೌಸ್‌ನಲ್ಲಿ ಭರ್ಜರಿ ಎಣ್ಣೆ ಪಾರ್ಟಿ ಮಾಡಿದ್ದಾರೆ. ಕೆಪಿಟಿಸಿಎಲ್ ಅಧಿಕಾರಿಗಳು, ಸಿಬ್ಬಂದಿ ಸೇರಿ ಕುಡಿದು ಮಜಾ ಮಾಡಿದ್ದಾರೆ. ಸ್ಥಳೀಯರು ಮೊಬೈಲ್‌ನಲ್ಲಿ ದೃಶ್ಯ ಸೆರೆ ಹಿಡಿಯುತ್ತಿದ್ದಂತೆ ಕಾಲ್ಕಿತ್ತ ಅಧಿಕಾರಿಗಳು ಎಲ್ಲೆಂದರಲ್ಲಿ ಮದ್ಯದ ಬಾಟಲಿ ಬಿಸಾಡಿ […]
ಬೆಳಗಾವಿ: ದೇಶ ಕೊರೊನಾ ಪೀಡೆಯಿಂದ ಒದ್ದಾಡುತ್ತಿದೆ. ಈ ಮಧ್ಯೆ ಸರ್ಕಾರಿ ಅಧಿಕಾರಿಗಳು ಎಣ್ಣೆ ನಮ್ದು, ಊಟ ನಿಮ್ದು ಅಂತ ತೂರಾಡಿದ್ದಾರೆ. ಲಾಕ್ಡೌನ್ ನಿಯಮ ಉಲ್ಲಂಘಿಸಿ ಸರ್ಕಾರಿ ಅಧಿಕಾರಿಗಳು ಎಣ್ಣೆ ಪಾರ್ಟಿ ಮಾಡಿದ್ದಾರೆ.
ವೀಕೆಂಡ್ ಮೋಜಿನಲ್ಲಿದ್ದ ಅಧಿಕಾರಿಗಳು ಕಳೆದ ರಾತ್ರಿ ಬೆಳಗಾವಿಯ ನೆಹರು ನಗರದಲ್ಲಿರುವ ಕೆಪಿಟಿಸಿಎಲ್ ಗೆಸ್ಟ್‌ಹೌಸ್‌ನಲ್ಲಿ ಭರ್ಜರಿ ಎಣ್ಣೆ ಪಾರ್ಟಿ ಮಾಡಿದ್ದಾರೆ. ಕೆಪಿಟಿಸಿಎಲ್ ಅಧಿಕಾರಿಗಳು, ಸಿಬ್ಬಂದಿ ಸೇರಿ ಕುಡಿದು ಮಜಾ ಮಾಡಿದ್ದಾರೆ. ಸ್ಥಳೀಯರು ಮೊಬೈಲ್‌ನಲ್ಲಿ ದೃಶ್ಯ ಸೆರೆ ಹಿಡಿಯುತ್ತಿದ್ದಂತೆ ಕಾಲ್ಕಿತ್ತ ಅಧಿಕಾರಿಗಳು ಎಲ್ಲೆಂದರಲ್ಲಿ ಮದ್ಯದ ಬಾಟಲಿ ಬಿಸಾಡಿ ಪರಾರಿಯಾಗಿದ್ದಾರೆ.
Published On - 9:31 am, Sun, 28 June 20