ಬೆಂಗಳೂರು: ರಾಜ್ಯ ಕಾಂಗ್ರೆಸ್ ಪಕ್ಷದ ಕಚೇರಿ ಇರುವ ಕ್ವೀನ್ಸ್ ರಸ್ತೆ ಸೇರಿದಂತೆ ರಾಜೀವ್ ಗಾಂಧಿ ಕಾಲೋನಿಯನ್ನೂ ಸಂಪೂರ್ಣವಾಗಿ ಬಂದ್ ಮಾಡಲಾಗಿದೆ.
ಶಿವಾಜಿನಗರದ ಚಾಂದಿನಿ ಚೌಕ್ನಲ್ಲಿ ಕೊರೊನಾ ಸೋಂಕು ಪತ್ತೆಯಾಗಿರುವ ಕಾರಣ ಈಗಾಗಲೇ ಆ ಏರಿಯಾ ಸೀಲ್ ಡೌನ್ ಆಗಿದೆ. ಹಾಗಾಗಿ ಶಿವಾಜಿನಗರದ ಪಕ್ಕದ ಏರಿಯಾಗಳಿಗೂ ಸೋಂಕಿನ ಸುಳಿ ವ್ಯಾಪಿಸುವ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆಯಿಂದಾಗಿ ಸ್ಥಳೀಯ ಪೊಲೀಸ್ರು ಏರಿಯಾ ಬಂದ್ ಮಾಡಿದ್ದಾರೆ.
ಚಾಂದನಿ ಚೌಕ್ ನ ಪಕ್ಕದಲ್ಲಿಯೇ ಇರುವ ರಾಜೀವ್ ಗಾಂಧಿ ಕಾಲೋನಿಗೂ ಟೆನ್ಷನ್ ಶುರುವಾಗಿದೆ. ಇದೀಗ ಕ್ವೀನ್ಸ್ ರಸ್ತೆ ಕ್ಲೋಸ್ ಮಾಡಿ, ರಾಜೀವ್ ಗಾಂಧಿ ಕಾಲೋನಿಗೂ ಬ್ಯಾರಿಕೇಡ್ ಹಾಕಲಾಗಿದೆ. ಸೊಂಕು ಹರಡದಂತೆ ಎಚ್ಚರ ವಹಿಸಿ, ಕ್ಲೋಸ್ ಮಾಡಲಾಗಿದೆ.
Published On - 11:09 am, Wed, 13 May 20