ಸೀಲ್ಡೌನ್ ಏರಿಯಾಗಳಲ್ಲಿ TV9 Reality Check, ಬಯಲಾಯ್ತು ಜನ, ಅಧಿಕಾರಿಗಳ ನಿರ್ಲಕ್ಷ್ಯ
ಬೆಂಗಳೂರು: ನಗರದಲ್ಲಿ ಕೊರೊನಾ ಆರ್ಭಟ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ ಸೋಂಕಿತರು ಹೆಚ್ಚಿರುವ ಏರಿಯಾಗಳನ್ನು ಸೀಲ್ಡೌನ್ ಮಾಡಲು ಮುಂದಾಗಿದ್ರು. ಹೀಗಾಗಿ ಈಗಾಗಲೇ ಅನೇಕ ಏರಿಯಾಗಳು ಸೀಲ್ ಆಗಿವೆ. ಆದರೆ ಅಲ್ಲಿನ ಜನ ಇದ್ದಕ್ಕೆ ಕ್ಯಾರೆ ಅಂತಿಲ್ಲ. ಬೆಂಗಳೂರಲ್ಲಿ ಕೊರೊನಾ ಸ್ಫೋಟವಾಗ್ತಿದ್ರೂ ನಿರ್ಲಕ್ಷ್ಯವಹಿಸುತ್ತಿದ್ದಾರೆ. ಬಿಬಿಎಂಪಿ ಕೂಡ ಈ ಬಗ್ಗೆ ನಿರ್ಲಕ್ಷ್ಯವಹಿಸುತ್ತಿದೆ. ಸೀಲ್ಡೌನ್ ಆದ ಏರಿಯಾ ಕಡೆ ಬಿಬಿಎಂಪಿ ಸಿಬ್ಬಂದಿ ಮುಖ ಮಾಡ್ತಿಲ್ಲ. ಹೀಗಾಗಿ ಜನ ಬೆಕಾ ಬಿಟ್ಟಿಯಾಗಿ ಓಡಾಡುತ್ತಿದ್ದಾರೆ. ಕಲಾಸಿಪಾಳ್ಯದಲ್ಲಿ ಕಾಟಾಚಾರಕ್ಕೆ ಸೀಲ್ಡೌನ್ ಮಾಡಿದಂತಿದೆ. ಸೀಲ್ಡೌನ್ ಏರಿಯಾದಲ್ಲೂ ಜನರು ಬಿಂದಾಸ್ […]
ಬೆಂಗಳೂರು: ನಗರದಲ್ಲಿ ಕೊರೊನಾ ಆರ್ಭಟ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ ಸೋಂಕಿತರು ಹೆಚ್ಚಿರುವ ಏರಿಯಾಗಳನ್ನು ಸೀಲ್ಡೌನ್ ಮಾಡಲು ಮುಂದಾಗಿದ್ರು. ಹೀಗಾಗಿ ಈಗಾಗಲೇ ಅನೇಕ ಏರಿಯಾಗಳು ಸೀಲ್ ಆಗಿವೆ. ಆದರೆ ಅಲ್ಲಿನ ಜನ ಇದ್ದಕ್ಕೆ ಕ್ಯಾರೆ ಅಂತಿಲ್ಲ. ಬೆಂಗಳೂರಲ್ಲಿ ಕೊರೊನಾ ಸ್ಫೋಟವಾಗ್ತಿದ್ರೂ ನಿರ್ಲಕ್ಷ್ಯವಹಿಸುತ್ತಿದ್ದಾರೆ. ಬಿಬಿಎಂಪಿ ಕೂಡ ಈ ಬಗ್ಗೆ ನಿರ್ಲಕ್ಷ್ಯವಹಿಸುತ್ತಿದೆ.
ಸೀಲ್ಡೌನ್ ಆದ ಏರಿಯಾ ಕಡೆ ಬಿಬಿಎಂಪಿ ಸಿಬ್ಬಂದಿ ಮುಖ ಮಾಡ್ತಿಲ್ಲ. ಹೀಗಾಗಿ ಜನ ಬೆಕಾ ಬಿಟ್ಟಿಯಾಗಿ ಓಡಾಡುತ್ತಿದ್ದಾರೆ. ಕಲಾಸಿಪಾಳ್ಯದಲ್ಲಿ ಕಾಟಾಚಾರಕ್ಕೆ ಸೀಲ್ಡೌನ್ ಮಾಡಿದಂತಿದೆ. ಸೀಲ್ಡೌನ್ ಏರಿಯಾದಲ್ಲೂ ಜನರು ಬಿಂದಾಸ್ ಆಗಿ ಓಡಾಡುತ್ತಿದ್ದಾರೆ. ಸೀಲ್ಡೌನ್ ಏರಿಯಾದಲಿ ಪೊಲೀಸರು ಗಸ್ತು ತಿರುಗುತ್ತಿಲ್ಲ. ಕಲಾಸಿಪಾಳ್ಯದಲ್ಲಿ ಬಿಬಿಎಂಪಿ ಮಾರ್ಷಲ್ಸ್ ಕೂಡ ಕಾಣುತ್ತಿಲ್ಲ.
ಇನ್ನು ಮಿನರ್ವ ಸರ್ಕಲ್ ಬಳಿ ಅಕ್ರಮವಾಗಿ ಹೂವು ವ್ಯಾಪಾರ ಮಾಡಲಾಗುತ್ತಿದೆ. ಕೆ.ಆರ್.ಮಾರ್ಕೆಟ್ ಸೀಲ್ ಆದ ಹಿನ್ನೆಲೆಯಲ್ಲಿ ಮಿನರ್ವ ಸರ್ಕಲ್ ಬಳಿ ಹೂವಿನ ವ್ಯಾಪಾರಿಗಳು ಜಮಾವಣೆಗೊಂಡಿದ್ದಾರೆ. ಸೀಲ್ಡೌನ್ ರೂಲ್ಸ್ ಬ್ರೇಕ್ ಮಾಡಿ ವ್ಯಾಪಾರದಲ್ಲಿ ಬ್ಯುಸಿಯಾಗಿದ್ದಾರೆ. ಅಕ್ರಮ ವ್ಯಾಪಾರ ನಡೀತಿದ್ರೂ ಬಿಬಿಎಂಪಿ ಡೋಂಟ್ಕೇರ್ ಎಂಬಂತಿದೆ. ಇಷ್ಟೆಲ್ಲಾ ನಡೀತಿದ್ರೂ ಅಧಿಕಾರಿಗಳು ಮಾತ್ರ ಫುಲ್ ಸೈಲೆಂಟ್ ಆಗಿದ್ದಾರೆ.
ಚಿಕ್ಕಪೇಟೆಯಲ್ಲಿ ಹೆಸರಿಗೆ ಮಾತ್ರ ಸೀಲ್ಡೌನ್: ಚಿಕ್ಕಪೇಟೆಯಲ್ಲಿ ಹೆಸರಿಗೆ ಮಾತ್ರ ಸೀಲ್ಡೌನ್ ಮಾಡಲಾಗಿದೆ. ಅಲ್ಲನ ನಿವಾಸಿಗಳು, ವಾಹನ ಸವಾರರು ಬ್ಯಾರಿಕೇಡ್ ತೆಗೆದು ಬಿಂದಾಸ್ ಆಗಿ ಓಡಾಡುತ್ತಿದ್ದಾರೆ. ದೈಹಿಕ ಅಂತರವಿಲ್ಲ, ಮಾಸ್ಕ್ ಇಲ್ಲದೆ ಸುತ್ತಾಡುತ್ತಿದ್ದಾರೆ. ಇನ್ನು ಸೀಲ್ಡೌನ್ ಆಗಿರುವ ವಿವಿ ಪುರಂನಲ್ಲೂ ಇದೇ ರೀತಿಯ ನೋಟ ಕಂಡು ಬಂದಿದೆ. ಈ ರೀತಿ ಜನ, ಅಧಿಕಾರಿಗಳು ನಿರ್ಲಕ್ಷ್ಯವಹಿಸುತ್ತಿದ್ರೆ ಮುಂದೊಂದು ದಿನ ಭಾರಿ ಪರಿಣಾಮ ಎದುರಿಸಬೇಕಾಗುತ್ತೆ.
ವರದಿ ಬಳಿಕ ಎಚ್ಚೆತ್ತ ಪೊಲೀಸರು: ಚಿಕ್ಕಪೇಟೆಯಲ್ಲಿ ಸಾರ್ವಜನಿಕರ ಬೇಕಾಬಿಟ್ಟಿ ಓಡಾಟ ಕುರಿತು ಟಿವಿ9ನಲ್ಲಿ ವರದಿ ಪ್ರಸಾರವಾದ ಬಳಿಕ ಎಚ್ಚೆತ್ತ ಪೊಲೀಸರು ಸೀಲ್ಡೌನ್ ಪ್ರದೇಶದಲ್ಲಿ ಸಾರ್ವಜನಿಕರು ಗುಂಪು ಸೇರದಂತೆ ಪೊಲೀಸರಿಂದ ಗಸ್ತು. ಬ್ಯಾರಿಕೇಡ್ ಹಾಕಿ ರಸ್ತೆ ಬಂದ್ ಮಾಡಿದ್ದಾರೆ.