
ಕಲಬುರಗಿ: ಜಿಲ್ಲೆಯ ಜೇವರ್ಗಿ ತಾಲೂಕಿನ ಕಟ್ಟಿಸಂಗಾವಿ ಸೇತುವೆ ಮೇಲೆ ಸಾರ್ವಜನಿಕ ವಾಹನಗಳ ಸಂಚಾರವನ್ನು ಕಳೆದ 2 ದಿನದಿಂದ ಸ್ಥಗಿತಗೊಳಿಸಲಾಗಿದೆ. ಆದರೆ, ಇಂದು ಸಚಿವ R ಅಶೋಕ್ ಕಾರುಗಳು ಹೋಗುವುದಕ್ಕೆ ಮಾತ್ರ ಅವಕಾಶ ಕಲ್ಪಿಸಿಕೊಡಲಾಯಿತು. ಹಾಗಾಗಿ, ಜನಸಾಮಾನ್ಯರಿಗೊಂದು ನ್ಯಾಯ, ಸಚಿವರಿಗೊಂದು ನ್ಯಾಯ ಎಂದು ಸ್ಥಳೀಯರು ಆರೋಪಿಸಿದ್ದಾರೆ.


ಆದರೆ, ಸಚಿವರ ವಾಹನ ಸಂಚರಿಸಿದರೆ ಅಪಾಯವಿಲ್ವಾ ಎಂದು ಕಳೆದ ಎರಡು ದಿನಗಳಿಂದ ಸೇತುವೆ ಬಳಿ ಸಿಲುಕಿಕೊಂಡಿರುವ ಜನಸಾಮಾನ್ಯರು ಪ್ರಶ್ನಿಸಿದ್ದಾರೆ. ಸೇತುವೆ ಮೇಲೆ ಜನ ನಡೆದುಕೊಂಡು ಹೋಗಲೂ ಬಿಡ್ತಿರಲಿಲ್ಲ. ಈಗ ಏಕಾಏಕಿ ಸಚಿವರ ವಾಹನ ಸಂಚಾರಕ್ಕೆ ಹೇಗೆ ಬಿಟ್ಟಿದ್ದೀರಿ ಎಂದು ಅಧಿಕಾರಿಗಳ ವಿರುದ್ಧ ಸ್ಥಳೀಯರು, ಸವಾರರ ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ಕಳಪೆ ಕಾಮಗಾರಿ: ಸೇತುವೆ ಮುಳುಗಡೆಯಾಗದಿದ್ರೂ ವಾಹನ ಸಂಚಾರ ಬಂದ್
Published On - 3:53 pm, Fri, 16 October 20