DC ಸಿಂಧೂರಿಗೆ ‘ಸಾಮ್ರಾಟ್’ ಅಶೋಕ್​ ಕ್ಲಾಸ್​.. ಜನಪ್ರತಿನಿಧಿಗಳ ಜೊತೆ ಹೇಗೆ ನಡೆದುಕೊಳ್ಳಬೇಕು ಎಂದು ತಿಳಿಸಿಕೊಟ್ಟಿದ್ದೇನೆ

| Updated By: ಸಾಧು ಶ್ರೀನಾಥ್​

Updated on: Nov 30, 2020 | 1:42 PM

ನಿನ್ನೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಭೇಟಿ ಮಾಡಿದ್ದರು. ಜನಪ್ರತಿನಿಧಿಗಳ ಜೊತೆ ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ತಿಳಿಸಿದ್ದೇನೆ. ಜನಸ್ಪಂದನಾ ಕಾರ್ಯಕ್ರಮದ ಉದ್ಘಾಟನೆಗೆ ಶಾಸಕರನ್ನು ಕರೆಯಲೇಬೇಕು ಅಂತಾ ತಿಳಿಸಿದ್ದೇನೆ ಎಂದು ಸಚಿವ ಅಶೋಕ್​ ಹೇಳಿದರು.

DC ಸಿಂಧೂರಿಗೆ ‘ಸಾಮ್ರಾಟ್’ ಅಶೋಕ್​ ಕ್ಲಾಸ್​.. ಜನಪ್ರತಿನಿಧಿಗಳ ಜೊತೆ ಹೇಗೆ ನಡೆದುಕೊಳ್ಳಬೇಕು ಎಂದು ತಿಳಿಸಿಕೊಟ್ಟಿದ್ದೇನೆ
ರೋಹಿಣಿ ಸಿಂಧೂರಿ (ಎಡ); ಆರ್​.ಅಶೋಕ್​ (ಬಲ)
Follow us on

ಮೈಸೂರು: ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಜನಪ್ರತಿನಿಧಿಗಳ ಗುದ್ದಾಟದ ಹಿನ್ನೆಲೆಯಲ್ಲಿ ಇಂದು ನಡೀಬೇಕಿದ್ದ ಜನಸ್ಪಂದನಾ ಕಾರ್ಯಕ್ರಮ ರದ್ದಾಗಿದೆ. ಈ ಕುರಿತು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.

ಈ ಬೆಳವಣಿಗೆಯಿಂದ ಸಾರ್ವಜನಿಕರಿಗೆ ಅನಾನುಕೂಲವಾಗಿದೆ. ಇದನ್ನು ನಾನು ಒಪ್ಪುತ್ತೇನೆ ಆದರೆ ಇಂದಿನಿಂದ ಅದು ಆಗಲ್ಲ. ನಿನ್ನೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಭೇಟಿ ಮಾಡಿದ್ದರು. ಜನಪ್ರತಿನಿಧಿಗಳ ಜೊತೆ ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ತಿಳಿಸಿದ್ದೇನೆ. ಜನಸ್ಪಂದನಾ ಕಾರ್ಯಕ್ರಮದ ಉದ್ಘಾಟನೆಗೆ ಶಾಸಕರನ್ನು ಕರೆಯಲೇಬೇಕು ಅಂತಾ ತಿಳಿಸಿದ್ದೇನೆ ಎಂದು ಸಚಿವ ಅಶೋಕ್​ ಹೇಳಿದರು.

ಮುಂದಿನ ದಿನದಲ್ಲಿ ಜಿಲ್ಲಾಧಿಕಾರಿ ನಡಿಗೆ ಗ್ರಾಮದ ಕಡೆಗೆ ಕಾರ್ಯಕ್ರಮ ಆಯೋಜಿಸಲಾಗುವುದು. ಈ ಕಾರ್ಯಕ್ರಮಕ್ಕೆ ಮಾರ್ಗಸೂಚಿ ಸಿದ್ಧಪಡಿಸಲಾಗುತ್ತಿದೆ. ಇದಕ್ಕೆ ಮಾರ್ಗಸೂಚಿಗಳನ್ನು ಸಿದ್ಧಪಡಿಸಲಾಗುತ್ತಿದೆ. ಈ ವೇಳೆ ಜನರ ಅಹವಾಲುಗಳನ್ನು ಕೇಳಲಾಗುತ್ತದೆ ಎಂದು ಅಶೋಕ್​ ಭರವಸೆ ಕೊಟ್ಟರು.

Published On - 11:32 am, Mon, 30 November 20